ಪೂಜಾ ಹೆಗ್ಡೆ ಕೈಯಲ್ಲಿ ಸಲ್ಮಾನ್ ಖಾನ್ ಸಿಗ್ನೇಚರ್ ಬ್ರೇಸ್ಲೆಟ್; ಫೋಟೋ ವೈರಲ್

Published : May 14, 2022, 12:31 PM IST
ಪೂಜಾ ಹೆಗ್ಡೆ ಕೈಯಲ್ಲಿ ಸಲ್ಮಾನ್ ಖಾನ್ ಸಿಗ್ನೇಚರ್ ಬ್ರೇಸ್ಲೆಟ್; ಫೋಟೋ ವೈರಲ್

ಸಾರಾಂಶ

ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ನಟಿ ಪೂಜಾ ಹೆಗ್ಡೆ ಸಂತಸದಿಂದ ಫೋಟೋ ಶೇರ್ ಮಾಡಿದ್ದಾರೆ. ಅಂದಹಾಗೆ ಪೂಜಾ ಹಂಚಿಕೊಂಡಿರುವ ಫೋಟೋ ಅಭಿಮಾನಿಗಳಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಬಹುಭಾಷಾ ನಟಿ ಪೂಜಾ ಹೆಗ್ಡೆ(Pooja Hegde) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೂಜಾ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಆದರೂ ಸಿನಿಮಾಗಳ ಆಫರ್ ಕಮ್ಮಿಯಾಗಿಲ್ಲ. ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಪೂಜಾ ಹೆಗ್ಡೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಮೂರು ಭಾಷೆಯಲ್ಲಿ ಬ್ಯುಸಿಯಾಗಿರುವ ಪೂಜಾ ಸದ್ಯ ಹಿಂದಿಯಲ್ಲಿ ಸಲ್ಮಾನ್ ಖಾನ್( Salman Khans) ಜೊತೆ ನಟಿಸುತ್ತಿದ್ದಾರೆ.

ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ನಟಿ ಪೂಜಾ ಹೆಗ್ಡೆ ಸಂತಸದಿಂದ ಫೋಟೋ ಶೇರ್ ಮಾಡಿದ್ದಾರೆ. ಅಂದಹಾಗೆ ಪೂಜಾ ಹಂಚಿಕೊಂಡಿರುವ ಫೋಟೋ ಅಭಿಮಾನಿಗಳಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಅಂದಹಾಗೆ ಪೂಜಾ ಶೇರ್ ಮಾಡಿರುವ ಫೋಟೋದಲ್ಲಿ ಪೂಜಾ, ಸಲ್ಮಾನ್ ಖಾನ್ ಅವರ ಸಿಗ್ನೇಚರ್ ಬ್ರೇಸ್ಲೇಟ್ ಅನ್ನು(signature bracelet) ತನ್ನ ಧರಿಸಿ ಪೋಸ್ ನೀಡಿದ್ದಾರೆ. 

ಸಾಲು ಸಾಲು ಸೋಲಿನಿಂದ ಕಂಗಾಲಾಗಿ ಕಾಪು ದೇವಸ್ಥಾನಕ್ಕೆ ಬಂದ್ರಾ ಪೂಜಾ ಹೆಗ್ಡೆ?

ಪೂಜಾ ಹೆಗ್ಡೆ ಫೋಟೋಗೆ ಅಭಿಮಾನಿಗಳು ಸಲ್ಮಾನ್ ಭಾಯ್ ಎಂದು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಕಭಿ ಈದ್ ಕಭಿ ದಿವಾಳಿ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಮೊದಲ ಬಾರಿಗೆ ಪೂಜಾ ಸಲ್ಮಾನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದು ಸಿನಿಮಾ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಅಂದಹಾಗೆ ಪೂಜಾ ಹೆಗ್ಡೆ ದಕ್ಷಿಣ ಭಾರತದ ಬಹುತೇಕ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲೂ ಈಗಾಗಲೇ ಹೃತಿಕ್ ರೋಷನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಇದೀಗ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಕರಾವಳಿ ಸುಂದರಿ ರೊಮ್ಯಾನ್ಸ್; ಇಲ್ಲಿದೆ ವಿವರ

ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಜೊತೆಗೆ ಆಯುಷ್ ಶರ್ಮಾ ಮತ್ತು ಜಹೀರ್ ಅಕ್ಬಾಲ್ ಕೂಡ ನಟಿಸುತ್ತಿದ್ದಾರೆ. ಅಂದಹಾಗೆ ಶಹನಾಜ್ ಗಿಲ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ಸದ್ಯ ಭರ್ಜರಿಯಾಗಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು ಈ ವರ್ಷದ ಕೊನೆಯಲ್ಲಿ ಸಿನಿಮಾ ತೆರೆಗೆ ತರಲು ತಯಾರಿ ನಡೆಸುತ್ತಿದ್ದಾರೆ.

ಇನ್ನು ಪೂಜೆ ಹೆಗ್ಡೆ ಸಿನಿಮಾಗಳ ಬಗ್ಗೆ ಹೇಳುವುದಾದರೆ ದಕ್ಷಿಣ ಭಾರತದಲ್ಲಿ ಸಾಲು ಸಾಲುಗಳಲ್ಲಿ ಬ್ಯುಸಿಯಾಗಿದ್ದಾರೆ. ಪೂಜಾ ಒಂದು ಕಾಲದಲ್ಲಿ ಲಕ್ಕಿ ನಾಯಕಿ ಎಂದು ಗುರುತಿಸಿಕೊಂಡಿದ್ದರು. ಎಲ್ಲಾ ಸಿನಿಮಾಗಳು ಸೂಪರ್ ಆಗಿದ್ದವು. ಆದರೀಗ ಬ್ಯಾಕ್ ಟು ಬ್ಯಾಕ್ ಸೋಲಿನ ಸುಳಿಯಲ್ಲಿದ್ದಾರೆ. ದಕ್ಷಿಣದಲ್ಲಿ ಪೂಜಾ, ಬೊಟ್ಟಬೊಮ್ಮ ಆಗಿ ಸೂಪರ್ ಸಕ್ಸಸ್ ಕಂಡಿದ್ರು. ಇತ್ತೀಚಿಗೆ ನಟಿಸಿದ `ರಾಧೆ ಶ್ಯಾಮ್’,`ಬೀಸ್ಟ್’ ಮತ್ತು `ಆಚಾರ್ಯ’ ಚಿತ್ರಗಳು ಹೀನಾಯ ಸೋಲು ಕಂಡಿವೆ. ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಲು ವಿಫಲವಾಗಿವೆ. ಆದರು ಆಫರ್ ಗಳೇನು ಕಮ್ಮಿ ಆಗಿಲ್ಲ.

ತೆಲುಗಿನಲ್ಲಿ ಪೂಜಾ ಸದ್ಯ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ತಮಿಳಿನಲ್ಲಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಈ ಎರಡು ದೊಡ್ಡ ಸಿನಿಮಾಗಳ ಜೊತೆಗೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?