Sara Ali Birthday: ಅಜ್ಜ-ಅಪ್ಪ ಮುಸ್ಲಿಂ, ಅಜ್ಜಿ-ಅಮ್ಮ ಹಿಂದೂ: ಕೇಕ್​ಗೆ ಹೆದರಿದ ನಟಿಯ ಕಥೆ ಕೇಳಿ!

By Suvarna News  |  First Published Aug 12, 2023, 4:33 PM IST

ಇಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್​ ಅವರ 28ನೇ ಹುಟ್ಟುಹಬ್ಬ. ಅವರ ಜೀವನದ ಕುತೂಹಲದ ಕಥೆ ಇಲ್ಲಿದೆ 
 


ಬಾಲಿವುಡ್​ ನಟ ಸೈಫ್​ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್ ಇಂದು  ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಕೇಕ್​ ಕತ್ತರಿಸುವ ಸಮಾರಂಭ ಇತ್ತು. ಆದರೆ  ಕೇಕ್ ಮೇಲಿನ  ಮೇಣದಬತ್ತಿಗಳಿಂದ ಸಾರಾ ಭಯಪಟ್ಟಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಕೇಕ್​ ಕಟ್​ ಮಾಡುವಾಗ  ತಾಯಿ ಅಮೃತಾ ಸಿಂಗ್ ಮತ್ತು ಸಹೋದರ ಹಾಜರಿದ್ದರು. ಈ ಸಮಯದಲ್ಲಿ ಆಕೆ ಹೆದರಿಕೊಂಡಿರುವುದು ಕಾಣಬಹುದು. ಇದನ್ನು ಆಕೆಯ ಸ್ನೇಹಿತರೊಬ್ಬರು Instagramನಲ್ಲಿ ಶೇರ್​ ಮಾಡಿಕೊಂಡಿದ್ದು,  ಈ ಹುಡುಗಿ ಯಾರಿಗೂ ಹೆದರುವುದಿಲ್ಲ. ಆದರೆ  ಸ್ವಂತ ಹುಟ್ಟುಹಬ್ಬದ ಕೇಕ್​ಗೆ ಮಾತ್ರ ಹೆದರುತ್ತಾಳೆ ಅಂದಿದ್ದಾರೆ. ಸಾರಾ ಅವರ ತಂದೆ ಸೈಫ್​ ಅಲಿಯ ಎರಡನೆಯ ಪತ್ನಿಯಾಗಿರುವ ಕರೀನಾ  ಕಪೂರ್ ಅವರು Instagram ಸ್ಟೋರೀಸ್‌ನಲ್ಲಿ ಎರಡು ಚಿತ್ರಗಳ ಕೊಲಾಜ್‌ನಲ್ಲಿ ಹುಟ್ಟುಹಬ್ಬದ  ಸ್ಟಿಕ್ಕರ್ ಶೇರ್​ ಮಾಡಿದ್ದಾರೆ.  'ಜನ್ಮದಿನದ ಶುಭಾಶಯಗಳು. ಅದ್ಭುತ ವರ್ಷವನ್ನು ಹೊಂದು' ಎಂದಿದ್ದಾರೆ.   ಒಂದು ಸಾರಾ ಅವರ ತಂದೆ ಸೈಫ್ ಅಲಿ ಖಾನ್ ಅವರ ಬಾಲ್ಯದ ಚಿತ್ರವಾಗಿದ್ದರೆ, ಇನ್ನೊಂದು ಕರೀನಾ ಮತ್ತು ಸೈಫ್ ಅವರ ಕಿರಿಯ ಮಗ ಜಹಾಂಗೀರ್ ಅಲಿ ಖಾನ್ ಅವರೊಂದಿಗೆ ಸಾರಾ ಅವರ ಕ್ಯಾಂಡಿಡ್ ಚಿತ್ರವನ್ನು ಶೇರ್​ ಮಾಡಿದ್ದಾರೆ.  

ಇದೇ ವೇಳೆ ಸಾರಾ (Sara Ali Khan) ಅವರ ಕುಟುಂಬದ ಕುತೂಹಲದ ಮಾಹಿತಿ ಕೂಡ ಸಕತ್​ ಸುದ್ದಿ ಮಾಡುತ್ತಿದೆ. ಇದು ಬಹುತೇಕ ಎಲ್ಲಾ ಸಿನಿ ಪ್ರಿಯರಿಗೂ ತಿಳಿದಿರುವ ವಿಷಯವೇ. ಆದರೂ ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದೆ ಸಾರಾ ಫ್ಯಾಮಿಲಿ. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ.  ಇದರ ಬಗ್ಗೆ ಹೇಳುವುದಾದರೆ,  ಸಾರಾ ಅಲಿ ಖಾನ್ ಅವರ  ಅಜ್ಜ ಅರ್ಥಾತ್​ ಸೈಫ್​ ಅಲಿ ಅವರ ತಂದೆ ಮನ್ಸೂರ್ ಅಲಿ ಖಾನ್ ಮುಸ್ಲಿಂಮರು. ಅವರು ಪಟೌಡಿಯ ಎಂಟನೇ ನವಾಬ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕೂಡ. ಇವರು ಮದುವೆಯಾದದ್ದು ಆಗಿನ ಪ್ರಸಿದ್ಧ ನಟಿ, ಬಾಲಿವುಡ್​ ಆಳುತ್ತಿದ್ದ ರಾಣಿ ಹಿಂದೂ ಧರ್ಮದ ಶರ್ಮಿಳಾ ಟಾಗೋರ್ ಅವರನ್ನು. ಇವರ ಮಕ್ಕಳು ಖಾನ್​ ತ್ರಯರಾದ ಮನ್ಸೂರ್​ ಅಲಿ ಖಾನ್​, ಸೈಫ್​ ಅಲಿ ಖಾನ್​ ಮತ್ತು ಸೋಹಾ ಅಲಿ ಖಾನ್​. 

Tap to resize

Latest Videos

ಅಮೃತಾ ಸಿಂಗ್​ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್​?

ಇವರ ಪೈಕಿ ಸಾರಾ ಸೈಫ್ ಅಲಿ ಖಾನ್ ಪುತ್ರಿ. ಇದೇ ಸೈಫ್​ ಅಲಿ ಖಾನ್​ ಮೊದಲು ಹಿಂದೂ ಧರ್ಮದ ಅಮೃತಾ ಸಿಂಗ್​ ಅವರನ್ನು ಮದುವೆಯಾಗಿದ್ದರು.  ಅಮೃತಾ ಸಿಂಗ್​ (Amruta Singh) ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು.  13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. ಆ ಸಮಯದಲ್ಲಿ  ಸಾರಾ ಅಲಿ ಖಾನ್​ಗೆ 10 ಮತ್ತು ಇಬ್ರಾಹಿಂ ಅಲಿ ಖಾನ್​ಗೆ 4 ವರ್ಷ. ಇದಾದ ಬಳಿಕ ತಮಗಿಂತ 10 ವರ್ಷ ಚಿಕ್ಕವಳಾದ ಕರೀನಾ ಕಪೂರ್​ ಅವರನ್ನು ಮದುವೆಯಾದರು. ಇವರಿಗೆ ತೈಮೂರ್​ ಅಲಿ ಖಾನ್​ ಮತ್ತು ಜೆಹ್​ ಅಲಿ ಖಾನ್​ ಎನ್ನುವ ಮಕ್ಕಳಿದ್ದಾರೆ. 

ಸದ್ಯ ಸಾರಾ ಅಲಿ ಖಾನ್​ (Sara Ali Khan) ಹಿಂದೂ ಸಂಪ್ರದಾಯವನ್ನೇ ಹೆಚ್ಚಾಗಿ ಫಾಲೋ ಮಾಡುತ್ತಿದ್ದು, ಸಕತ್​ ಟ್ರೋಲ್​ ಆಗುತ್ತಿದ್ದಾರೆ. ದೇವಸ್ಥಾನ, ಮಂದಿರಗಳಿಗೆ ಆಗಾಗ್ಗೆ ಭೇಟಿ ನೀಡುತ್ತಾರೆ. ಕೇದಾರನಾಥ, ಅಮರನಾಥ ಯಾತ್ರೆಯಂಥ ಕ್ಲಿಷ್ಟಕರ ಯಾತ್ರೆಯನ್ನೂ ಮಾಡಿ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. 

Sara Ali Khan: ಅಮರನಾಥ ಯಾತ್ರೆಯಲ್ಲಿ ಹರ್​ ಹರ್​ ಮಹಾದೇವ್ ಎಂದ ಸೈಫ್​ ಪುತ್ರಿ; ಧರ್ಮದ ಕುರಿತು ಚರ್ಚೆ ಶುರು!

click me!