ಆಂಜೆಲಿನಾ ಜೋಲಿಯ ಬೆಡ್‌ರೂಂ ಚೂರಿ ಮತ್ತು ಇತರರ ಸೆಕ್ಸ್ ಅಡಿಕ್ಟ್ಸ್

Suvarna News   | Asianet News
Published : Jun 28, 2021, 05:24 PM IST
ಆಂಜೆಲಿನಾ ಜೋಲಿಯ ಬೆಡ್‌ರೂಂ ಚೂರಿ ಮತ್ತು ಇತರರ ಸೆಕ್ಸ್ ಅಡಿಕ್ಟ್ಸ್

ಸಾರಾಂಶ

ಏಂಜೆಲಿನಾ ಜೋಲಿ ಬೆಡ್‌ರೂಮಿನಲ್ಲಿ ಚೂರಿಗಳನ್ನು ಇಟ್ಟುಕೊಳ್ಳುತ್ತಿದ್ದುದೇಕೆ? ಲೈಂಗಿಕ ಗೀಳು ಹೊಂದಿರುವ ಸೆಲೆಬ್ರಿಟಿಗಳು ಖಯಾಲಿಗಳೇ ವಿಚಿತ್ರ ಕಣ್ರೀ.

ನಮ್ಮ ಬಾಲಿವುಡ್‌ನ ರಣವೀರ್ ಸಿಂಗ್, ಬಾಲಿವುಡ್‌ನ ಏಂಜೆಲಿನಾ ಜೋಲಿ ಸೇರಿದಂತೆ ಹಲವು ನಟ ನಟಿಯರು ಮಹಾನ್ ಸೆಕ್ಸ್ ಅಡಿಕ್ಟ್‌ಗಳು. ಇವರ ಖಯಾಲಿಗಳನ್ನು ನೋಡೋಣ ಬನ್ನಿ.

ಏಂಜೆಲಿನಾ ಜೋಲಿ
ಈಕೆ ಬೈಸೆಕ್ಸುಯಲ್ ಆಗಿದ್ದವಳು. ಬ್ರಾಡ್‌ ಪಿಟ್‌ನನ್ನು ಮದುವೆಯಾಗುವುದಕ್ಕೂ ಮುನ್ನ ಈಕೆಗೆ ಒಬ್ಬಳು ಪ್ರಿಯತಮೆ ಇದ್ದಳು. ಆಕೆ ಒಬ್ಬ ಮಾಡೆಲ್. ಅವಳ ಹೆಸರು ಜೆನ್ನೀ ಶಿಮಿಜು. ಈಕೆಯ ಜೊತೆಗೆ ಸಲಿಂಗಕಾಮದ ಸಂಬಂಧ ಈಕೆಗೆ ಇತ್ತು. ಶಿಮಿಜು ಒಂದು ಸಲ ಹೇಳಿದ ಪ್ರಕಾರ, ಜೋಲಿ ತನ್ನ ಬೆಡ್‌ರೂಮಿನಲ್ಲಿ ಚೂರಿಗಳನ್ನು ಇಟ್ಟುಕೊಂಡಿದ್ದಳಂತೆ; ಅವುಗಳನ್ನು ಬಳಸುವುದಕ್ಕೆ ಇಷ್ಟಪಡುತ್ತಿದ್ದಳಂತೆ. ಹೇಗೆ ಬಳಸುತ್ತಿದ್ದಳೋ ಅವಳಿಗೆ ಮಾತ್ರವೇ ಗೊತ್ತು. ಇದಕ್ಕೂ ಮುನ್ನ ಈಕೆಯ ಇನ್ನೊಬ್ಬ ಗಂಡನಿದ್ದ- ಬಿಲ್ಲಿ ಬಾಬ್‌ ಥಾರ್ನ್‌ಟನ್‌. ಇವನೂ ಸೆಕ್ಸ್ ಗೀಳು ಬಿಡಿಸಿಕೊಳ್ಳಲು ಥೆರಪಿಸ್ಟ್ ಬಳಿಗೆ ಓಡಿದ್ದವನು.

ಡೇನಿಯಲ್ ಕ್ರೇಗ್
ಬಾಂಡ್ ಮೂವಿಗಳ ಲೇಟೆಸ್ಟ್ ಬಾಂಡ್ ಆಗಿರುವ ಈ ಡೇನಿಯಲ್ ಕ್ರೇಗ್, ಹತ್ತಾರು ಹೆಂಗಳೆಯರ ಸಹವಾಸಕ್ಕೆ ಬಿದ್ದಿದ್ದ. ದಿನಾ ಒಬ್ಬರಲ್ಲ ಒಬ್ಬರ ಜೊತೆ ಆತನಿಗೆ ಮಲಗಲೇ ಬೇಕಿತ್ತು. ಇದನ್ನು ಆತ ಒಂದು ಇಂಟರ್‌ವ್ಯೂನಲ್ಲಿ ಹೇಳಿಕೊಂಡಿದ್ದ.

ರಾಮ್‌ ತೇರಿ ಗಂಗಾ ಮೈಲಿ ಬೋಲ್ಡ್‌ ನಟಿಯ ಹೊಸ ಆವತಾರ ಹೇಗಿದೆ ನೋಡಿ! ...

ಲಿಂಡ್ಸೇ ಲೊಹಾನ್
ಹಾಲಿವುಡ್‌ನ ಬೇಡಿಕೆಯ ಹೀರೋಯಿನ್‌ಗಳಲ್ಲಿ ಒಬ್ಬಳಾದ ಈಕೆ ಒಮ್ಮೆ, "ಒಬ್ಬಳೇ ಬೆಡ್‌ಗೆ ಹೋಗುವುದು ನಂಗೆ ಇಷ್ಟವಾಗುವುದಿಲ್ಲ'' ಎಂದು ಹೇಳಿಕೆ ನೀಡಿದ್ದಳು. ಈಕೆಗೆ ಹತ್ತಾರು ಬೆಡ್‌ರೂಂ ಗೆಳೆಯರೂ ಇದ್ದರು. ನಂತರ ಇವರು ಒಬ್ಬೊಬ್ಬರಾಗಿ ಆಚೆ ಬಂದು ತಾನೂ ಲಿಂಡ್ಸೆ ಜೊತೆ ಸಂಬಂದ ಹೊಂದಿದ್ದೆ ಎಂದು ಹೇಳಿದಾಗ, ಲಿಂಡ್ಸೇ ಅದನ್ನು ನಿರಾಕರಿಸಿದಳು.

ಮೈಕೆಲ್ ಡಗ್ಲಾಸ್
ಈ ಸುರಸುಂದರಾಂಗನಿಗೆ ತುಂಬಾ ಚೆಲುವೆಯಾದ ಹೆಂಡತಿಯೇನೋ ಇದ್ದಳು; ಆದರೆ ಸೆಕ್ಸ್ ಚಟದಿಂದ ಆತ ಪಾರಾಗಲು ಸಾದ್ಯವಾಗಲಿಲ್ಲ. ಬೇಸಿಕ್ ಇನ್‌ಸ್ಟಿಂಕ್ಟ್ ಮತ್ತು ಫೇಟಲ್ ಅಟ್ರಾಕ್ಷನ್ ಫಿಲಂಗಳಲ್ಲಿ, ಲೈಂಗಿಕವಾಗಿ ಆಕ್ರಮಣಕಾರಿಯಾದ ವ್ಯಕ್ತಿಯಾಗಿ ನಟಿಸಿದ ಈತ ನಿಜಜೀವನದಲ್ಲೂ ಹಾಗೇ ಅಂತೆ. ಈ ಚಟದಿಂದ ರೋಸಿಹೋದ ಅವನ ಪತ್ನಿ ಒಮ್ಮೆ ಬೇರೆಯಾಗಿ, ಮತ್ತೆ ಜೊತೆಯಾಗಿದ್ದಳು. ನಂತರವೂ ಈತ ಡೈವೋರ್ಸ್ ಮಾಡಿಕೊಂಡು ವ್ಯಭಿಚಾರಕ್ಕಾಗಿ 50 ಲಕ್ಷ ಡಾಲರ್‌ ಕಕ್ಕಿದ್ದ.

ಮಹಿಳೆಯ ಕಾಂಡೋಮ್‌ಗೆ ಹೆಚ್ಚಾದ ಬೇಡಿಕೆ, ಪುರುಷರು ಫುಲ್ ಖುಶ್! ...

ರಣವೀರ್ ಸಿಂಗ್‌
ಈತ ಒಮ್ಮೆ ತಾನು ಯಾವಾಗಲೂ ಜೇಬಿನಲ್ಲಿ ಕಾಂಡೋಮ್ ಇಟ್ಟುಕೊಂಡೇ ಓಡಾಡುವುದಾಗಿ ಹೇಳಿಕೊಂಡಿದ್ದ. ಅದರರ್ಥ, ಅವನಿಗೆ ನೂರಾರು ಗರ್ಲ್‌ಫ್ರೆಂಡುಗಳು ಮತ್ತು ಪ್ರತಿರಾತ್ರಿಯೂ ಒಂದಲ್ಲ ಒಬ್ಬಳ ಹತ್ತಿರ ಕಳೆಯಲೇಬೇಕಾಗಿತ್ತು ಅಂತ. ರಣವೀರ್ ಕಾಂಡೋಮ್ ಕಂಪನಿ ಜಾಹೀರಾತಿನ ರೂಪದರ್ಶಿಯೂ ಆಗಿದ್ದರಿಂದ ಸ್ವಲ್ಪ ಹೈಪ್ ಕೊಡಲು ಈ ಹೇಳಿಕೆ ನೀಡಿದ್ದರೂ ಇದ್ದಿರಬಹುದು.

ರಸ್ಸೆಲ್ ಬ್ರಾಂಡ್
ಇವನು ಇದುವರೆಗೂ ಸುಮಾರು 2000 ಸ್ತ್ರೀಯರನ್ನು ಬೆಡ್‌ರೂಮಿಗೆ ಕರೆದೊಯ್ದಿರುವುದಾಗಿ ಹೇಳಿಕೊಂಡಿದ್ದಾನೆ. ಎರಡು ಸಾವಿರ ಗೆಳತಿಯರು ಅಂದರೆ ಎಷ್ಟು ದಿನ, ಎಷ್ಟು ವಾರ, ಎಷ್ಟು ತಿಂಗಳು ಮತ್ತು ಎಷ್ಟು ವರ್ಷ- ನೀವೇ ಲೆಕ್ಕ ಹಾಕಿಕೊಳ್ಳಿ.

ಪ್ಯಾರಿಸ್ ಹಿಲ್ಟನ್‌
ಈಕೆಗೆ ಹತ್ತು ತಲೆಮಾರು ಕೂತು ತಿಂದರೂ ಮುಗಿಯದಷ್ಟು ಆಸ್ತಿಪಾಸ್ತಿ. ಮೈತುಂಬಾ ಗೆಳೆಯರು. ಪ್ರತಿ ರಾತ್ರಿಯೂ ಒಂದೊಂದು ಮನೆ, ಒಬ್ಬೊಬ್ಬ ಗೆಳೆಯ. ಬಹುಶಃ ಆಕೆ ತನ್ನ ಗೆಳೆಯರ ಲೆಕ್ಕವನ್ನೇ ಕಳೆದುಕೊಂಡಿದ್ದಾಳೆ.

ಪ್ಲೇ ಬಾಯ್ ಕೆಲಸದ ಮೋಹದಲ್ಲಿ ಇದ್ದದ್ದೂ ಹೋಯ್ತು! ...

ಡೇವಿಡ್ ಡಖಾವ್ನಿ
ಎಕ್ಸ್ ಫೈಲ್ಸ್ ಎಂಬ ಸುಪ್ರಸಿದ್ಧ ಮೂವಿಯಲ್ಲಿ ಅಭಿನಯಿಸಿ ಮನೆಮಾತಾದ ಈ ನಟ ಕೂಡ ಸೆಕ್ಸ್ ಅಡಿಕ್ಟ್. ಇದರಿಂದ ರೊಚ್ಚಿಗೆದ್ದ ಇವನ ಹೆಂಡತಿ ಈತನಿಗೆ ಡೈವೋರ್ಸ್ ಕೊಟ್ಟಿದ್ದಳು. ನಂತರ ಇವರಿಬ್ಬರೂ ರಾಜಿಯಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!
ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?