ಕೊನೆಗೂ ದಳಪತಿ ವಿಜಯ್ 'ಲಿಯೋ' ಸೆಟ್ ಸೇರಿದ ಸಂಜಯ್ ದತ್; ಫೋಟೋ ವೈರಲ್

Published : Mar 12, 2023, 10:52 AM ISTUpdated : Mar 12, 2023, 10:53 AM IST
ಕೊನೆಗೂ ದಳಪತಿ ವಿಜಯ್ 'ಲಿಯೋ' ಸೆಟ್ ಸೇರಿದ ಸಂಜಯ್ ದತ್; ಫೋಟೋ ವೈರಲ್

ಸಾರಾಂಶ

ವಿಜಯ್ ದಳಪತಿ ನಟನೆಯ ಲಿಯೋ ಸಿನಿಮಾ ಸೆಟ‌್‌ಗೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ಸ್ಟಾರ್ ನಟಿರು ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ದಳಪತಿ ವಿಜಯ್ ಸದ್ಯ ಲಿಯೋ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ಜೊತೆ ಸೌತ್ ಸಿನಿಮಾರಂಗದ ಖ್ಯಾತ ನಟಿ ತ್ರಿಷಾ ನಟಿಸುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಲಿಯೋ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಈ ಬಗ್ಗೆ ಸಿನಿಮಾತಂಡ ಕೂಡ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆದರೀಗ ಸಂಜಯ್ ದತ್ ನೇರವಾಗಿ ಚಿತ್ರೀಕರಣ ಸೆಟ್‌ಗೆ ಎಂಟ್ರಿ ಕೊಡುವ ಮೂಲಕ ದಳಪತಿ ಜೊತೆ ನಟಿಸುತ್ತಿರುವುದಾಗಿ ಅಧಿಕೃತಗೊಳಿಸಿದ್ದಾರೆ. 

ಲಿಯೋ ಸಿನಿಮಾ ಸೆಟ್‌ಗೆ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಮತ್ತು ದಳಪತಿ ಇಬ್ಬರೂ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಂಜಯ್ ದತ್ ಅವರನ್ನು ಸಿನಿಮಾತಂಡ ಅದ್ದೂರಿಯಾಗಿ ಸ್ವಾಗತ ಮಾಡಿದೆ. ದತ್ ಕೂಡ ಸಂತಸದಿಂದ ಸೌತ ಸಿನಿಮಾ ಸೆಟ್‌ಗೆ ಸೇರ್ಪಡೆಯಾಗಿದ್ದಾರೆ. ಅಂದಹಾಗೆ ಲಿಯೋ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಸಂಜಯ್ ದತ್ ಮತ್ತು ವಿಜಯ್ ಸೇರಿದಂತೆ ಇಡೀ ಸಿನಿಮಾತಂಡ ಕಾಶ್ಮೀರದಲ್ಲಿ ಬೀಡುಬಿಟ್ಟಿದೆ.

ಲಿಯೋ ಸಿನಿಮಾ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.  ವಿಕ್ರಮ್ ಸಿನಿಮಾದ ಸಕ್ಸಸ್‌ನಲ್ಲಿರುವ ಲೋಕೇಶ್ ಇದೀಗ ಲಿಯೋ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ನೀಡಲು ಮುಂದಾಗಿದ್ದಾರೆ. ಸಂಜಯ್ ದತ್ ಅವರನ್ನು ಸ್ವಾಗತಿಸಿದ ವಿಡಿಯೋ ಮತ್ತು ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಸಿನಿಮಾತಂಡ ವಿಡಿಯೋ ಶೇರ್ ಮಾಡಿ, 'ಬಹು ನಿರೀಕ್ಷಿತ ಮುಖಾಮುಖಿ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ದತ್ ಖಡಕ್ ವಿಲನ್ ಆಗಿ ನಟಿಸಲಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. 

ಕುಡಿದು ಡಾನ್ಸ್ ಮಾಡಿದ ಸಂಜಯ್ ದತ್ ಸಖತ್ ಟ್ರೋಲ್; ವಿಡಿಯೋ ವೈರಲ್

ಲಿಯೋ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳೇ ಆಗಿವೆ. ಇದೀಗ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ವಿಜಯ್ ಪಾತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ವೈರಲ್ ಆಗಿತ್ತು. ವಿಜಯ್ ಈ ಸಿನಿಮಾದಲ್ಲಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಲುಕ್ ಹೇಗಿರಲಿದೆ ಎನ್ನುವುದು ಈಗ ಅಭಿಮಾನಿಗಳ ಕುತೂಹಲ. ಕೆಜಿಎಫ್-2 ಸೂಪರ್ ಸಕ್ಸಸ್ ಬಳಿಕ ಸಂಜಯ್ ದತ್ ಸೌತ್ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಕೆಜಿಎಫ್ 2 ಬಳಿಕ ಕನ್ನದಲ್ಲಿ ಧ್ರುವ ಸರ್ಜಾ ಜೊತೆ ನಟಿಸುತ್ತಿರುವ ದತ್ ಇದೀಗ ತಮಿಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಮತ್ತು ದತ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ತುದುಗಾಲಿನಲ್ಲಿ ನಿಂತಿದ್ದಾರೆ.

'ಕೆಡಿ' ಚಿತ್ರ ತಂಡದ ಜತೆ ಸಂಜಯ್ ದತ್ ಪಾರ್ಟಿ: ಧ್ರುವ ಸರ್ಜಾ ಗೈರಾಗಿದ್ದು ಯಾಕೆ?

ವಿಜಯ್ ಮತ್ತು ಲೋಕೇಶ್ ಕನಗರಾಜ್ ಕಾಂಬಿನೇಷನ್ ಕೂಡ ಭಾರಿ ನಿರೀಕ್ಷೆ ಮೂಡಿಸಿದೆ. ಸಿನಿಮಾ ಅನೌನ್ಸ್ ಆದಾಗಿನಿಂದನೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ವಿಜಯ್ ಮತ್ತು ಸಂಜಯ್ ದತ್ ಜೊತೆಗೆ ಈ ಸಿನಿಮಾದಲ್ಲಿ ಪ್ರಿಯಾ ಆನಂದ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಇರುವ ಲಿಯೋ ಸಿನಿಮಾ ಇದೇ ವರ್ಷ ಅಕ್ಟೋಬರ್ 19ಕ್ಕೆ ತೆರೆಗೆ ಬರುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?