Poonam Pandey: ಕೌಟುಂಬಿಕ ದೌರ್ಜನ್ಯದ ಬಗ್ಗೆ ಮಾದಕ ನಟಿ ತೆರೆದಿಟ್ಟ ಭಯಾನಕ ರಹಸ್ಯ...

By Suvarna News  |  First Published Mar 5, 2023, 1:20 PM IST

ನಟಿ ಪೂನಂ ಪಾಂಡೆ ತಮ್ಮ ವೈವಾಹಿಕ ಜೀವನದ ಅತ್ಯಂತ ಕರಾಳ ಕಥೆಯನ್ನು ಬಹಿರಂಗಗೊಳಿಸಿದ್ದಾರೆ. ಅವರು ಹೇಳಿದ್ದೇನು? 
 


ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ (poonam pandey) ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹಾಟ್ ಹಾಟ್ ಫೋಟೋ ಅಪ್ಲೋಡ್ ಮಾಡಿ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಈಕೆಯನ್ನು ಬಿಂದಾಸ್ ನಟಿ ಎಂದೂ ಹೇಳುತ್ತಾರೆ. ಇತ್ತೀಚೆಗೆ ಈಕೆ ಮೂರು ಸೀರಿಸ್‌ನಲ್ಲಿ ಬ್ಲ್ಯಾಕ್ ಆಂಡ್ ವೈಟ್ ಅರೆಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social Media) ಅಪ್​ಲೋಡ್​ ಮಾಡಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ತಮ್ಮ ಎದೆ ಪ್ರದರ್ಶನ ಮಾಡಿರುವ ಇವರನ್ನು ಟ್ರೋಲ್​ ಮಾಡಿದ್ದರು. ಆದರೆ ಇವೆಲ್ಲವೂ ಬಣ್ಣದ ಲೋಕದ ಮಾಯೆಯಷ್ಟೇ. ನಟ ನಟಿಯರನ್ನು ಕಂಡಾಗ ಅವರ ಬಣ್ಣದ ಬದುಕಿನ ಚಿತ್ರಣ ಮಾತ್ರ ನಮಗೆ ಕಾಣಿಸುತ್ತದೆ. ಆದರೆ ಎಷ್ಟೋ ನಟಿಯರು ತಮ್ಮ ಖಾಸಗಿ ಜೀವನದಲ್ಲಿ ಸುಖವಾಗಿಲ್ಲ. ಕೆಲವು ನಟಿಯರಂತೂ ಪಡಬಾರದ ಕಷ್ಟ ಪಟ್ಟಿದ್ದಾರೆ, ಪಡುತ್ತಲೂ ಇದ್ದಾರೆ. ಜನರ ಕಣ್ಣಿಗೆ ತಾವು ಸುಖಿಗಳು ಎಂದು ತೋರಿಸುವ ತವಕದಲ್ಲಿ ತಮ್ಮ ಖಾಸಗಿ ಬದುಕನ್ನು ನರಕಕ್ಕೆ ತಳ್ಳಿಕೊಂಡಿರುವ ನಟ ನಟಿಯರೂ ಇದ್ದಾರೆ. ಅಂಥವರಲ್ಲಿ ಒಬ್ಬರು ಪೂನಂ ಪಾಂಡೆ.

ಇದೀಗ ಪೂನಂ ಅವರು ತಾವು ಅನುಭವಿಸಿದ್ದ ಭಯಾನಕ ಕಹಿ ಸತ್ಯಗಳ ಅನಾವರಣಗೊಳಿಸಿದ್ದಾರೆ. ತಮ್ಮ ಖಾಸಗಿ ಬದುಕಿನ ಕುರಿತು ಮಾತನಾಡಿರುವ ಅವರು, ಜೀವನದ ಕರಾಳ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.  ಸ್ಯಾಮ್ ಬಾಂಬೆ ಅವರನ್ನು ಮದುವೆಯಾದ ಬಳಿಕ ತಾವು ಅನುಭವಿಸಿದ್ದ ನೋವಿನ ಕುರಿತು ಪೂನಂ ಮಾತನಾಡಿದ್ದಾರೆ. 31 ವರ್ಷದ ಪೂನಂ ಅವರ ಮದುವೆ 2020ರ ಮಾರ್ಚ್​ ತಿಂಗಳಿನಲ್ಲಿ ಸ್ಯಾಮ್​ ಬಾಂಬೆ (Sam Bombay) ಅವರ ಜೊತೆ ನಡೆದಿತ್ತು. ಇವರ ದಾಂಪತ್ಯ ಜೀವನ ಇದ್ದದ್ದು ಒಂದೇ ವರ್ಷ. ಈ ಒಂದು ವರ್ಷದಲ್ಲಿ ಅನುಭವಿಸಿದ್ದ ನೋವಿನ ಸರಣಿಯನ್ನು ಪೂನಂ ಬಿಚ್ಚಿಟ್ಟಿದ್ದಾರೆ. ಪೂನಂ ಅವರು ಕಂಗನಾ ರಣಾವತ್ (Kangana Ranaut) ಅವರ OTT ಶೋ 'ಲಾಕ್ ಅಪ್' ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೆರೆದಿಟ್ಟಿದ್ದಾರೆ. 

Tap to resize

Latest Videos

ಪತಿಯರಿಂದ ಟಾರ್ಚರ್​ ಸಹಿಸಿಕೊಂಡ ಖ್ಯಾತ ಬಾಲಿವುಡ್​ ನಟಿಯರಿವರು...

'ಮದುವೆಯಾದ ದಿನದಿಂದಲೂ ನನ್ನ ಮೇಲೆ ದೈಹಿಕ, ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಹನಿಮೂನ್ ಅವಧಿಯಲ್ಲಿ ನನ್ನ ಮೇಲೆ ಹಲ್ಲೆ ಮತ್ತು ದೈಹಿಕ ಕಿರುಕುಳ ನಡೆದಿದೆ. ಮದುವೆಯನ್ನು ಮುಗಿಸುವ ವಿಚಾರದಲ್ಲಿ ಏನನ್ನೂ ಯೋಚಿಸದೆ ಪ್ರಾಣಿಗಳಂತೆ ಥಳಿಸಿದ್ದಾನೆ' ಎಂದಿದ್ದಾರೆ. ಸ್ಯಾಮ್ ಬಾಂಬೆಗೆ ನನ್ನನ್ನು ಕಂಡರೆ ಇಷ್ಟವಿರಲಿಲ್ಲ. ನನ್ನನ್ನು ಪ್ರಾಣಿಯಂತೆ ಹೊಡೆಯುತ್ತಿದ್ದ. ಒಮ್ಮೆ ಆತ ಹೊಡೆದಾಗ  ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲ' ಎಂದಿದ್ದಾರೆ. 'ನನ್ನ ಫೋನ್ ನೋಡುವುದಕ್ಕೂ ನನಗೆ ಅವಕಾಶ ಇರಲಿಲ್ಲ.  ಫೋನ್ ಅನ್ನು ಎಲ್ಲಿಯೂ ತೆಗೆದುಕೊಂಡು ಹೋಗುವಂತೆ ಇರಲಿಲ್ಲ. ದಿನವೂ ಚಿತ್ರಹಿಂಸೆ (Torture) ಅನುಭವಿಸಿ ನಲುಗಿ ಹೋಗಿದ್ದೆ. ಆದರೆ ಆ ಕ್ಷಣದಲ್ಲಿ ನನಗೆ ಅದರಿಂದ ಹೊರಗೆ ಬರುವ ಬದಲು ಹೊಂದಿಕೊಂಡು ಹೋಗೋಣ ಎನ್ನಿಸಿತ್ತು. ಆದರೆ ದಿನೇ ದಿನೇ ದೌರ್ಜನ್ಯ ಸಹಿಸಲು ಸಾಧ್ಯವಾಗದಷ್ಟು ನಡೆಯಿತು' ಎಂದಿದ್ದಾರೆ.

'ಆತನ ಹೊಡೆತದಿಂದ ನನ್ನ ಮೈಮೇಲೆ ಗಾಯಗಳಾಗಿದ್ದವು. ಮುಖದ ಮೇಲೆಯೂ ಕಲೆಗಳಾಗಿದ್ದವು. ಅದರೆ ಕಲೆಗಳನ್ನು ನಾನು  ಮೇಕಪ್​ನಿಂದ ಮರೆಮಾಚುತ್ತಿದ್ದೆ. ಬಣ್ಣದ ಲೋಕದಲ್ಲಿ ನಮ್ಮ ಖಾಸಗಿ ವಿಷಯಗಳನ್ನು ತೋರ್ಪಿಡಿಸುವುದು ಸರಿಯಿಲ್ಲ ಅಂದುಕೊಂಡವಳು ನಾನು. ಅದಕ್ಕಾಗಿಯೇ ಒಳಗೆ ಎಷ್ಟೇ ದುಃಖ ಇದ್ದರೂ ಜನರ ಮುಂದೆ ನಗುವುದು ಅನಿವಾರ್ಯವಾಗಿತ್ತು' ಎಂದಿದ್ದಾರೆ.  'ಕೊನೆಗೆ ಆತನಿಂದ ದೂರವಾಗುವ ಯೋಚನೆ ಮಾಡಿದೆ. ಆದರೆ ಅದು ಕೂಡ ಸುಲಭವಾಗಿರಲಿಲ್ಲ. ವಿಚ್ಛೇದನ (Divorce) ಪಡೆಯೋ ವಿಚಾರಕ್ಕೂ ಅನೇಕ ಬಾರಿ ಜಗಳವಾಗಿದೆ ಎಂದು ಹೇಳಿದ್ದಾರೆ. ಕುತೂಹಲದ ಅಂಶವೆಂದರೆ ಮದುವೆಯಾದ ಕೇವಲ 12 ದಿನಗಳ ನಂತರ, ಪೂನಂ ಅವರ ಪತಿಯನ್ನು ಗೋವಾ ಪೊಲೀಸರು ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದರು.

ಅರೆಬೆತ್ತಲೆ ಫೋಟೋ ಹಂಚಿಕೊಂಡ ಪೂನಂ ಪಾಂಡೆ; ಎಲ್ಲಾ ನೋಡಿದ್ದಾರೆ ಬಿಡಮ್ಮ ಎಂದು ಕಾಲೆಳೆದ ನೆಟ್ಟಿಗರು

click me!