ರಾತ್ರಿ ಮನೆಗೆ ಬಾ ಇಬ್ರೂ ಸೇರಿ ಸೋಪ್ ಮಾಡಾಣ : ಜೂಲಿ ಲಕ್ಷ್ಮೀ ಮಗಳಿಗೆ ಇದೆಂಥಾ ಟಾರ್ಚರ್!

Published : Apr 21, 2023, 03:26 PM IST
ರಾತ್ರಿ ಮನೆಗೆ ಬಾ ಇಬ್ರೂ ಸೇರಿ ಸೋಪ್ ಮಾಡಾಣ : ಜೂಲಿ ಲಕ್ಷ್ಮೀ ಮಗಳಿಗೆ ಇದೆಂಥಾ ಟಾರ್ಚರ್!

ಸಾರಾಂಶ

ನಟಿ ಜೂಲಿ ಲಕ್ಷ್ಮೀ ಮಗಳು ಐಶ್ವರ್ಯಾ ಭಾಸ್ಕರನ್ ಹಿಂದಿನಿಂದಲೂ ತನ್ನ ನೇರ ಮಾತಿಗೆ ಹೆಸರಾದವರು. ಇದೀಗ ಗಣ್ಯ ವ್ಯಕ್ತಿಯೊಬ್ಬ ಆಕೆಗೆ ರಾತ್ರಿ ಮನೆಗೆ ಬಾ, ಇಬ್ರೂ ಸೇರಿ ಸೋಪ್ ಮಾಡೋಣ ಅನ್ನುತ್ತ ಕರೆ ಮಾಡಿದ್ದಾನೆ. ಈ ಬಗ್ಗೆ ಐಶ್ವರ್ಯಾ ಹೇಳಿದ ಮಾತು ವೈರಲ್ ಆಗಿದೆ.

ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ಜ್ಯೂಲಿ ಸಿನಿಮಾದ ಬಳಿಕ ಜ್ಯೂಲಿ ಲಕ್ಷ್ಮಿ ಅಂತಲೇ ಫೇಮಸ್‌ ಆದವರು ನಟಿ ಲಕ್ಷ್ಮೀ. ಇವರಿಗೆ ಮೊದಲ ಪತಿ ಭಾಸ್ಕರನ್ ಅವರಿಂದ ಜನಿಸಿದ ಮಗಳು ಐಶ್ವರ್ಯಾ ಭಾಸ್ಕರನ್. ಇದೀಗ ಕೆಲವು ಸಮಯದ ಹಿಂದೆ ಈ ನಟಿ ಹೇಳಿದ ಮಾತುಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಐಶ್ವರ್ಯಾ ಅವರ ಫ್ಯಾಮಿಲಿ ಲೈಫ್‌ ಮೊದಲಿಂದಲೂ ಸಮಸ್ಯೆಯಲ್ಲಿದೆ. ಅವರಿಗೂ ಮದುವೆಯಾಗಿ ಮಗಳಿದ್ದಾಳೆ. ಮೊದಲ ಗಂಡ ತನ್ವೀರ್ ಅಹಮ್ಮದ್ ಅವರ ಜೊತೆ ದಶಕಗಳ ಹಿಂದೆಯೇ ಡಿವೋರ್ಸ್ ಆಗಿದೆ. ಬಳಿಕ ರಾಜು ಮಣಿ ಅವರ ಜೊತೆಗೆ ಇತ್ತೀಚೆಗಿನವರೆಗೂ ವೈವಾಹಿಕ ಸಂಬಂಧ ಇತ್ತು. ಇದೀಗ ಅವರಿಂದಲೂ ಬೇರೆ ಆಗಿದ್ದಾರಂತೆ. ಲಕ್ಷ್ಮೀ ಮತ್ತು ಭಾಸ್ಕರ್ ಅವರ ಪುತ್ರಿ ಆಗಿದ್ದೂ ಲೈಫಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸಿರೋ ಈ ಹೆಣ್ಣುಮಗಳಿಗೆ ಇದೀಗ ಐವತ್ತರ ಹರೆಯದಲ್ಲೂ ಅಶ್ಲೀಲ ಮೆಸೇಜ್‌ಗಳು ಬರುತ್ತಿವೆಯಂತೆ.

ಐಶ್ವರ್ಯಾ ಕೆಲ ಸಮಯದ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಈಕೆ ಆಡಿರೋ ಮಾತು ಇದೀಗ ವೈರಲ್ ಆಗಿದೆ. ಪತಿಯಿಂದ ದೂರಾದ ಬಳಿಕ ತಾನು ಅನುಭವಿಸುತ್ತಿರೋ ಲೈಂಗಿಕ ದೌರ್ಜನ್ಯದ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಕೆಟ್ಟ ಕೆಟ್ಟ ಮೆಸೇಜ್‌ಗಳನ್ನು ಕಳಿಸುತ್ತಿರುವ ಕೆಲವರ ಬಗ್ಗೆ ಐಶ್ವರ್ಯಾ ಹೇಳಿಕೊಂಡಿದ್ದಾರೆ. ಜೊತೆಗೆ ಸಾಕಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫೋಟೋ ಸಮೇತ ಕೆಟ್ಟ ಕೆಟ್ಟ ಮೆಸೇಜ್‌ಗಳನ್ನು ಕೂಡ ಕಳಿಸುತ್ತಾರಂತೆ. ಆ ಫೋಟೋಗಳು, ಮೆಸೇಜ್‌ಗಳು ತನಗೆ ಮಾನಸಿಕವಾಗಿ ತುಂಬ ಹಿಂಸೆ ಕೊಟ್ಟಿವೆ ಎಂದು ನಟಿ ಹೇಳಿಕೊಂಡಿದ್ದಾರೆ.

ಐಟಂ ಹಾಡಿನಲ್ಲಿ ಕುಣಿಯಲು ಭರ್ಜರಿ ಸಂಭಾವನೆ ಬೇಡಿಕೆ ಇಟ್ಟ 'ಕಬ್ಜ' ಸುಂದರಿ ಶ್ರೀಯಾ

ಅದರಲ್ಲೊಬ್ಬ ಸಮಾಜದಲ್ಲಿ ಹೆಸರಿರೋ ಗಣ್ಯ ವ್ಯಕ್ತಿಯಂತೆ. ಆತ ಇವರಿಗೆ ಬಹಳ ಕೆಟ್ಟದಾಗಿ ಮೆಸೇಜ್ ಮಾಡಿರೋದಾಗಿ ನಟಿ ಹೇಳಿಕೊಂಡಿದ್ದಾರೆ. 'ಈ ರಾತ್ರಿ ನನ್ನ ಮನೆಗೆ ಬಾ, ಇಬ್ಬರೂ ಸೇರ್ಕೊಂಡೇ ಸೋಪ್ ನೋಡೋಣ' ಎಂದು ಆ ವ್ಯಕ್ತಿ ಮೆಸೇಜ್ ಕಳಿಸಿರೋದಾಗಿ ನಟಿ ಹೇಳಿಕೊಂಡಿದ್ದಾರೆ. ಆತನ ಈ ಮಾತು ಐಶ್ವರ್ಯಾ ಅವರಿಗೆ ಬಹಳ ನೋವಿನ ಜೊತೆಗೆ ಸಿಟ್ಟೂ ತರಿಸಿದೆ. 'ಸಿನಿಮಾಗಳಲ್ಲಿ ಸರಿಯಾದ ಅವಕಾಶ ಸಿಗದಿದ್ದ ಮಾತ್ರಕ್ಕೆ, ನಾನು ಸಿಂಗಲ್ ಆಗಿರೋ ಕಾರಣಕ್ಕೆ ನನ್ನನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ನಾನು ಹೊಟ್ಟೆ ಹೊರೆದುಕೊಳ್ಳದು ಸೋಪ್ ಮಾರುತ್ತೀನೇ ಹೊರತು ನನ್ನನ್ನು ಮಾರಿಕೊಳ್ಳಲ್ಲ" ಎಂದು ಐಶ್ವರ್ಯಾ ಹೇಳಿದ್ದಾರೆ.

ನಟಿಯ ಈ ಮಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಕೆ ಈ ಹಿಂದೆ ತನಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲ. ಜೀವನ ಬಹಳ ಕಷ್ಟವಾಗ್ತಿದೆ. ಟಾಯ್ಲೆಟ್ ತೊಳಿಯೋ ಕೆಲ್ಸ ಆದ್ರೂ ಮಾಡೋಕೆ ರೆಡಿ ಇದ್ದೀನಿ. ನನಗೆ ಸ್ವಾಭಿಮಾನದ ಬದುಕು ಬೇಕು' ಎಂದಿದ್ದರು. ಈ ಹೊತ್ತಿಗೆ ಸದ್ಯಕ್ಕೆ ಹೊಟ್ಟೆಪಾಡಿಗಾಗಿ ಸೋಪು ಮಾರುತ್ತಿರೋದಾಗಿ ಹೇಳಿಕೊಂಡು ತನ್ನ ಲೈಫಿನ ಕಷ್ಟಗಳ ಬಗ್ಗೆ ವಿವರಿಸಿದ್ದರು.

ಸಲ್ಮಾನ್ ಖಾನ್‌ನಿಂದ ದೂರ ಉಳಿ; ರಾಖಿ ಸಾವಂತ್‌ಗೆ ಜೀವ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್!

ಇದೀಗ ಸೋಪ್ ಮಾರಾಟ ಐಶ್ವರ್ಯಾ ಅವರಿಗೆ ಆದಾಯದ ಮೂಲ ಆಗಿದೆಯಂತೆ. ಇನ್ನೊಂದು ಕಡೆ ಅವರು ಧಾರ್ಮಿಕತೆ, ಆಧ್ಯಾತ್ಮ, ಸೋಪ್ ರೆಡಿ ಮಾಡುವುದು, ಅಡುಗೆ ಮಾಡುವ ವಿಡಿಯೋಗಳನ್ನು ಅವರು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ, ಅಷ್ಟೇ ಅಲ್ಲದೆ ಯೂಟ್ಯೂಬ್‌ನಲ್ಲಿ ಅವರು ಸೋಪ್‌ನ ಪ್ರಚಾರ ಮಾಡುತ್ತಾರೆ.

ಐಶ್ವರ್ಯಾ ಅವರ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಒಂದಿಷ್ಟು ಮಂದಿ ಐಶ್ವರ್ಯಾ ಅವರನ್ನು ಸಮಾಧಾನ ಮಾಡೋ ಮಾತುಗಳನ್ನೂ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?