
ಬೆಂಗಳೂರು (ಮೇ.18): ಸೆಮಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ನೆರವು ನೀಡಲು ನಟ ಉಪೇಂದ್ರ ಮುಂದಾಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ತಾವೇ ನೇರವಾಗಿ ಖರೀದಿಸುತ್ತಾರೆ. ಬಳಿಕ ಕೂಲಿ ಕಾರ್ಮಿಕರು ಸೇರಿದಂತೆ ಕಷ್ಟದಲ್ಲಿರುವ ಜನರಿಗೆ ವಿತರಿಸುತ್ತಿದ್ದಾರೆ.
ಚಿತ್ರನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ರೈತರ ಬೆಳೆ ಖರೀದಿ ಮಾಡಿ ಅಗತ್ಯವಿರುವ ಜನರಿಗೆ ಉಚಿತವಾಗಿ ಹಂಚುವ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
3,000 ಸಿನಿ ಕಾರ್ಮಿಕರ ಕುಟುಂಬಕ್ಕೆ ಉಪ್ಪಿ ನೆರವು ...
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಗ್ರಾಮದ ಯುವ ರೈತ ಮಹೇಶ್ ತಂದೆ ಯಲ್ಲಪ್ಪ ಅವರು ತಾವು ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಉಪೇಂದ್ರ ಅವರನ್ನು ಸಂಪರ್ಕಿಸಿದ್ದಾರೆ. ಉಪೇಂದ್ರ ಅವರು ತಮ್ಮ ಬೆಂಗಳೂರಿನ ಕತ್ರಗುಪ್ಪೆ(ಬನಶಂಕರಿ) ಮೊದಲನೇ ಕ್ರಾಸ್‌ನಲ್ಲಿರುವ ನಿವಾಸಕ್ಕೆ ಈರುಳ್ಳಿಯನ್ನು ತರಿಸಿಕೊಂಡು 37 ಸಾವಿರ ಹಣವನ್ನು ರೈತನ ಕೈಗಿಟ್ಟಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದ ರೈತ ಶಿವಕುಮಾರ್ ಅವರು ತಾವು ಬೆಳೆದ ಟೊಮೆಟೋಗೆ ಕೇವಲ ಅಸಲು ಮತ್ತು ಸಾಗಣೆ ವೆಚ್ಚ ಸೇರಿ 10 ಸಾವಿರ ಮಾತ್ರ ಪಡೆದಿದ್ದಾರೆ. ಇನ್ನು ಮತ್ತೊಬ್ಬ ರೈತ ಮಂಜುನಾಥ್ ಅವರು 3,640 ಕೇಜಿ ಸಿಹಿ ಕುಂಬಳವನ್ನು 23 ಸಾವಿರಕ್ಕೆ ಉಪೇಂದ್ರ ಖರೀದಿಸಿದ್ದಾರೆ. ಅಲ್ಲದೆ ಇನ್ನೂ ಹಲವು ರೈತರಿಂದ ಉಪೇಂದ್ರ ತರಕಾರಿಗಳನ್ನು ಖರೀದಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.