
ಹಾಲಿವುಡ್ ಚಿತ್ರತಂಡ ಬಹು ಬೇಡಿಕೆಯ ನಟ, 'ಫೆಂಟಾಸ್ಟಿಕ್ ಬೀಸ್ಟ್' ಹೀರೋ ಕೆವಿನ್ ಗತ್ರಿ 2017ರಲ್ಲಿ ಮಹಿಳೆ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದರೆಂಬ ಆರೋಪವಿತ್ತು. ಪೊಲೀಸರಿಗೆ ದೂರು ದಾಖಲಿಸಿದ ಮಹಿಳೆ ಸುಮಾರು ಮೂರು ವರ್ಷಗಳ ಹೋರಾಟ ನಡೆಸಿ, ಕೆವಿನ್‌ಗೆ ಶಿಕ್ಷೆ ವಿಧಿಸುವಂತೆ ಮಾಡಿದ್ದಾಳೆ. ಈ ವಿಚಾರದ ಬಗ್ಗೆ ಬಿಸಿಸಿ ವರದಿ ಮಾಡಿದೆ.
2017ರಲ್ಲಿ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್‌ಗೋವ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಮಹಿಳೆ ಮೇಲೆ ಕೆವಿನ್ ಲೈಂಗಿನ ದೌರ್ಜನ್ಯ ಎಸಗಿದ್ದರು. ತಕ್ಷಣವೇ ಮಹಿಳೆ ದೂರು ದಾಖಲಿಸಿದ್ದರು. ಕೆವಿನ್ ಬಗ್ಗೆ ಎಲ್ಲೆಡೆ ಆರೋಪಗಳು ಹರಿದಾಡಲು ಆರಂಭಿಸಿದಾಗ ತಮ್ಮ ವಿರುದ್ಧ ಯಾರೋ ಪಿತೂರಿ ನಡೆಸುತ್ತಿದ್ದಾರೆ, ಎಂದು ಹೇಳಲು ಆರಂಭಿಸಿದ್ದರು. ನಂತರ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಸಹಾಯ ಮಾಡಲು ಮುಂದಾಗಿದ್ದೆ ಎಂದೂ ಹೇಳಿ ತಮ್ಮ ತಪ್ಪನ್ನು ಮುಚ್ಚು ಹಾಕುವ ಪ್ರಯತ್ನ ಮಾಡಿದ್ದರು.
ಸಂಜನಾ VS ವಂದನಾ, ಹಳೆ ಕೇಸಿಗೆ ಟ್ವಿಸ್ಟ್.. ಗಲ್ರಾನಿಗೆ FIR ಸಂಕಷ್ಟ!
ಮಹಿಳೆ ಪರವಾಗಿ ಅನೇಕರು ಧ್ವನಿ ಎತ್ತಿದ ಕಾರಣ ಪೊಲೀಸರು ಕಠಿಣಕ್ರಮ ಕೈಗೊಂಡು ತನಿಖೆ ಆರಂಭಿಸಿದ್ದರು. ಮಹಿಳೆಯ ಬಟ್ಟೆ ಮೇಲೆ ಕೆವಿನ್ ವಿರ್ಯಾಣು ಪತ್ತೆಯಾಗಿದೆ. ಇಬ್ಬರೂ ವಿಚಾರಣೆಯಲ್ಲಿ ಭಾಗಿಯಾಗುತ್ತಿದ್ದರು, ಕೋರ್ಟ್‌ನಲ್ಲಿ ಕೆವಿನ್ ಅಪರಾಧಿ ಎಂದು ಸಾಬೀತಾಗಿದೆ. ಹೀಗಾಗಿ ಕೋರ್ಟ್ ಕೆವಿನ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.