ಬಾಲಿವುಡ್ ನಟ ಅರ್ಷದ್ ವಾರ್ಸಿ ಹಾಗೂ ಪತ್ನಿಯ ಗೋಲ್‌ಮಾಲ್, ಷೇರುಮಾರುಕಟ್ಟೆಯಿಂದ ನಿಷೇಧ!

By Suvarna NewsFirst Published Mar 3, 2023, 9:12 PM IST
Highlights

ಬಾಲಿವುಡ್ ಖ್ಯಾತ ನಟ ಅರ್ಷದ್ ವಾರ್ಸಿ ಹಾಗೂ ಪತ್ನಿ ಷೇರುಮಾರುಕಟ್ಟೆಗೆ ಸುಳ್ಳು ಮಾಹಿತಿ ನೀಡಿ ಗೋಲ್‌ಮಾಲ್ ಮಾಡಿದ್ದಾರೆ. ಇದರ ಪರಿಣಾಮ ಸೆಬಿ ಶೇರು ಮಾರುಕಟ್ಟೆಯಿಂದ ನಿಷೇಧಿಸಿದೆ.
 

ಮುಂಬೈ(ಮಾ.03): ಬಾಲಿವುಡ್‌ನ ಗೋಲ್‌ಮಾಲ್ ಚಿತ್ರ ಅತ್ಯಂತ ಜನಪ್ರಿಯ ಹಾಗೂ ಹಲವು ದಾಖಲೆ ಬರೆದಿತ್ತು. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟ ಅರ್ಷದ್ ವಾರ್ಸಿ ಇದೀಗ ಷೇರುಮಾರುಕಟ್ಟೆಯಲ್ಲಿ ಮಾಡಿದ ಗೋಲ್‌ಮಾಲ್‌ನಿಂದ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಷೇರುಗಳ ಬೆಲೆ ಕುರಿತ ಸುಳ್ಳು ಮಾಹಿತಿ ಹಾಗೂ ತಮ್ಮ ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಷೇರುಗಳನ್ನು ಕೊಳ್ಳುವಂತೆ ಹಲವು ಆಮಿಷ ಒಡ್ಡಿದ ನಟ ಅರ್ಷದ್ ವಾರ್ಸಿ, ಪತ್ನಿ ಮರಿಯಾ ಗೊರೆಟ್ಟಿ ಸೇರಿದಂತೆ ಒಟ್ಟು 44 ಮಂದಿಯನ್ನು ಸೆಬಿ ಷೇರುಮಾರುಕಟ್ಟೆ ವ್ಯವಹಾರದಿಂದ ನಿಷೇಧಿಸಿದೆ.

ಅರ್ಷದ ವಾರ್ಸಿ ಹಾಗೂ ಪತ್ನಿ ಮರಿಯಾ ಯೂಟ್ಯೂಬ್ ಮೂಲಕ ತಮ್ಮ ಬ್ರಾಡ್‌ಕಾಸ್ಟ್ ಲಿಮಿಟೆಡ್, ಶಾರ್ಪ್ ಬ್ರಾಡ್‌ಕಾಸ್ಟ್ ಷೇರುಗಳನ್ನು ಕೊಳ್ಳುವಂತೆ ಹಲವು ಆಮಿಷ ಒಡ್ಡಿದ್ದಾರೆ. ಬಣ್ಣ ಬಣ್ಣದ ಮಾತುಗಳಿಂದ ಷೇರುದಾರರ ವಂಚಿಸುವ ಪ್ರಯತ್ನ ಮಾಡಿದ್ದಾರೆ. ಷೇರುಗಳ ಕುರಿತು ಹಾಗೂ ಬೆಲೆಯ ಕುರಿತು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಸೆಬಿ ಅರ್ಷದ್ ವಾರ್ಸಿ, ಪತ್ನಿ ಹಾಗೂ 45 ಮಂದಿಯನ್ನು ಷೇರುಮಾರುಕಟ್ಟೆ ವ್ಯವಹಾರಿಂದ ನಿಷೇಧಿಸಿದೆ. ಬ್ರಾಡ್‌ಕಾಸ್ಟ್ ಲಿಮಿಟೆಡ್, ಶಾರ್ಪ್ ಬ್ರಾಡ್‌ಕಾಸ್ಟ್ ಮೂಲಕ ಷೇರುಮಾರುಕ್ಟಟೆಯಿಂದ ಅರ್ಷದ್ ವಾರ್ಸಿ ಹಾಗೂ ಇತರರು 54 ಕೋಟಿ ರೂಪಾಯಿ ಗಳಿಸಿದ್ದರು. ಈ ಮೊತ್ತವನ್ನು ಸೆಬಿ ಮುಟ್ಟುಗೋಲು ಹಾಕಿಕೊಂಡಿದೆ.

Latest Videos

ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಸಮರಕ್ಕೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆ ನೇಮಿಸಿಕೊಂಡಿಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ

ಅರ್ಷದ್ ವಾರ್ಸಿ ಹಾಗೂ ಪತ್ನಿ ವಿರುದ್ಧ ದೂರುಗಳು ದಾಖಲಾದ ಬೆನ್ನಲ್ಲೆ ಸೆಬಿ ಪ್ರಾಥಮಿಕ ತನಿಖೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಯೂಟ್ಯೂಬ್‌ನಲ್ಲಿ ಬ್ರಾಡ್‌ಕಾಸ್ಟ್ ಲಿಮಿಟೆಡ್, ಶಾರ್ಪ್ ಬ್ರಾಡ್‌ಕಾಸ್ಟ್ ಷೇರುಗಳು ಅತೀವ ಲಾಭ ತಂದುಕೊಡುತ್ತಿದೆ. ಈ ಷೇರುಗಳನ್ನು ಖರೀದಿಸಿ. ನೀವು ಕೋಟಿ ಕೋಟಿ ರೂಪಾಯಿ ಲಾಭಗಳಿಸಿ ಎಂಬ ಸುಳ್ಳು ಹಾಗೂ ಷೇರುದಾರರನ್ನು ತಪ್ಪುದಾರಿಗೆ ಎಳೆಯುವ ಮಾಹಿತಿ ಹಂಚಿಕೊಳ್ಳಲಾಗಿತ್ತು. ದೂರಿನ ಆಧಾರದಲ್ಲಿ ಸೆಬಿ ಈ ವಿಡಿಯೋಗಳು ಷೇರು ಮಾರುಕ್ಟಟೆಯಲ್ಲಿರುವ ಷೇರಿನ ಮಾಹಿತಿ ಕಲೆ ಹಾಕಿತ್ತು. ಈ ವೇಳೆ ಅಜಗಜಾಂತರ ವ್ಯತ್ಯಾಸ ಕಂಡುಬಂದಿತ್ತು.

ಅರ್ಷದ್ ವಾರ್ಸಿ ಹಾಗೂ ಪತ್ನಿ ತಮ್ಮ ಅಧಿಕೃತ ಯೂಟ್ಯೂಬ್ ವಾಹಿನಿ ಮೂಲಕ ಈ ವಿಡಿಯೋಗಳನ್ನು ಹಾಕಿದ್ದರು. ಇವರ ಯೂಟ್ಯೂಬ್ ವಾಹಿನಿಗೆ 3 ಕೋಟಿಗೂ ಹೆಚ್ಚು ಚಂದಾದಾರರು ಇದ್ದಾರೆ. ಹೀಗಾಗಿ ತಪ್ಪು ಮಾಹಿತಿಯಿಂದ ಅದೆಷ್ಟು ಷೇರುದಾರರು ತಪ್ಪುದಾರಿಯಲ್ಲಿ ಸಂಚರಿಸಿರುವ ಸಾಧ್ಯತೆ ಇದೆ. ಹೀಗಾಗಿ ಸೆಬಿ ತ್ವರಿತ ಕ್ರಮ ಕೈಗೊಂಡಿದೆ.

ಸಾಧನಾ ಬ್ರಾಡ್‌ಕಾಸ್ಚ್ ಲಿಮಿಟೆಡ್ ಟಿವಿ ಪ್ರೊಡಕ್ಷನ್‌ನಿಂದ ಇದೀಗ ಚಲನಚಿತ್ರ ಪ್ರೊಡಕ್ಷನ್‌ಗೆ ವ್ಯಾಪ್ತಿ ವಿಸ್ತರಿಸುತ್ತಿದೆ. ಈಗಾಗಗಲೇ ಅಮೆರಿಕನ್ ಕಾರ್ಪೋರೇಶನ್ ಸಾಧನಾ ಬ್ರಾಡ್‌ಕಾಸ್ಟ್ ಸಂಪರ್ಕಿಸಿದ್ದಾರೆ. 1,100 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಆಧ್ಯಾತ್ಮಿಕ ಚಿತ್ರ ನಿರ್ಮಾಣಕ್ಕೆ ಹೂಡಿಕೆ ಮಾಡಲಾಗಿದೆ. ಅಮೆರಿಕನ್ ಕಾರ್ಪೋರೇಶನ್ ಹೂಡಿಕೆ ಮಾಡಿದೆ. ಎಲ್ಲಾ ರೈಟ್ಸ್ ಸಾಧನಾ ಬ್ರಾಡ್‌ಕಾಸ್ಚ್ ಬಳಿ ಇದೆ ಅನ್ನೋ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಷೇರುದಾರರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗಿದೆ ಅನ್ನೋದು ಸೆಬಿ ತನಿಖೆಯಲ್ಲಿ ಬಯಲಾಗಿದೆ.

ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಸೆಬಿ ನಿಷೇಧದ ಬೆನ್ನಲ್ಲೇ ಅರ್ಷದ್ ವಾರ್ಸಿ ಟ್ವೀಟ್ ಮಾಡಿದ್ದಾರೆ. ಷೇರು ಮಾರುಕಟ್ಟೆ ಕುರಿತು ಹೆಚ್ಚಿನ ಮಾಹಿತಿ ನಮಗೆ ತಿಳಿದಿಲ್ಲ. ಹಣ ಕಳೆದುಕೊಂಡಿದ್ದೇವೆ. ಗಳಿಸುವುದಕ್ಕಿಂತ ಹೆಚ್ಚು ಹಣ ಕಳೆದುಕೊಂಡಿದ್ದೇವೆ. ಎಲ್ಲರಂತೆ ನಾವು ಹಣ ಹೂಡಿಕೆ ಮಾಡಿದ್ದೇವೆ. ಕಾನೂನಿನ ವ್ಯಾಪ್ತಿ ಮೀರಿರುವುದು ನಮಗೆ ತಿಳಿದಿಲ್ಲ ಎಂದಿದ್ದಾರೆ.
 

click me!