ಶಾಲಾ ಮಕ್ಕಳ ನೆರವಿಗೆ ನಿಂತ ನಟಿ ಸಂಯುಕ್ತಾ ಹೊರನಾಡು

Published : Jun 06, 2022, 10:40 AM ISTUpdated : Jun 06, 2022, 10:44 AM IST
ಶಾಲಾ ಮಕ್ಕಳ ನೆರವಿಗೆ ನಿಂತ ನಟಿ ಸಂಯುಕ್ತಾ ಹೊರನಾಡು

ಸಾರಾಂಶ

ಸೌಲಭ್ಯ ವಂಚಿತ ಶಾಲಾ ಮಕ್ಕಳ ನೆರವಿಗಾಗಿ ನಟಿ ಸಂಯುಕ್ತಾ ಹೊರಡು(Samyukta hornad) ಮುಂದಾಗಿದ್ದಾರೆ. ಕೇರ್‌ ಮೋರ್‌ ಫೌಂಡೇಶನ್(caremore foundation) ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ಬಳಸದೆ ಇರುವ ಮತ್ತು ಬಳಸಬಹುದಾದ ಹೊಸ ಬ್ಯಾಗ್‌ಗಳನ್ನು ದೇಣಿಗೆ ನೀಡುವ ಮೂಲಕ ಮಕ್ಕಳಿಗೆ ನೆರವಾಗಿ ಎಂದು ಸಂಯುಕ್ತಾ ಹೊರನಾಡು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸೌಲಭ್ಯ ವಂಚಿತ ಶಾಲಾ ಮಕ್ಕಳ ನೆರವಿಗಾಗಿ ನಟಿ ಸಂಯುಕ್ತಾ ಹೊರಡು(Samyukta hornad) ಮುಂದಾಗಿದ್ದಾರೆ. ಕೇರ್‌ ಮೋರ್‌ ಫೌಂಡೇಶನ್(caremore foundation) ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ಬಳಸದೆ ಇರುವ ಮತ್ತು ಬಳಸಬಹುದಾದ ಹೊಸ ಬ್ಯಾಗ್‌ಗಳನ್ನು ದೇಣಿಗೆ ನೀಡುವ ಮೂಲಕ ಮಕ್ಕಳಿಗೆ ನೆರವಾಗಿ ಎಂದು ಸಂಯುಕ್ತಾ ಹೊರನಾಡು ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯಾದ್ಯಂತ ಈಗಾಗಲೇ ಶಾಲೆಗಳು ಆರಂಭವಾಗಿವೆ. ಮಕ್ಕಳೆಲ್ಲ ಖುಷಿಯಾಗಿ ಶಾಲೆಗೆ ತೆರಳುತ್ತಾರೆ. ಆದರೆ ಅದೆಷ್ಟೋ ಮಕ್ಕಳಿಗೆ ಮನೆಯಲ್ಲಿನ ಬಡತನದ ಕಾರಣದಿಂದ ಇಂಥ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ ಸಿಕ್ಕುವುದೇ ಇಲ್ಲ. ಹೀಗೆ ಸೌಲಭ್ಯ ವಂಚಿತ ಮಕ್ಕಳಿಗೆ ಆಸರೆಯಾಗುವಂಥ ಕಾರ್ಯಕ್ರಮವನ್ನು ಕೇರ್‌ ಮೋರ್‌ ಫೌಂಡೇಶನ್ ರೂಪಿಸಿದ್ದು, ಇದರ ಮುಂಚೂಣಿಯಾಗಿ ನಟಿ ಸಂಯುಕ್ತಾ ಹೊರನಾಡು ಇದ್ದಾರೆ. ಜೂ.5 ರಿಂದ 20ರವರೆಗೆ ಮಕ್ಕಳಿಗೆ ನೇರವಾಗುವ ಅಭಿಯಾನ ನಡೆಯಲಿದೆ. ಬ್ಯಾಗ್‌ಗಳನ್ನು ದಾನ ಮಾಡಲಿಚ್ಚಿಸುವವರು ಹಾಗೂ ಈ ಅಭಿಯಾನದಲ್ಲಿ ಭಾಗವಹಿಸಲಿಚ್ಚಿಸುವವರು caremore foundation caremore fdn ಹೆಸರಿನ ಟ್ವಿಟ್ಟರ್‌ ಹಾಗೂ ಇನ್ಸಾಇನ್ಸ್ಟಾಗ್ರಾಮ್  ಪೇಜ್‌ಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

ನಟಿ ಸಂಯುಕ್ತ ಹೊರನಾಡು ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಮಾಜಮುಖಿ ಕೆಲಸಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸಂಯುಕ್ತ ಅವರು ಸಮಾಜಮುಖಿ ಕೆಲಸಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಅಲ್ಲದೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೀಗ ಸಂಯುಕ್ತ ಶಾಲಾ ಮಕ್ಕಳ ನೆರವಿಗೆ ನಿಂತಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.

ಇನ್ನು ಸಂಯುಕ್ತ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಸಂಯುಕ್ತ ಆ ದಿನಗಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ತಾಯಿ ಸುಧಾ ಬೆಳವಾಡಿ ಕೂಡ ಖ್ಯಾತ ನಟಿ. ಸಂಯುಕ್ತ ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭ ಮಾಡಿದವರು, ಬಳಿಕ 2007ರಲ್ಲಿ ಸಂಯುಕ್ತ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. 

ಶರಾವತಿ ಕಣಿವೆಯಲ್ಲಿ ಸಂಯುಕ್ತಾ ಹೊರನಾಡು..!

    ಲೈಫು ಇಷ್ಟೇನೆ, ಬರ್ಫಿ, ಒಗ್ಗರಣೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮಿಂಚಿದರು. ಸ್ಯಾಂಡಲ್ ವುಡ್ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಮಿಂಚಿದ್ದಾರೆ. 2019ರಲ್ಲಿ ನಾನು ಮತ್ತು ಗುಂಡ ಸಿನಿಮಾ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಬಳಿಕ ಕೃಷ್ಣ ಅಂಡ್ ಹಿಸ್ ಲೀಲಾ ಹಾಗೂ ಕೊನೆಯದಾಗಿ ಒನ್ ಕಟ್ ಟೂ ಕಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ದ್ಯಾನೀಶ್ ಸೇಠ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ಸಂಯುಕ್ತ ಮೈಸೂರು ಮಸಾಲ ಎನ್ನುವ ಕನ್ನಡ ಸಿನಿಮಾ ಮತ್ತು ರೆಡ್ ರಮ್ ಎನ್ನುವ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

    ಕಣ್ಣೆದುರೇ ಜನ ಸಾಯ್ತಿದ್ರೂ ಏನೂ ಮಾಡಲಾಗದ ಅಸಹಾಯಕತೆ: ಸಂಯುಕ್ತಾ ಹೊರನಾಡು

    ಸಿನಿಮಾ ಜೊತೆಗೆ ಸಂಯುಕ್ತಾ ವೆಬ್ ಸೀರಿಸ್ ನಲ್ಲೂ ಮಿಂಚಿದ್ದಾರೆ. ತೆಲುಗಿನ ಎರಡು ವೆಬ್ ಸೀರಿಸ್ ನಲ್ಲಿ ಸಂಯುಕ್ತ ನಟಿಸಿದ್ದಾರೆ. ಗಾಡ್ಸ್ ಆಫ್ ಧರ್ಮಪುರಿ ಮತ್ತು ಲಾಕ್ಡ್ ಸೀರಿಸ್ ಮೂಲಕ ತೆಲುಗು ವೆಬ್ ಸೀರಿಸ್ ಪ್ರಿಯರನ್ನು ರಂಜಿಸಿದ್ದರು. ಸಿವಿಮಾ, ವೆಬ್ ಸೀರಿಸ್ ಜೊತೆಗೆ ಸಮಾಜಮುಖಿ ಕೆಲಸಗಳು ಇತರರಿಗೆ ಮಾದರಿಯಾಗಿದೆ. 

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
    ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!