ಮಾಲ್ಡೀವ್ಸ್‌ನಲ್ಲಿ ಸನಾ ಖಾನ್: ಮಾಜಿ ನಟಿಯ ಬೀಚ್ ವೈಬ್ಸ್ ಹೀಗಿದೆ

By Suvarna News  |  First Published Aug 12, 2021, 4:15 PM IST
  • ಮಾಲ್ಡೀವ್ಸ್‌ನಲ್ಲಿ ಮಾಜಿ ನಟಿ ಸನಾ ಖಾನ್
  • ಪತಿಯ ಜೊತೆ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ ಮಾಜಿ ಬಿಗ್‌ಬಾಸ್ ಸ್ಪರ್ಧಿ

ಸಿನಿಮಾ, ಮನೋರಂಜನೆ ಲೋಕದಿಂದ ದೂರವಾಗುವ, ಬಾಯ್‌ಫ್ರೆಂಡ್ ಜೊತೆ ಬ್ರೇಕಪ್, ಮೌಲ್ವಿಯನ್ನು ಮದುವೆಯಾಗೋ ಮೂಲಕ ಹೀಗೆ ಒಂದರ ಹಿಂದೆ ಒಂದರಂತೆ ದಿಢೀರ್ ಅಚ್ಚರಿಗಳನ್ನು ಕೊಟ್ಟ ಸನಾ ಖಾನ್ ಸ್ವಲ್ಪ ದಿನ ಸೈಲೆಂಟ್ ಆಗಿದ್ದರು. ಈಗ ಪತಿಯ ಜೊತೆ ಮಾಲ್ಡೀವ್ಸ್‌ಗೆ ಹೋಗಿದ್ದು ಬೀಚ್ ವೈಬ್ಸ್ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ತಮ್ಮ ಅಭಿಮಾನಿಗಳಿಗೋಸ್ಕರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

Tap to resize

Latest Videos

ಸನಾ ಖಾನ್ ಸದ್ಯ ಮಾಲ್ಡೀವ್ಸ್‌ನಲ್ಲಿ ಪತಿ ಅನಾಸ್ ಸೈಯದ್ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ ತಲುಪಿದಾಗಿನಿಂದ ಸತತ ಫೋಟೋ ಶೇರ್ ಮಾಡುತ್ತಲೇ ಇದ್ದಾರೆ ಮಾಜಿ ನಟಿ. ದ್ವೀಪ ರಾಷ್ಟ್ರದಲ್ಲಿ ತಮ್ಮ ದಿನ, ಪಯಣದ ಫೋಟೋ ವಿಡಿಯೋಗಳನ್ನು ಸನಾ ಖಾನ್ ಶೇರ್ ಮಾಡಿದ್ದಾರೆ. ಪೂಲ್‌ನಲ್ಲಿ ಬಾತುಕೋಳಿ ಮೇಲೆ ಬುರ್ಖಾ ಧರಿಸಿ ಕುಳಿತಿದ್ದ ಸನಾ ಖಾನ್ ತಟ್ಟನೆ ಪೂಲ್‌ಗೆ ಬಿದ್ದಿದ್ದನ್ನು ವಿಡಿಯೋ ಮಾಡಿದ್ದು ಅದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

ವಿಶೇಷ ಎಂದರೆ ಬೀಚ್‌ಗೆ ಹೋದರೂ ಮಾಜಿ ನಟಿ ಎಲ್ಲಿಯೂ ಬುರ್ಖಾ ತೆಗೆದೇ ಇಲ್ಲ. ಬೀಚ್‌ನಲ್ಲಿ ಪೋಸ್ ಕೊಡುವುದು, ರೆಸ್ಟೋರೆಂಟ್ ಸಮಯ, ಊಟ ಮಾಡುವುದು, ಬ್ರೇಕ್‌ಫಾಸ್ಟ್ ಹೀಗೆ ಬಹಳಷ್ಟು ಫೋಟೋ ಶೇರ್ ಮಾಡಿದ್ದಾರೆ.

ಹಿಜಾಬ್ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ಕೊಟ್ಟ ಸನಾ ಖಾನ್

ತೇಲುತ್ತಿರುವ ಬ್ರೇಕ್‌ಫಾಸ್ಟ್ ಬೋಟ್‌ನ ಒಂದು ಲುಕ್‌ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸನಾ ಸ್ವಿಮ್ಮಿಂಗ್ ಪೂಲ್ ಬಳಿ ಕುಳಿತು ಉಪಹಾರ ಸೇವಿಸುವುದನ್ನು ಕಾಣಬಹುದು. ಈಜುಕೊಳದಲ್ಲಿ ತೇಲುತ್ತಿರುವ ತನ್ನ ಉಪಹಾರದ ತಟ್ಟೆಯ ವೀಡಿಯೋವನ್ನೂ ಅವರು ಶೇರ್ ಮಾಡಿದ್ದಾರೆ. ತಾಜಾ ಹಣ್ಣಿನ ರಸ, ಕೆಲವು ಪಾಪ್ಸಿಕಲ್ಸ್, ಆಮ್ಲೆಟ್ ಮತ್ತು ಕ್ರೋಸೆಂಟ್ ಅನ್ನು ಉಪಹಾರದ ಪ್ಲೇಟ್‌ನಲ್ಲಿ ಕಾಣಬಹುದು. ಪೋಸ್ಟ್‌ನ ಶೀರ್ಷಿಕೆಯಲ್ಲಿ ವೆಕೇಷನ್‌ಗಾಗಿ ಪತಿ ಅನಸ್ ಸೈಯದ್‌ಗೆ ಧನ್ಯವಾದ ಹೇಳಿದ್ದಾರೆ.

ಅನಸ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದಂಪತಿಗಳು ಊಟ, ಟೇಬಲ್ ಟೆನಿಸ್ ಆಡುವುದು, ದ್ವೀಪದ ನೋಟವನ್ನು ಆನಂದಿಸುವುದು, ಮತ್ತು ತಿಂಡಿಗಳು ಮತ್ತು ಪಾನೀಯಗಳ ಜೊತೆ ಪೂಲ್‌ ಬಳಿ ಕುಳಿತಿರುವುದನ್ನು ಕಾಣಬಹುದು. ಸನಾ ಖಾನ್ ಜೋಡಿಯ ವೆಕೇಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

 
 
 
 
 
 
 
 
 
 
 
 
 
 
 

A post shared by AnasSaiyad (@anas_saiyad20)

 
 
 
 
 
 
 
 
 
 
 
 
 
 
 

A post shared by AnasSaiyad (@anas_saiyad20)

click me!