ಸಿನಿಮಾ ಆಗ್ತಿದೆ ಪವನ್​ ಕಲ್ಯಾಣ್​ ಮೂರು ಮದ್ವೆ ವಿಷಯ: ಮಾಜಿ ಪತ್ನಿ ಹೇಳಿದ್ದೇನು?

By Suvarna News  |  First Published Aug 11, 2023, 6:17 PM IST

ಮೂರು ಮದುವೆಯಾಗಿರುವ ನಟ, ರಾಜಕಾರಣಿ ಪವನ್​ ಕಲ್ಯಾಣ್​ ಅವರ ಜೀವನದ ಕುರಿತು ವೆಬ್​ಸೀರೀಸ್​ ಮಾಡುವುದಾಗಿ ಘೋಷಣೆಯಾದ ಬೆನ್ನಲ್ಲೇ ಅವರ ಮಾಜಿ ಪತ್ನಿ ರೇಣು ದೇಸಾಯಿ ಹೇಳಿದ್ದೇನು?
 


ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ ಕೋನಿಡೇಲಾ ಕಲ್ಯಾಣ್ ಬಾಬು ಅರ್ಥಾತ್​ 'ಪವರ್ ಸ್ಟಾರ್' ಪವನ್ ಕಲ್ಯಾಣ್​ (Pawan Kalyan)  ನಟನೆ ಜೊತೆಗೆ ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯವಾಗಿಯೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸದ್ದು ಮಾಡುತ್ತಿದ್ದಾರೆ.  ಇವರು ತಮ್ಮ ಮದುವೆಯ ಕುರಿತು ಸದಾ  ಕಾಂಟ್ರವರ್ಸಿಯಲ್ಲಿಯೇ (Contraversy) ಇದ್ದಾರೆ.  ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು.  2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು,  2008ರಲ್ಲಿ ರೇಣು ಎಂಬುವವರನ್ನು  ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು.  ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್​ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಬಳಿಕ ಪವನ್​  ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು  ಮದುವೆಯಾಗಿದ್ದಾರೆ.  ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. 

ಮದುವೆ, ಸಂಬಂಧ ಮುರಿತದ ಕುರಿತು ಮಾತನಾಡಿದ್ದ ನಟ, ನಾನು  ಮದುವೆಯನ್ನೇ ಆಗಬಾರದು ಎಂದುಕೊಂಡವ, ಒಂಟಿತನ ಇಷ್ಟವಾಗಿತ್ತು.  ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲ ಮದುವೆ ಹೊಂದಾಣಿಕೆ ಆಗಲಿಲ್ಲ, ಅದಕ್ಕೇ ಎರಡನೆಯದ್ದು ಆದೆ. ಅದು ಕೂಡ  ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದ್ದವು. ಅದಕ್ಕೆ ಆ ಮದುವೆಗೂ (Marriage)ಅಂತ್ಯ ಹಾಡಿದೆ. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿಲ್ಲವಲ್ಲ,  ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು? ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ (Political) ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದರು.

Tap to resize

Latest Videos

3ನೇ ಪತ್ನಿಗೂ ಪವನ್ ಕಲ್ಯಾಣ್ ವಿಚ್ಚೇದನ: ಈ ಗಾಳಿ ಸುದ್ದಿ ಹಬ್ಬುತ್ತಿರುವುದ್ಯಾಕೆ?

ಇದರ ಬೆನ್ನಲ್ಲೇ ಈಗ ಅವರ ಮೂರು ಮದುವೆಯ ಕುರಿತು ವೆಬ್​ ಸರಣಿ ಮಾಡುವುದಾದರೆ ಸಚಿವ ಅಂಬಾಟಿ ರಾಮ್​ಬಾಬು ಹೇಳಿದ್ದಾರೆ. ತಾವು ಪವನ್ ಕಲ್ಯಾಣ್ ಬಗ್ಗೆ ವೆಬ್ ಸರಣಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಕೆಲವು ಹೆಸರುಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಪವನ್​ ಕಲ್ಯಾಣ್​ ಅಭಿನಯದ ‘ಬ್ರೋ’ ಚಿತ್ರ ಬಿಡುಗಡೆಗೊಂಡು ಹಿಟ್​ ಆದ ಬೆನ್ನಲ್ಲೇ  ಅವರ ಬಯೋಪಿಕ್ ಚಿತ್ರ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಪತ್ನಿ ರೇಣು ದೇಸಾಯಿ, ಪವನ್​ ಕಲ್ಯಾಣ್​ ಕುರಿತು ರಾಜಕೀಯ, ವೈಯಕ್ತಿಕ ದ್ವೇಷಗಳನ್ನು ನೀವು ಮುಂದುವರೆಸಿಕೊಳ್ಳಿ. ಆದರೆ  ನಾನೊಬ್ಬ ತಾಯಿಯಾಗಿ  ಮನವಿ ಮಾಡುತ್ತಿದ್ದೇನೆ, ನಿಮ್ಮ ರಾಜಕೀಯ, ವೈಯಕ್ತಿಕ ದ್ವೇಷಗಳ ಮಧ್ಯೆ  ಮಕ್ಕಳನ್ನು ಎಳೆದು ತರಬೇಡಿ ಎಂದಿದ್ದಾರೆ. ಈ ಮಕ್ಕಳು  ಸ್ಟಾರ್ ನಟ, ರಾಜಕಾರಣಿಯ ಮಕ್ಕಳೇ ಆಗಿದ್ದರೂ  ಅವರಿನ್ನೂ ಮಕ್ಕಳು ಎಂಬುದನ್ನು ಮರೆಯಬೇಡಿ. ನನ್ನ ಮಕ್ಕಳು ಮಾತ್ರವೇ ಅಲ್ಲ ಬೇರೆ ಇನ್ಯಾವುದೇ ಸೆಲೆಬ್ರಿಟಿಗಳ ಮಕ್ಕಳ ವಿಷಯವನ್ನೂ ರಾಜಕೀಯಕ್ಕೆ ಎಳೆಯಬೇಡಿ' ಎಂದಿದ್ದಾರೆ.

'ನನ್ನ ಮಾಜಿ ಪತಿ ಪವನ್ ಕಲ್ಯಾಣ್ ನನಗೆ ಮಾಡಿದ್ದು 100 ಪ್ರತಿಶತ ತಪ್ಪು. ಮತ್ತು ಆ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಆದ್ರೆ, ನಿಮ್ಮ ರಾಜಕೀಯ ದ್ವೇಷಕ್ಕಾಗಿ ನಮ್ಮ ವೈಯಕ್ತಿಕ ಜೀವನವನ್ನು ಕೆಣಕುವುದು ಬೇಡ. ನಮ್ಮ ವೈಯಕ್ತಿಕ ಜೀವನವನ್ನು ಕಳಂಕಗೊಳಿಸುವ ಅಥವಾ ತೊಂದರೆ ಉಂಟುಮಾಡುವ ಯಾವುದೇ ಚಲನಚಿತ್ರ ಅಥವಾ ವೆಬ್​ ಸಿರೀಸ್​  ಮಾಡಬೇಡಿ.  ನಾನು ಅವರಿಂದ  ನೋವುಂಡಿದ್ದರೂ,  ಆರಂಭದ ದಿನದಿಂದಲೂ ಅವರ ರಾಜಕೀಯ ಪಯಣಕ್ಕೆ ಬೆಂಬಲ ಸೂಚಿಸುತ್ತಲೇ ಬಂದಿದ್ದೇನೆ.  ಅವರಿಗೆ ಜನಗಳ ಮೇಲಿರುವ ಪ್ರೀತಿಯನ್ನು ಸುಳ್ಳು ಎನ್ನುವುದಾಗಲಿ ನಿರಾಕರಿಸುವುದಾಗಲಿ ಸಾಧ್ಯವಿಲ್ಲ, ಅವರಿಗೆ ಹಣದ ಬಗ್ಗೆ ಯೋಚನೆ ಇಲ್ಲ, ಆದರೆ ಜನರ ಬಗ್ಗೆ ಬಹಳ ಪ್ರೀತಿ, ಗೌರವ ಇದೆ. ಸಮಾಜವನ್ನು, ಜನರ ಜೀವನವನ್ನು ಬದಲಿಸಬೇಕು ಎಂಬ ದೊಡ್ಡ ಹಪಹಪಿ ಅವರಿಗೆ ಇದೆ ಅದನ್ನು ನಾನು ಹತ್ತಿರದಿಂದ ನೋಡಿದ್ದೇನೆ' ಎಂದಿದ್ದಾರೆ ರೇಣು ದೇಸಾಯಿ. 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

click me!