'ನಿಮ್ಮನ್ನು ನೀವು ಹೆಚ್ಚು ಪ್ರೀತಿಸಿ' ಸ್ಫೂರ್ತಿದಾಯಕ ಸಾಲುಗಳ ಜೊತೆಗೆ ಸುಂದರ ಫೋಟೋ ಶೇರ್ ಮಾಡಿದ ರಾಧಿಕಾ ಪಂಡಿತ್

By Shruiti G KrishnaFirst Published May 14, 2022, 2:44 PM IST
Highlights

ರಾಧಿಕಾ ಪಂಡಿತ್ ಆಗಾಗ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ. ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ಸ್ಫೂರ್ತಿದಾಯಕ​ ಸಾಲಗಳನ್ನು ಶೇರ್ ಮಾಡುತ್ತಾರೆ. ಇದೀಗ ರಾಧಿಕಾ ಪಂಡಿತ್​ ಹೊಸ ಫೋಟೋ ಹಂಚಿಕೊಂಡಿದ್ದಾರೆ, ಫೋಟೋ ಜೊತೆ ನೀಡಿದ ಕ್ಯಾಪ್ಷನ್ ಆಕರ್ಷವಾಗಿದೆ.

ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್(Radhika Pandit) ಪತಿ ಯಶ್(Yash) ನಟನೆಯ ಕೆಜಿಎಫ್-2(KGF 2) ಸಕ್ಸಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ವಿಶ್ವದಾದ್ಯಂತ ಸಿನಿಮಾ ಸದ್ದು ಮಾಡುತ್ತಿದೆ. ಪತಿಯ ಸಿನಿಮಾದ ಸಕ್ಸಸ್ ರಾಧಿಕಾ ಖುಷಿ ಇಮ್ಮಡಿಗೊಳಿಸಿದೆ. ಅಂದಹಾಗೆ ರಾಧಿಕಾ ಸದ್ಯ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿದ್ದಾರೆ. ಸಿನಿಮಾದಿಂದ ದೂರ ಆಗಿದ್ದರು ರಾಧಿಕಾ ಖ್ಯಾತಿ ಕೊಂಚವು ಕಮ್ಮಿ ಆಗಿಲ್ಲ. ರಾಧಿಕಾ ಮತ್ತೆ ಸಿನಿಮಾರಂಗಕ್ಕೆ ಮರಳಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಧಿಕಾ ಸ್ಟಾರ್ ನಟಿಯಾಗಿದ್ದರೂ ಯಶ್ ಪತ್ನಿ ಎಂಬ ಕಾರಣಕ್ಕೂ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ರಾಧಿಕಾ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಕ್ಕಳ ಕ್ಯೂಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೊಸ ಹೊಸ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ. ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ಸ್ಫೂರ್ತಿದಾಯಕ​ ಸಾಲಗಳನ್ನು ಶೇರ್ ಮಾಡುತ್ತಾರೆ. ಇದೀಗ ರಾಧಿಕಾ ಪಂಡಿತ್​ ಹೊಸ ಫೋಟೋ ಹಂಚಿಕೊಂಡಿದ್ದಾರೆ, ಸುಂದರ ಫೋಟೋ ಜೊತೆ ನೀಡಿದ ಕ್ಯಾಪ್ಷನ್ ಆಕರ್ಷವಾಗಿದೆ.

ನಿಮ್ಮನ್ನು ನೀವು ಹೆಚ್ಚು ಪ್ರೀತಿಸುತ್ತೀರಿ. ನೀವು ಇನ್ನು ಸುಂದರವಾಗಿರುತ್ತೀರಿ ಎಂದು ಹೇಳಿದ್ದಾರೆ. ರಾಧಿಕಾ ಈ ಪೋಸ್ಟ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಮಕ್ಕಳ ಮುದ್ದಾದ ವಿಡಿಯೋ ಹಂಚಿಕೊಳ್ಳುತ್ತಾರೆ. ಇದು ಅಭಿಮಾನಿಗಳಿಗೆ ಸಖತ್ ಇಷ್ಟ ಆಗುತ್ತದೆ. ಅಲ್ಲದೆ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ.


ಪತ್ನಿ ರಾಧಿಕಾ ಪಂಡಿತ್‌ಗೆ ಮುತ್ತಿಟ್ಟ ಕೆಜಿಎಫ್ ನಟ ಯಶ್ ಫೋಟೋ ವೈರಲ್!

 

ಇನ್ನು ಇತ್ತೀಚೆಗೆ ಯಶ್ ಇಬ್ಬರೂ ಮುದ್ದಾದ ಮಕ್ಕಳ ಜೊತೆ ಆಟವಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಶ್ ಹಾಗೂ ಐರಾ ಇಬ್ಬರೂ ಸೇರಿ ಯಥರ್ವ್​​ನನ್ನು ಹೆದರಿಸಿದ್ದರು. ಯಶ್ ಅವರ ಟೈಗರ್ ಘರ್ಜನೆಗೆ ಯಥರ್ವ್ ಹೆದರಿ ಓಡಿಹೋಗುತ್ತಾನೆ. ಓಡ್ತಾ ಗಣೇಶ ಎಂದು ಯಶ್ ಮತ್ತು ಮಗಳು ಜೋರಾಗಿ ನಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಅಲ್ಲದೆ, ಲಕ್ಷಾಂತರ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ.

ಗೋವಾದಲ್ಲಿ ರಾಕಿಂಗ್ ದಂಪತಿ; ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದ ಫ್ಯಾನ್ಸ್

ಕೆಜಿಎಫ್-2 ಸಿನಿಮಾದ ಭರ್ಜರಿ ಸಕ್ಸಸ್ ಬಳಿಕ ಯಶ್ ಮಕ್ಕಳು ಮತ್ತು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿರುವ ಯಶ್ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತವಾಗಿ ಎಲ್ಲೂ ರಿವೀಲ್ ಮಾಡಿಲ್ಲ. ಇತ್ತೀಚಿಗೆ ಯಶ್ ಪತ್ನಿ ರಾಧಿಕಾ ಜೊತೆ ಸ್ನೇಹಿತನ ಮದುವೆಗೆ ಎಂಟ್ರಿ ಕೊಟ್ಟಿದ್ದರು. ಯಶ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ರಾಕಿಂಗ್ ಸ್ಟಾರ್ ಜೊತೆ ಸೆಲ್ಪಿಗಾಗಿ ಅಭಿಮಾನಿಗಳಲ್ಲಿ ನೂಕುನುಗ್ಗಲು ಉಂಟಾತ್ತು. ಜನಸಾಗರವನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿತ್ತು.

click me!