OMG 2: 25 ಕಡೆ ಕತ್ತರಿ ಹಾಕಿಸ್ಕೊಂಡು ಬಿಡುಗಡೆಯಾದ ಸಲಿಂಗಕಾಮದ ಚಿತ್ರಕ್ಕೆ ಫ್ಯಾನ್ಸ್​ ಹೇಳಿದ್ದೇನು?

By Suvarna News  |  First Published Aug 11, 2023, 5:06 PM IST

 25 ಕಡೆ ಕತ್ತರಿ ಹಾಕಿಸ್ಕೊಂಡು ಬಿಡುಗಡೆಯಾದ ಸಲಿಂಗಕಾಮದ ಚಿತ್ರ ಎನಿಸಿಕೊಂಡಿದ್ದ ಓ ಮೈ ಗಾಡ್​-2 ನೋಡಿ ವೀಕ್ಷಕರು ಹೇಳಿದ್ದೇನು? ಇಲ್ಲಿದೆ ವಿವರ
 


ನಟ ಅಕ್ಷಯ್​ ಕುಮಾರ್​ (Akshay Kumar)  ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಸೋಲು ಕಾಣುತ್ತಿರುವ ಹೊತ್ತಿನಲ್ಲಿಯೇ ಭರವಸೆ ಹೆಚ್ಚಿಸಲು ಬಂದ ಚಿತ್ರ ಓ ಮೈ ಗಾಡ್‌-2 (OMG 2) ಕೂಡ ವಿವಾದದಲ್ಲಿ ಸಿಲುಕಿತ್ತು. ಶಿವನ ಪಾತ್ರಧಾರಿಯಾಗಿರುವ ನಟ ಅಕ್ಷಯ್ ಕುಮಾರ್‌ ಅವರ ಫೋಟೋ ವೈರಲ್‌ ಆಗಿದ್ದ ಬೆನ್ನಲ್ಲೇ ವಿವಾದದ ಸುಳಿ ಸುತ್ತಿಕೊಂಡಿತ್ತು. ನಿಗದಿಯಂತೆ ಇಂದು ಅಂದರೆ ಆಗಸ್ಟ್​  11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದು ಕಷ್ಟ ಎಂದೇ ಹೇಳಲಾಗಿತ್ತು.  ಇದಕ್ಕೆ ಕಾರಣ,  ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ  ಸೆನ್ಸಾರ್ ಪತ್ರವನ್ನು ಕೊಡಲು ನಿರಾಕರಿತ್ತು. ಈ ಸಿನಿಮಾದ ಕಥೆ ಸಲಿಂಗ ಕಾಮಕ್ಕೆ (Homosexuality) ಸಂಬಂಧಿಸಿದ್ದು ಎಂಬ ಕಾರಣದಿಂದ  ಚಿತ್ರಕ್ಕೆ ಎಡಲ್ಟ್​ (ವಯಸ್ಕರ)  ಎ ಸರ್ಟಿಫಿಕೇಟ್​ ನೀಡಲಾಗಿತ್ತು. ಇವೆಲ್ಲಾ ವಿವಾದಗಳ ನಡುವೆಯೇ ಇಂದು ಓ ಮೈ ಗಾಡ್​ ಬಿಡುಗಡೆಯಾಗಿದೆ. 

 ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿಯಿಂದ 25 ಕಡೆ  ಕತ್ತರಿ ಹಾಕಿಸ್ಕೊಂಡಿರೋ ಈ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಕುತೂಹಲದ ವಿಷಯ ಏನೆಂದರೆ, ಈ ಚಿತ್ರಕ್ಕೆ ಜನರು ಅಪಾರ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸಿನಿಮಾಗೆ ಹಿನ್ನಡೆ ಆಗಬಹುದು ಎಂದು ಭಾವಿಸಿದ್ದೆಲ್ಲಾ ಬುಡಮೇಲಾಗಿದೆ.  ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದು, ಈ ಪೈಕಿ ಹಲವರು ಅಕ್ಷಯ್​ ಕುಮಾರ್​ ನಟನೆ ಜೊತೆಗೆ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.  ಮೊನ್ನೆಯಷ್ಟೇ ಇಶಾ ಯೋಗ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ (    Jaggi Vasudeva) ಕೂಡ ಚಿತ್ರದ ಬಗ್ಗೆ ಉತ್ತಮ ವಿಮರ್ಶೆಯನ್ನೇ ನೀಡಿದ್ದರು. ಈ ಚಿತ್ರದ ಬಗ್ಗೆ ಅಭಿಪ್ರಾಯ ಕೇಳಿ ಅಕ್ಷಯ್​ ಕುಮಾರ್​ ಖುದ್ದು ಸದ್ಗುರು ಅವರನ್ನು ಭೇಟಿಯಾಗಿ ವಿಮರ್ಶೆಗೆ ಕೋರಿದ್ದರು. ಆಗ ಸದ್ಗುರು ಅವರು,  ನಾವು ಮಹಿಳೆಯರ ಸುರಕ್ಷತೆ ಮತ್ತು ಘನತೆಗೆ ಸಂವೇದನಾಶೀಲವಾಗಿರುವ ಸಮಾಜವನ್ನು ಬೆಳೆಸಲು ಬಯಸುತ್ತಿದ್ದೇವೆ. ಇಂಥ ಸಮಯದಲ್ಲಿ ದೈಹಿಕ ಅಗತ್ಯಗಳನ್ನು (Physcial Desires) ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಯುವಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ. ನಮ್ಮ ಶಿಕ್ಷಣ ವ್ಯವಸ್ಥೆಯು ನಮ್ಮ ಯುವಕರನ್ನು ಸಂಪೂರ್ಣವಾಗಿ ಮಾಹಿತಿ ಆಧಾರಿತವಾಗಿರುವುದಕ್ಕಿಂತ ಹೆಚ್ಚಾಗಿ ಅವರ ದೇಹ, ಮನಸ್ಸು ಮತ್ತು ಭಾವನೆಗಳನ್ನು ನಿಭಾಯಿಸಲು ಸಜ್ಜುಗೊಳಿಸುವ ಸಮಯವಾಗಿದೆ ಎಂದು ಹೇಳಿದ್ದರು. ಇದೀಗ ಪ್ರೇಕ್ಷಕರಿಂದಲೂ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿದೆ. 

ಸಲಿಂಗ ಕಾಮದ 'ಓ ಮೈ ಗಾಡ್​-2' ವಿವಾದಿತ ಚಿತ್ರ ವೀಕ್ಷಿಸಿದ ಸದ್ಗುರು, ಚಿತ್ರದ ಬಗ್ಗೆ ಹೇಳಿದ್ದೇನು?

Fans shows their love and craziness as Akshay Kumar starrer Omg 2 got released today.😎😎 pic.twitter.com/M4SmDOHsxP

— Nitesh Naveen (@NiteshNaveenAus)

Tap to resize

Latest Videos


‘ಇದೊಂದು ಪೈಸಾ ವಸೂಲ್ ಸಿನಿಮಾ. ಎಲ್ಲರೂ ನೋಡಲೇಬೇಕಾದ ಚಿತ್ರ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅಕ್ಷಯ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ (Pankaj Tripathi) ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ತುಂಬಾ ಬೋಲ್ಡ್​ ಚಿತ್ರ, ಇದು ಇಂದಿನ ಅಗತ್ಯ ಎಂದೂ ಹಲವರು ಹೇಳಿದ್ದಾರೆ. ಚಿತ್ರವು ಭಾರತೀಯ ಶಾಲೆಗಳಲ್ಲಿನ ಲೈಂಗಿಕ ಶಿಕ್ಷಣದ ವಿಷಯದ ಸುತ್ತ ಸುತ್ತುತ್ತದೆ. ಅಕ್ಕಿಯು ಶಿವ ಗನ್ ಎಂದು ಕರೆಯಲ್ಪಡುವ ಶಿವನ ಸಂದೇಶವಾಹಕರಲ್ಲಿ ಒಬ್ಬನ ಪಾತ್ರವನ್ನು ನಿರ್ವಹಿಸುತ್ತಾನೆ, ಅವನ ಭಕ್ತರಿಗೆ ತೊಂದರೆಯಲ್ಲಿ ಸಹಾಯ ಮಾಡಲು ಹಿಂದೂ ಪುರಾಣಗಳ ಪ್ರಕಾರ ಮಹದೇವ್ ಸ್ವತಃ ನಂದಿಯ ಮೂಲಕ ತನ್ನ ವಾಹನವನ್ನು ನಿಯೋಜಿಸುತ್ತಾನೆ. ಪ್ರದರ್ಶನದಲ್ಲಿ ಪಂಕಜ್ ತ್ರಿಪಾಠಿ ಅವರ ಅಸಾಧಾರಣ ನಟನೆ ಇದೆ, ಅಕ್ಷಯ್ ಕುಮಾರ್ ಅವರ ದೈವಿಕ ಶಕ್ತಿ ಮನಮೆಚ್ಚುವಂಥದ್ದು ಎಂದು ಹಲವರು ಹೇಳಿದ್ದಾರೆ. ಇದರ ನಡುವೆಯೇ ಕೆಲವೇ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾರೆ.

OMG 2: ಶಿವನ ಪಾತ್ರಕ್ಕೇ ಕತ್ತರಿ? ದೇವರ ವೇಷ ತೊಟ್ಟ ಚಿತ್ರಕ್ಕೆ ಸಿಕ್ತು ಅಡಲ್ಟ್​ ಸರ್ಟಿಫಿಕೇಟ್​!
 
ಅಂದಹಾಗೆ, 2012ರಲ್ಲಿ ‘ಒಎಂಜಿ’ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಆಗಿತ್ತು. ಅದಕ್ಕೆ ಸೀಕ್ವೆಲ್​ ಆಗಿ ‘ಒಎಂಜಿ 2’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ.  

is added another cult film of Career ❤👌 What a performance & 💥🔥👍 Writing & Director is Excellent 💪💪🙏 pic.twitter.com/Yk2m7etwyO

— MoNi (@gazimonirul1234)
click me!