ನಟಿ ಸಮಂತಾ ರುತ್ ಪ್ರಭುಗೆ ಸಾಲು ಸಾಲು ಆಘಾತ: ತಂದೆ ಜೋಸೆಫ್ ರುತ್ ಪ್ರಭು ನಿಧನ

By Anusha Kb  |  First Published Nov 29, 2024, 5:26 PM IST

ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ರುತ್ ಪ್ರಭು ನಿಧನರಾಗಿದ್ದಾರೆ.


ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು ಅವರಿಗೆ ಪಿತೃ ವಿಯೋಗವಾಗಿದೆ. ಅವರ ತಂದೆ ಜೋಸೆಫ್ ರುತ್ ಪ್ರಭು ಅವರು ನಿಧನರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದೀರ್ಘ ಭಾವುಕ ಪೋಸ್ಟ್ ಮಾಡಿ ನಟಿ ಸಮಂತಾ ಈ ವಿಚಾರ ತಿಳಿಸಿದ್ದಾರೆ.' ನಾವು ಮತ್ತೆ ಭೇಟಿಯಾಗುವವರೆಗೆ ಅಪ್ಪ' ಎಂದು ಬರೆದು ಒಡೆದ ಹೃದಯದ ಇಮೋಜಿಗಳೊಂದಿಗೆ ಸಮಂತಾ ಪೋಸ್ಟ್ ಮಾಡಿದ್ದಾರೆ. ನಾಗಚೈತನ್ಯರಿಂದ ದೂರವಾದ ನಂತರ ಒಂಟಿಯಾಗಿರುವ ಸಮಂತಾ ಪಾಲಿಗೆ ತಂದೆಯ ಸಾವು ಮತ್ತೊಂದು ಆಘಾತ ನೀಡಿದೆ. ವಿಚ್ಚೇದನದ ನಂತರ ಸಮಂತಾ ಅವರು ಅತೀ ವಿರಳವೆನಿಸುವ ಕಾಯಿಲೆ ಮೈಯೋಸಿಟಿಸ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಿರುತ್ತಿದ್ದರು. ಈಗ ಇದರ ಜೊತೆ ತಂದೆ ಜೋಸೆಫ್ ರುತ್ ಪ್ರಭು ಅವರ ಸಾವು ಸಮಂತಾರನ್ನು ಮತ್ತಷ್ಟು ದುಃಖಕ್ಕೀಡು ಮಾಡುವಂತೆ ಮಾಡಿದೆ. 

ತೆಲುಗು ಆಂಗ್ಲೋ ಇಂಡಿಯನ್ ಆಗಿರುವ ಸಮಂತಾ ತಮದೆ ಜೋಸೆಫ್ ರುತ್ ಪ್ರಭು ಅವರು ಸಮಂತಾ ಅವರ ಜೀವನ ಹಾಗೂ ವೃತ್ತಿ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದರು. ವೃತ್ತಿಪರ ಬದ್ಧತೆಗಳ ಹೊರತಾಗಿಯೂ ಸಮಂತಾ ತನ್ನ ಕುಟುಂಬ ಹಾಗೂ ತಂದೆಯ ಬಗ್ಗೆ ಈ ಹಿಂದೆಯೇ ಸಾಕಷ್ಟು ಬಾರಿ ಮಾತನಾಡಿದ್ದಾರೆ. ತನ್ನ ಸಂಕಷ್ಟ ಕಾಲ ಹಾಗೂ ತನ್ನ ಬೆಳವಣಿಗೆಯ ಬಗ್ಗೆ ಕುಟುಂಬ ಹಾಗೂ ತಂದೆ ನೀಡಿದ ಬೆಂಬಲದ ಬಗ್ಗೆ ಸಮಂತಾ ಆಗಾಗ ಹೇಳಿಕೊಂಡಿದ್ದಾರೆ. ಆದರೆ ಈಗ ಸಮಂತಾ ಅವರ ತಂದೆಯ ಹಠಾತ್ ಸಾವು ಸಮಂತಾ ಅವರ ಅಭಿಮಾನಿಗಳು, ಕುಟುಂಬ ಹಾಗೂ ಪ್ರೀತಿಪಾತ್ರರಲ್ಲಿ ಬೇಸರವನ್ನು ಉಂಟು ಮಾಡಿದ್ದು, ಜೋಸೆಫ್ ರುತ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. 

Tap to resize

Latest Videos

click me!