Threat letter ಸಿಧು ಮೂಸೆವಾಲ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಹಾಗೂ ತಂದೆಗೆ ಬೆದರಿಕೆ ಪತ್ರ!

By Suvarna News  |  First Published Jun 5, 2022, 9:24 PM IST
  • ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬಂತು ಬೆದರಿಕೆ ಪತ್ರ
  • ಮುಂಬೈ ಪೊಲೀಸರಿಂದ ತನಿಖೆ ಆರಂಭ, ಭದ್ರತೆ ಹೆಚ್ಚಳ
  • ಸಲ್ಮಾನ್ ಖಾನ್‌ಗೆ 2018ರಲ್ಲಿ ಲಾರೆನ್ಸ್ ಬಿಷ್ಮೋಯಿ ಹಾಕಿದ್ದ ಬೆದರಿಕೆ

ಮುಂಬೈ(ಜೂ.05): ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ ಬಂದಿದೆ. ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಹಾಗೂ ಕುಟುಂಬಸ್ಥರ ಭದ್ರತೆ ಹೆಚ್ಚಿಸಿದ್ದಾರೆ. ಇಷ್ಟೇ ಅಲ್ಲ ಈ ಕುರಿತು ತನಿಖೆ ಆರಂಭಿಸಿದ್ದಾರೆ.

ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಪ್ರತಿ ಬೆಳಗ್ಗೆ ವಾಕಿಂಗ್ ಹೋದ ಸಂದರ್ಭದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಗಳು ಈ ಬೆದರಿಕೆ ಪತ್ರ ಗಮನಿಸಿದ್ದಾರೆ. ಈ ಬೆದರಿಕೆ ಪತ್ರದಲ್ಲಿ ಸಿಧು ಮೂಸೆ ವಾಲಾಗೆ ಮಾಡಿದ ರೀತಿಯಲ್ಲೇ ಮಾಡುತ್ತೇವೆ ಎಂದು ಬರೆಯಲಾಗಿದೆ. ಇದರಿಂದ ಬೆದರಿಕೆ ಹಿಂದೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ನೋಯ್ ಪಾತ್ರವಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಕಾರಣ ಸಿಧು ಮೂಸೆ ವಾಲಾ ಹತ್ಯೆ ಹಿಂದೆ ಲಾರೆನ್ಸ್ ಗ್ಯಾಂಗ್ ಕೈವಾಡವಿದೆ ಅನ್ನೋದನ್ನು ಸ್ವತ ಲಾರೆನ್ಸ್ ಬಹಿರಂಗ ಪಡಿಸಿದ್ದ. ಹೀಗಾಗಿ ಸಲ್ಮಾನ್ ಖಾನ್ ಹಾಗೂ ಕುಟಂಬಸ್ಥರಿಗೆ ನೀಡಿರುವ ಬೆದರಿಕೆ ಹಿಂದೆ ಲಾರೆನ್ಸ್ ಬಿಷ್ನೋಯ್ ಹಾಗೂ ಆತನ ಗ್ಯಾಂಗ್ ಕೈವಾಡವಿದೆ ಅನ್ನೋ ಅನುಮಾನ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tap to resize

Latest Videos

ನಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ವ್ಯಕ್ತಿ ಎಂದು ಸ್ಕೂಲ್ ಆಪರೇಟರ್ ಗೆ ಬಂತು ಬೆದರಿಕೆ ಕರೆ!

ಪೊಲೀಸರ ಅನುಮಾನ ಬಲಗೊಳ್ಳಲು ಮತ್ತೊಂದು ಕಾರಣವಿದೆ. 2018ರಲ್ಲಿ ಸಲ್ಮಾನ್ ಖಾನ್‌ಗೆ ಇದೇ ಲಾರೆನ್ಸ್ ಬಿಷ್ನೋಯ್ ಬೆದರಿಕೆ  ಹಾಕಿದ್ದ. ಕೃಷ್ಣಮೃಗ ಭೇಟೆ ಪ್ರಕರಣ ಸಂಬಂಧ ಲಾರೆನ್ಸ್ ಬೆದರಿಕೆ ಹಾಕಿದ್ದ. ಹೀಗಾಗಿ ಲಾರೆನ್ಸ್ ಹಾಗೂ ಆತನ ಗ್ಯಾಂಗ್ ಈ ಹಿಂದಿನಿಂದಲ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಕಾರುತ್ತಲೇ ಬಂದಿದೆ. ಹೀಗಾಗಿ ಪೊಲೀಸರ ಅನುಮಾನಗಳು ಬಲಗೊಂಡಿದೆ.

ಬೆದರಿಕೆ ಪತ್ರ ಸಿಕ್ಕ ಜಾಗದಲ್ಲಿನ ಸಿಸಿಟಿವಿಗಳನ್ನು ಮುಂಬೈ ಪೊಲೀಸರು ಪರೀಶಿಲಿಸಿದ್ದಾರೆ. ಸಿಧು ಮೂಸೆ ವಾಲಾ ಹತ್ಯೆ ಬಳಿಕ ಸೇಡು ತೀರಿಸಿಕೊಳ್ಳುವ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಲಾರೆನ್ಸ್ ಗ್ಯಾಂಗ್ ಹಲವರಿಗೆ ಬೆದರಿಕೆ ನೀಡಿರುವ ಘಟನೆಗಳು ಬೆಳಕಿಗೆ ಬಂದಿದೆ.

ಎರಡು ದಿನದಲ್ಲೇ ರಿಸಲ್ಟ್, ಸಿಧು ಹತ್ಯೆಗೆ ಮೊಳಗಿತು ಪ್ರತೀಕಾರ ಎಚ್ಚರಿಕೆ!

ಸಿಧು ಹತ್ಯೆ:
ಪಂಜಾಬ್‌ ಸರ್ಕಾರ ಸಿಧು ಭದ್ರತೆಯನ್ನು ಹಿಂಪಡೆದ ಬೆನ್ನಲ್ಲೇ ದರೋಡೆಕೋರರಿಂದ ಸುಲಿಗೆ ಕರೆಗಳು, ಜೀವ ಬೆದರಿಕೆ ಬರುತ್ತಿದ್ದ ಕಾರಣದಿಂದಾಗಿ ಪುತ್ರನ ಸುರಕ್ಷತೆಗೆ ಮೂಸೆವಾಲಾ ಕಾರಿನ ಹಿಂದೆಯೇ ಅವರ ತಂದೆ ಭದ್ರತಾ ಸಿಬ್ಬಂದಿಯೊಂದಿಗೆ ಬುಲೆಟ್‌ ಪ್ರೂಫ್‌ ಕಾರಿನಲ್ಲಿ ತೆರಳಿದ್ದರು. ಹೀಗಾಗಿ ದುಷ್ಕರ್ಮಿಗಳು ತಮ್ಮ ಪುತ್ರನನ್ನು ಗುಂಡಿನ ದಾಳಿ ನಡೆಸಿದ ದೃಶ್ಯವನ್ನು ಅವರ ತಂದೆ ಅಸಹಾಯಕಾರಿ ನೋಡುವಂತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶಾ ಭೇಟಿಯಾದ ಸಿಧು ಪಾಲಕರು: ಕೇಂದ್ರೀಯ ತನಿಖೆಗೆ ಕಣ್ಣೀರ ಮನವಿ
ಇತ್ತೀಚೆಗೆ ಹತ್ಯೆಗೀಡಾದ ಗಾಯಕ ಸಿಧು ಮೂಸೇವಾಲಾರ ಪೋಷಕರು, ಶನಿವಾರ ಇಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರು. ಈ ವೇಳೆ, ಪುತ್ರನ ಹತ್ಯೆಯಾಗಿ ವಾರ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಹೀಗಾಗಿ ಹತ್ಯೆ ಕುರಿತು ಕೇಂದ್ರೀಯ ತನಿಖೆ ನಡೆಸಬೇಕೆಂದು ಸಿಧು ಅವರ ತಂದೆ ಬಾಲ್‌ಕೌರ್‌ ಸಿಂಗ್‌ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಮೇ 29 ರಂದು ಪಂಜಾಬಿನ ಮಾನ್ಸಾದಲ್ಲಿ ಗಾಯಕ ಸಿಧು ಮೂಸೇವಾಲಾ ಅವರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದರು.

click me!