2020 ನನ್ನ ಜೀವನದ ಕೆಟ್ಟ ಹಂತವಾಗಿತ್ತು, ಬ್ರೇಕಪ್‌ನಿಂದ ಆರಂಭವಾಯ್ತು ಎಂದು ನಟಿ ಸಾರಾ ಅಲಿ ಖಾನ್ ಹೇಳಿದ್ದಾರೆ.
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಿನಿಮಾಗಿಂತ ಹೆಚ್ಚಾಗಿ ಡೇಟಿಂಗ್ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಅನೇಕ ಜನರ ಜೊತೆ ಸಾರಾ ಹೆಸರು ಕೇಳಿಬರುತ್ತಿದೆ. ಸಿನಿಮಾ ಜೊತೆಗೆ ಕ್ರಿಕೆಟರ್ ಜೊತೆಯೂ ಸಾರಾ ಹೆಸರು ಥಳಕು ಹಾಕಿಕೊಂಡಿದೆ. ಡೇಟಿಂಗ್, ಬ್ರೇಕಪ್, ಟ್ರಿಪ್ ಅಂತ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಸಾರಾ ಪ್ರೀತಿಯಲ್ಲಿದ್ದರು ಎನ್ನುವ ಸುದ್ದಿ ಕಳೆದ ಮೂರು ವರ್ಷಗಳ ಹಿಂದೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಲವ್ ಆಜ್ ಕಲ್ 2 ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸಮಯದಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇಬ್ಬರೂ ಪ್ರೀತಿ ವಿಚಾರವನ್ನು ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆದರೆ ಲವ್ ಆಜ್ ಕಲ್ 2 ಸಿನಿಮಾ ಮುಗಿಸಿ ರಿಲೀಸ್ ಆಗುವ ಮೊದಲೇ ಇಬ್ಬರೂ ದೂರ ದೂರ ಆಗಿ ಅಚ್ಚರಿ ಮೂಡಿಸಿದ್ದರು.
ಕಾರ್ತಿಕ್ ಆರ್ಯನ್ ಜೊತೆಗಿನ ಬ್ರೇಕಪ್ ವಿಚಾರವಾಗಿ ಸಾರಾ ಈಗ ಮಾತನಾಡಿದ್ದಾರೆ. 2020 ವರ್ಷ ತನಗೆ ತುಂಬಾ ಕೆಟ್ಟ ಹಂತವಾಗಿತ್ತು, ಬ್ರೇಕಪ್ ನಿಂದ ಪ್ರಾರಂಭವಾಯಿತು ಎಂದು ಬಹಿರಂಗ ಪಡಿಸಿದ್ದಾರೆ. '2020 ನನಗೆ ತುಂಬಾ ಕೆಟ್ಟ ಹಂತವಾಗಿತ್ತು. ಇದು ಬ್ರೇಕಪ್ ನಿಂದ ಪ್ರಾರಂಭವಾಯಿತು. ಕೆಟ್ಟದಾಗುತ್ತಲೇ ಇತ್ತು. ಅವುಗೆಳಲ್ಲವೂ ಇಂಟರ್‌ನೆಟ್ ನಲ್ಲಿ ಇದೆ. ಇಮ್ತಿಯಾಜ್ ಅಲಿ ಸಿನಿಮಾದಲ್ಲಿ ನಟಿಸಿದ್ದ ಸಾರಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅನೇಕ ಟೀಕೆಗಳನ್ನು ಎದುರಿಸಿದರು. ಆದರೂ ಹೆಚ್ಚು ತಲೆಕೆಡಿಸಿಕೊಳ್ಳದ ಸಾರಾ ವಯಕ್ತಿಕ ವಿಚಾರಕ್ಕೆ ತಲೆಕೆಡಿಸಿಕೊಂಡಿದ್ದೆ ಎಂದು ಹೇಳಿದರು.
ಕಾರ್ತಿಕ ಆರ್ಯನ್ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗ ಪಡಿಸದಿದ್ದರೂ ಸಾರಾ ಹೇಳಿರುವುದು ಕಾರ್ತಿಕ್ ಬಗ್ಗೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಾರ್ತಿಕ್ ಮತ್ತು ಸಾರಾ ಬೇರೆ ಬೇರೆ ಆದ ಬಳಿಕ ಅಂತರ ಕಾಪಾಡಿಕೊಂಡಿದ್ದರು. ಆದರೀಗ ಮತ್ತೆ ಒಂದಾಗಿದ್ದಾರೆ. ಇಬ್ಬರೂ ಸ್ನೇಹಿತರಾಗಿದ್ದಾರೆ. ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕೆಳಗೆ ಬೀಳುವುದೂ ಮುಖ್ಯ; ವೃತ್ತಿ ಜೀವನದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಸಾರಾ ಅಲಿ ಖಾನ್ ಮಾತು
2018ರಲ್ಲಿ ಕೇದರನಾಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ಸಾರಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ದೊಡ್ಡ ಸಕ್ಸಸ್‌ಗಾಗಿ ಸಾರಾ ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ಸಾರಾ ಅಕ್ಷಯ್ ಕುಮಾರ್ ಮತ್ತು ಧನುಷ್ ಅತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತು. ಸದ್ಯ ಸಾರಾ ಬಳಿ ಅನೇಕ ಸಿನಿಮಾಗಳಿವೆ. ಲಕ್ಷ್ಮಣ್ ಉಟೇಕರ್ , ವಿಕ್ಕಿ ಕೌಶಲ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ ಗ್ಯಾಸ್ ಲೈಟ್, ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ವಿದೇಶದಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಸಾರಾ ಆಲಿ ಖಾನ್; ನೆಟ್ಟಿಗ್ಗರಿಂದ ಮೆಚ್ಚಗೆ!
ತಪ್ಪುಗಳ ಬಗ್ಗೆ ಸಾರಾ ಮಾತು
ವೃತ್ತಿ ಜೀವದ ಕೆಲವು ತಪ್ಪುಗಳ ಬಗ್ಗೆ ನಟಿ ಸಾರಾ ಬಹಿರಂಗವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾರಾ ಸಿನಿಮಾರಂಗದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಬಹಿರಂಗ ಪಡಿಸಿದರು. ತಮ್ಮ ವೃತ್ತಿಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತಿರುವುದಾಗಿಯೂ ಹೇಳಿದರು. ಒಬ್ಬ ನಟಿಯಾಗಿ ನಾನು ಪ್ರತಿದಿನ ಸಾಕಷ್ಟು ಕಲಿಯುತ್ತೇನೆ ಎಂದು ಸಾರಾ ಹೇಳಿದ್ದಾರೆ. ಸಾರಾ ತಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡರು. ಪ್ರೇಕ್ಷಕರು ಇಷ್ಟಪಡದ ಕೆಲವು ಚಿತ್ರಗಳನ್ನು ಮಾಡಿದ್ದೇನೆ ಎಂದು ಅವರು ಹೇಳಿದರು. ಆದರೆ ತಪ್ಪುಗಳನ್ನು ಮಾಡುವುದು ತನ್ನ ವಯಸ್ಸು ಎಂದು ಹೇಳಿದರು. ಪ್ರತಿ ಬಾರಿಯೂ ಕೆಳಗೆ ಬಿದ್ದು ಏಳುವುದು ಮುಖ್ಯ ಎಂದು ಭಾವಿಸುತ್ತೇನೆ ಎಂದು ಸಾರಾ ಹೇಳಿದರು.