ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ, ಮಗಳು ಅಳುತ್ತಿದ್ದಾಳೆ; ಖ್ಯಾತ ನಟನ ವಿರುದ್ಧ ಪತ್ನಿ ಕಿಡಿ

Published : Mar 03, 2023, 06:01 PM ISTUpdated : Mar 05, 2023, 03:53 PM IST
ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ, ಮಗಳು ಅಳುತ್ತಿದ್ದಾಳೆ; ಖ್ಯಾತ ನಟನ ವಿರುದ್ಧ ಪತ್ನಿ ಕಿಡಿ

ಸಾರಾಂಶ

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ಅಕ್ಷರಶಃ ಬೀದಿಗೆ ಬಂದಿದೆ. ತನ್ನನ್ನು ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. 

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ಅಕ್ಷರಶಃ ಬೀದಿಗೆ ಬಂದಿದೆ. ನವಾಜುದ್ದೀನ್ ಪತ್ನಿ ಅಲಿಯಾ ಸಾಲು ಸಾಲು ಅರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಬೀದಿಯಲ್ಲಿ ನಿಂತು ವಿಡಿಯೋ ಮಾಡಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಅಲಿಯಾ ಪತಿ ಮತ್ತು ಅವರ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದು ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ತನ್ನನ್ನು ಮತ್ತು ಮಕ್ಕಳನ್ನು ಬೀದಿಗೆ ಹಾಕಿದ್ದಾನೆ ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಕಳೆದ ವಾರ ಅಲಿಯಾ ಇಬ್ಬರು ಮಕ್ಕಳಾದ ಶೋರಾ ಮತ್ತು ಯಾನಿ ಅವರೊಂದಿಗೆ ನವಾಜುದ್ದೀನ್ ಅವರ ಅಂಧೇರಿ ಬಂಗಲೆಯಲ್ಲಿ  ಉಳಿದುಕೊಂಡಿರುವುದಾಗಿ ಹೇಳಿದ್ದರು. ಅಲ್ಲಿ ಯಾವುದೇ ಸೌಲಭ್ಯವಿಲ್ಲ, ಸ್ನಾನ ಮಾಡಲು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ಮಕ್ಕಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾರೆ.

ನವಾಜುದ್ದೀನ್ ತನ್ನ ಬಂಗಲೆ ಪ್ರವೇಶಿಸದಂತೆ ಬಾಡಿಗಾರ್ಡ್ ನಿಯೋಜಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಮಕ್ಕಳೊಂದಿಗೆ ನವಾಜುದ್ದೀನ್ ಮನೆ ಮುಂದೆ ರಸ್ತೆಯಲ್ಲಿ ನಿಂತಿದ್ದಾರೆ. ಮಗ ಯಾನಿಯನ್ನು ಹತ್ತಿರದಲ್ಲೇ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದಾರೆ ಮಗಳು ಶೋರಾ ಜೋರಾಗಿ ಅಳುತ್ತಿದ್ದಾಳೆ. ಇಬ್ಬರೂ ಮಕ್ಕಳನ್ನು ಸಹ ಬಂಗಲೆಯಿಂದ ಹೊರಹಾಕಿದ್ದಾರೆ. ಮನೆಯೊಳಗೆ ಪ್ರವೇಶಿಸಲು ಬಿಡುತ್ತಿಲಲ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ತನ್ನ ಕೇವಲ 81 ರೂಪಾಯಿ ಇದೆ. ಎಲ್ಲಿಯೂ ಹೋಗಿಲ್ಲ ಎಂದಿದ್ದಾರೆ.



ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮಾಡಿದ ಆರೋಪಗಳೆಲ್ಲ ಸುಳ್ಳು; ಮನೆ ಕೆಲಸದವಳ ಬಹಿರಂಗ ಕ್ಷಮೆ

ನವಾಜ್ ಅವರು ಹೀಗೆ ವರ್ತಿಸುತ್ತಾರೆಂದು ನನಗೆ ತಿಳಿದಿಲ್ಲ. ಅವನು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾನೆ. ನವಾಜ್ ನೀನು ನನ್ನ ಮಕ್ಕಳಿಗೆ ಈ ರೀತಿ ಮಾಡುತ್ತಿರುವುದಕ್ಕೆ ನಾನು ಯಾವತ್ತು ನಿನ್ನನ್ನು ಕ್ಷಮಿಸಲ್ಲ. ಈ ವಿಡಿಯೋ ಮೂಲಕ ನನ್ನ ಮಕ್ಕಳು ಹೇಗೆ ಬೀದಿಯಲ್ಲಿ ನಿಂತಿದ್ದಾರೆ, ನರಳುತ್ತಿದ್ದಾರೆ ಎಂದು ನೋಡಿ' ಎಂದು ಹೇಳಿದ್ದಾರೆ.

ರೇಪ್​ ಕೇಸ್​ನಲ್ಲಿ ಸಿಲುಕಿದ ನಟ ನವಾಜುದ್ದೀನ್ ಸಿದ್ದಿಕಿ: ಪತ್ನಿ ಆಲಿಯಾ ದೂರು

ವಿಡಿಯೋ ಜೊತೆಗೆ ಅಲಿಯಾ ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಇದು ನಟನ ನಿಜರೂಪ ಎಂದಿರುವ ಅಲಿಯಾ ತನ್ನ ಸ್ವಂತ ಮಕ್ಕಳನ್ನು ಸಹ ಬಿಡಲಿಲ್ಲ ಎಂದಿದ್ದಾರೆ. ಪೊಲೀಸ್ ಠಾಣೆಗೆ ತುರ್ತಾಗಿ ಕರೆದ ಕಾರಣ ಮನೆಯಿಂದ ಹೊರಬಂದೆ. ಆದರೆ ಮಕ್ಕಳೊಂದಿಗೆ ಹಿಂದಿರುಗಿದಾಗ ಮನೆಯೊಳಗೆ ಬಿಡುತ್ತಿಲ್ಲ.  ಮಗಳು ಶೋರಾ ತನ್ನ ತಂದೆ ಹೀಗೆ ಮಾಡಬಹುದು ಎಂದು ನಂಬಲು ಸಾಧ್ಯವಾಗದೆ ಅಳುತ್ತಾ ನಿಂತಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಚಿಕ್ಕ ರೂಮಿನಲ್ಲಿ ಎಲ್ಲರೂ ಮಲಗಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.  


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?