The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

By Suvarna News  |  First Published May 8, 2023, 5:42 PM IST

ದಿ ಕೇರಳ ಸ್ಟೋರಿ ಚಿತ್ರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ನಟಿ ಶಬನಾ ಅಜ್ಮಿ ಈ ಕುರಿತು ಏನು ಹೇಳಿದ್ದಾರೆ?
  


ಸುದೀಪ್ತೋ ಸೇನ್ (Sudipto Sen) ನಿರ್ದೇಶನದ The Kerala Story ಇದಾಗಲೇ ತಲ್ಲಣ ಸೃಷ್ಟಿಸಿದೆ. ಹಿಂದೂ ಮಕ್ಕಳ ಮತಾಂತರ, ಬರ್ಬರ ಹತ್ಯೆ, ದೇಹ ಪೀಸ್​ ಪೀಸ್​ ಮಾಡಿ ಫ್ರಿಜ್​ನಲ್ಲಿ ಶವ ಇಟ್ಟಿರುವುದು... ಇಂಥ ಹಲವು ಬೆಚ್ಚಿಬೀಳಿಸುವ ಘಟನೆಗಳು ವರದಿಯಾಗುತ್ತಿರುವ ನಡುವೆಯೇ. ಕೇರಳದ ಯುವತಿಯರು ಅದರಲ್ಲಿಯೂ ಅಲ್ಲಿನ ಕ್ರೈಸ್ತ ಸಮುದಾಯಕ್ಕೆ ಸೇರಿದವರನ್ನು ಹೇಗೆಲ್ಲಾ  ಇಸ್ಲಾಂಗೆ ಪರಿವರ್ತಿಸಲಾಗುತ್ತಿದೆ ಮತ್ತು ಐಸಿಸ್‌ಗೆ ಸೇರ್ಪಡೆಗೊಳಿಸಲಾಗುತ್ತಿದೆ  ಎಂಬ ಸತ್ಯ ಘಟನೆಯನ್ನು ಆಧರಿಸಿ ತಯಾರಿಸಲಾದ  The Kerala Storyಯಲ್ಲಿ ತೋರಿಸಲಾಗಿದೆ.  ಬಣ್ಣಬಣ್ಣದ ಮಾತುಗಳಿಗೆ ಮರುಳಾಗಿ, ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು, ದುಬಾರಿ ಬೆಲೆ ಬಾಳುವ ಕಾರು, ಬೈಕ್​ಗಳಿಂದ ಕಾಲೇಜು ಯುವತಿಯರನ್ನು ಮರುಳು ಮಾಡಿ ಹೇಗೆ ತಮ್ಮ ಪ್ರೇಮಪಾಶಕ್ಕೆ ಒಳಪಡಿಸಿಕೊಂಡು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ಈ ಚಿತ್ರ ಬಿಡುಗಡೆಗೊಂಡಿದೆ. ಯಾವುದೇ ಧರ್ಮದ ವಿರುದ್ಧ ಈ ಚಿತ್ರ ಇಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದರೂ, ಕೇರಳ ಸರ್ಕಾರ, ಕಾಂಗ್ರೆಸ್​ ಸೇರಿದಂತೆ ಒಂದು ವರ್ಗಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಹೆಣ್ಣುಮಕ್ಕಳನ್ನು ಹೆರುವ ಯಂತ್ರಗಳನ್ನಾಗಿ ಮಾಡಿ, ಹುಟ್ಟುವ ಮಗುವನ್ನು ಅವರಿಂದ ಬೇರ್ಪಡಿಸಲಾಗುತ್ತದೆ, ನಂತರ ಮಕ್ಕಳನ್ನು ಕರೆದುಕೊಂಡು ಹೋಗಿ ಆತ್ಮಹತ್ಯಾ ಬಾಂಬರ್​ಗಳನ್ನಾಗಿ ತಯಾರು ಮಾಡುವ ಭಯಾನಕ ಸತ್ಯ ಚಿತ್ರಣವನ್ನು ಈ ಚಿತ್ರದಲ್ಲಿ ಬಿಚ್ಚಿಡಲಾಗಿದೆ ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ. ಅದೇನೇ ಇದ್ದರೂ ಇಲ್ಲಿ ಬುದ್ಧಿ ಕಲಿಯಬೇಕಾದದ್ದು ಹುಡುಗಿಯರು. ಆಮಿಷಗಳಿಗೆ ಬಲಿಯಾದರೆ ಮುಂದೆ ಅವರ ಹೆಣ ಕೂಡ ಸಿಗದ ಕೂಪಕ್ಕೆ ಅವರು ಹೋಗುತ್ತಾರೆ ಎನ್ನುವುದನ್ನು ಹುಡುಗಿಯರು ಕಲಿಯಬೇಕಿದೆ ಎನ್ನುವುದು ಈ ಚಿತ್ರದ ಹೂರಣ ಎಂದಿದ್ದಾರೆ  ನಿರ್ಮಾಪಕರು. ಬ್ರೇನ್​ವಾಷ್​ (Brainwash) ಮಾಡಿದ ತಕ್ಷಣ ಅಸಲಿ ಯಾವುದು, ನಕಲಿ ಯಾವುದು ಎನ್ನುವ ವಿವೇಚನೆಯನ್ನು ಮಾಡುವುದು ಹೆಣ್ಣುಮಕ್ಕಳ ಕೆಲಸವಾಗಿದೆ. ದಿನನಿತ್ಯವೂ ನಡೆಯುತ್ತಿರುವ ಹತ್ತಾರು ಅತ್ಯಂತ ಕರಾಳ ಘಟನೆಗಳನ್ನು ಕೇಳುತ್ತಿದ್ದರೂ ತಾವು ಹೇಗೆ ಬ್ರೇನ್​ವಾಷ್​ಗೆ ಒಳಗಾಗುತ್ತಿದ್ದೇವೆ ಎನ್ನುವುದನ್ನು ತಿಳಿಯದ ಯುವತಿಯರಿಗೆ ಈ ಚಿತ್ರ ದಾರಿ ತೋರುತ್ತದೆ ಎನ್ನಲಾಗಿದೆ.

Tap to resize

Latest Videos

The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ

ಇಂಥ ಚಿತ್ರ ಬ್ಯಾನ್​ (Ban) ಮಾಡಬೇಕೆಂದು ಒತ್ತಾಯ ಕೇಳಿಬರುತ್ತಿರುವ ನಡುವೆಯೇ, ಹಲವು ಗಣ್ಯರು ಬ್ಯಾನ್​ ವಿರುದ್ಧ ದನಿ ಎತ್ತಿದ್ದಾರೆ.ಅವರಲ್ಲಿ ಒಬ್ಬರು ನಟಿ ಶಬನಾ ಅಜ್ಮಿ. ಟ್ವಿಟರ್‌ನಲ್ಲಿ ಈ ಕುರಿತು ಮಾತನಾಡಿರುವ ನಟಿ,  'ದಿ ಕೇರಳ ಸ್ಟೋರಿಯನ್ನು ಬ್ಯಾನ್ ಮಾಡಬೇಕು ಎಂದು ಹೇಳುವುದು ಖಂಡನಾರ್ಹ. ಒಮ್ಮೆ ಚಲನಚಿತ್ರವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಅಂಗೀಕರಿಸಿದ ನಂತರ ಯಾರಿಗೂ ಹೆಚ್ಚುವರಿ ಸಾಂವಿಧಾನಿಕ ಅಧಿಕಾರವಾಗಲು ಹಕ್ಕಿಲ್ಲ. ಈ ಚಿತ್ರಕ್ಕೂ ಸರ್ಟಿಫಿಕೇಶನ್​ ಸಿಕ್ಕಿರುವಾಗ ಆ ರೀತಿ ಹೇಳುವುದು ಕಾನೂನು ಕ್ರಮ ಅಲ್ಲ' ಎಂದಿದ್ದಾರೆ. ಇದೇ ವೇಳೆ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಹೇಳುವುದು, ಆಮೀರ್​ ಖಾನ್ ಅವರ  ಲಾಲ್ ಸಿಂಗ್ ಚಡ್ಡಾ ವಿರೋಧಿಸಿದಂತೆಯೇ. ಅದನ್ನು ಕೂಡ ಬೈಕಾಟ್​  ಮಾಡುವುದು ಸರಿಯಲ್ಲ ಎಂದಿದ್ದಾರೆ.
 
ಅಂದಹಾಗೆ, ಮೊದಲ ದಿನವಾದ ಮೇ 5 ರಂದು, ಚಿತ್ರವು ಭಾರತದಲ್ಲಿ ರೂ 8.03 ಕೋಟಿ (ನೆಟ್) ಗಳಿಸುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಚಿತ್ರವು ಮೇ 3, ಮೇ 7 ರಂದು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ರೂ 16 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಕೇರಳ ಕಥೆಯ ಒಟ್ಟು ಕಲೆಕ್ಷನ್ ಈಗ ಭಾರತದಲ್ಲಿ 35.25 ಕೋಟಿ ರೂ. ಎಲ್ಲರಿಗೂ ಇದು ಪಾಠವಾಗಬೇಕಿದೆ ಎನ್ನುವ ಕಾರಣಕ್ಕೆ  ಮಧ್ಯಪ್ರದೇಶ ಸರ್ಕಾರ ಚಿತ್ರಕ್ಕೆ ವಿನಾಯಿತಿ ಘೋಷಿಸಿದೆ. ನಾವು ಈಗಾಗಲೇ ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿ ಮಾಡಿದ್ದೇವೆ. ಈ ಚಿತ್ರವು ಜಾಗೃತಿ ಮೂಡಿಸುತ್ತದೆ. ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು. ಪೋಷಕರು, ಮಕ್ಕಳು ಮತ್ತು ಹೆಣ್ಣುಮಕ್ಕಳು ಇದನ್ನು ನೋಡಬೇಕು. ಅದಕ್ಕಾಗಿಯೇ ಮಧ್ಯಪ್ರದೇಶ ಸರ್ಕಾರ ದಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸುತ್ತಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan) ಹೇಳಿದ್ದಾರೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿನಾಯಿತಿ ಘೋಷಿಸುವಂತೆ ಬಿಜೆಪಿ ಘಟಕ ಹೋರಾಡುತ್ತಲೇ ಇದೆ. ನಿನ್ನೆ ಬೆಂಗಳೂರಿನ ಗಡುಡಾ ಮಾಲ್​ನಲ್ಲಿ  ಕಾಲೇಜು ಹುಡುಗಿಯರಿಗೆ ಪ್ರದರ್ಶನದಲ್ಲಿ ವಿನಾಯಿತಿ ನೀಡಲಾಗಿತ್ತು. 

ಹಲವರ ನಿದ್ದೆಗೆಡಿಸಿರೋ ದಿ ಕೇರಳ ಸ್ಟೋರಿ ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು?

 

Those who speak of banning Kerala Story are as wrong as those who wanted to ban Aamir Khan’s Singh Chaadha. Once a film has been passed by the Central Board of Film Certification nobody has the right to become an extra constitutional authority .

— Azmi Shabana (@AzmiShabana)
click me!