
ತೆಲುಗು ಚಿತ್ರರಂಗದಲ್ಲಿ ಸುಮಾರು 250ಕ್ಕೂ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಪಾವಲ ಶ್ಯಾಮಲಾ, ಇದೀಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲೂ ಸ್ಟಾರ್ ನಟರಾದ ಕಮಲ್ ಹಾಸನ್, ಚಿರಂಜೀವಿ, ಪವನ್ ಕಲ್ಯಾಣ್, ಜೂ.ಎನ್‌ಟಿಆರ್, ಅಲ್ಲು ಅರ್ಜುನ್ ಸೇರಿದಂತೆ ಅನೇಕರ ಜೊತೆ ತೆರೆ ಹಂಚಿಕೊಂಡಿದ್ದಾರೆ ಈ ಕಲಾವಿದೆ.
ಹಿರಿಯ ನಟ ಅಮರನಾಥ್‌ಗೆ ಫುಡ್‌ಕಿಟ್ ಹಾಗೂ ಮೆಡಿಸಿನ್ ನೀಡಿದ ಭುವನ್ ಪೊನ್ನಣ್ಣ!
ಇದೀಗ ವಯೋಸಹಜ ಕಾಯಿಲೆಗಳಿಂದ ಪಾವಲಾ ಬಳಲುತ್ತಿದ್ದು, ಆರ್ಥಿಕ ನೆರವಿನ ಅಗತ್ಯವಿದೆ. ಪಾವಲಾ ಅವರ ಪತಿ ಕೆಲವು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತೀರಿಕೊಂಡರು. ಪುತ್ರಿ ಮನೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡು, ಹಾಸಿಗೆಯಿಂದ ಮೇಲೇಳಲು ನಟಿಗೆ ಸಾಧ್ಯವಾಗುತ್ತಿಲ್ಲ. ಪಾವಲಾ ಒಬ್ಬರೇ ಇಡೀ ಮನೆ ನಡೆಸುತ್ತಿದ್ದ ಕಾರಣ ಈಗಿನ ಪರಿಸ್ಥಿತಿಯಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕಳೆದ ವರ್ಷ ತೆಲಂಗಾಣ ಸರ್ಕಾರ ಪಾವಲಾಗೆ ತಿಂಗಳು ಹತ್ತು ಸಾವಿರ ನೀಡಿ, ಒಂದು ಡಬಲ್ ಬೆಡ್‌ರೂಂ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದು, ಆದರೆ ಮನೆ ಕಟ್ಟುವ ಕೆಲಸ ಕೂಡ ಪ್ರಾರಂಭವಾಗಿಲ್ಲ. ಕಳೆದು ಮೂರು ತಿಂಗಳಿನಿಂದ ಮನೆ ಬಾಡಿಗೆ ಸಹ ಕಟ್ಟಿಲ್ಲ, ಎಂದು ಮಾಧ್ಯಮವೊಂದಕ್ಕೆ ಅವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಕರಾಟೆ ಕಲ್ಯಾಣಿ ಈ ನಟಿಗೆ ಸಹಾಯ ಮಾಡಿದ್ದರು. ಆದೀರಗ ಮತ್ತೆ ಸಹಾಯ ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.