ಮಗನಿಗೆ ತಂಗೀನಾ ಕೊಡ್ತಾರಾ ಮಲೈಕಾ ? ಹಾಗಿದ್ರೆ ಅರ್ಜುನ್ ಜೊತೆ ಮದ್ವೆ ಯಾವಾಗ ?

Published : Aug 12, 2021, 03:07 PM ISTUpdated : Aug 12, 2021, 04:48 PM IST
ಮಗನಿಗೆ ತಂಗೀನಾ ಕೊಡ್ತಾರಾ ಮಲೈಕಾ ? ಹಾಗಿದ್ರೆ ಅರ್ಜುನ್ ಜೊತೆ ಮದ್ವೆ ಯಾವಾಗ ?

ಸಾರಾಂಶ

ಮಗನಿಗೊಬ್ಬ ತಂಗಿಯನ್ನು ತರ್ತಾರ  ಮಲೈಕಾ ಅರೋರಾ ಮಗನ ಜೊತೆ ಫಿಟ್ನೆಸ್ ಫ್ರೀಕ್ ಮಾತುಕತೆ

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಹೆಣ್ಣುಮಕ್ಕಳಂದ್ರೆ ಅಚ್ಚುಮೆಚ್ಚು. ಅದನ್ನು ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ನನಗೊಬಬ್ ಹೆಣ್ಣು ಮಗುವಿದ್ದರೆ ನನ್ನ ಫ್ಯಾಷನ್ ಡ್ರೆಸ್, ಶೂಸ್ ಹಾಕೋಕೆಲ್ಲ ಒಬ್ಬರು ಇರುತ್ತಿದ್ದರು ಎಂದು ನಟಿ ಬಹಳಷ್ಟು ಸಲ ಅಂದುಕೊಂಡಿದ್ದಾರಂತೆ. ಆದರೆ ನಟಿಗೆ ಇರೋದು ಒಬ್ಬ ಮಗ ಮಾತ್ರ. ಈಗ ಮಗನ ಜೊತೆ ಸೇರಿಕೊಂಡು ಮಗಳನ್ನು ದತ್ತುಪಡೆಯೋ ಬಗ್ಗೆ ಯೋಚಿಸುತ್ತಿದ್ದಾರೆ ಮಲೈಕಾ. ಈ ಬಗ್ಗೆ ಈಗಾಗಲೇ ಮಗನಲ್ಲಿ ಮಾತನಾಡಿದ್ದಾರಂತೆ.

ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಮಗ ಅರ್ಹಾನ್ ಖಾನ್ ಜೊತೆ ಹೆಣ್ಣು ಮಗುವನ್ನು ದತ್ತು ಪಡೆದು ಆಕೆಗೆ ಕುಟುಂಬ ಮತ್ತು ಮನೆಯನ್ನು ನೀಡುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ. ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದರೂ ಹೆಣ್ಣು ಮಗು ಬೇಕೆಂದು ತನಗೆ ಬಹಳ ಸಲ ಅನಿಸಿದೆ ಎಂದಿದ್ದಾರೆ ನಟಿ. ಅರ್ಹಾನ್ ಮಲೈಕಾ ಹಾಗೂ ಮೊದಲ ಪತಿ ಅರ್ಬಾಜ್ ಖಾನ್ ದಂಪತಿಯ ಪುತ್ರ. ಈ ಜೋಡಿ 2017ರಲ್ಲಿ ವಿಚ್ಛೇದನೆ ಪಡೆದರು.

12 ವರ್ಷ ಕಿರಿಯ ನಟನ ಜೊತೆ 47ರ ಮಲೈಕಾ ಡೇಟಿಂಗ್..! ಟ್ರೋಲ್ ಮಾಡಿದವ್ರಿಗೆ ಮುನ್ನಿಯ ಖಡಕ್ ಉತ್ತರ

ನನ್ನ ಬಹಳಷ್ಟು ಸ್ನೇಹಿತರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಆ ಮಕ್ಕಳು ನಮ್ಮ ಜೀವನಕ್ಕೆ ಬಹಳಷ್ಟು ಖುಷಿ ತುಂಬುತ್ತಾರೆ. ನಾನು ನನ್ನ ಮಗ ಅರ್ಹಾನ್ ಜೊತೆ ಬಹಳಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಮುಂದೊಂದು ದಿನ ಹೆಣ್ಣು ಮಗುವನ್ನು ದತ್ತುಪಡೆಯುವುದು, ಅದಕ್ಕೆ ಒಂದು ಕುಟುಂಬ, ಮನೆಯನ್ನು ನೀಡುವುದನ್ನೂ ಚರ್ಚಿಸಿದ್ದೇವೆ. ನಾನು ಬಹಳಷ್ಟು ವಿಷಯದ ಬಗ್ಗೆ ಮಾತನಾಡುತ್ತೇವೆ. ಇದು ಅವುಗಳಲ್ಲಿ ಒಂದು. ಆದರೆ ಈ ಬಗ್ಗೆ ಸದ್ಯ ಯಾವುದೇ ಪ್ಲಾನ್ ಇಲ್ಲ ಎಂದಿದ್ದಾರೆ.

ನಾನು ಹೆಣ್ಮಕ್ಕಳೇ ತುಂಬಿದ್ದ ಕುಟುಂಬದಿಂದ ಬಂದಿದ್ದೇನೆ. ಈಗ, ನಾವೆಲ್ಲರೂ ಹೆಚ್ಚಾಗಿ ಗಂಡುಮಕ್ಕಳನ್ನು ಹೊಂದಿದ್ದೇವೆ. ಹಾಗಾಗಿ, ನಾನು ಹೆಣ್ಣು ಮಗುವನ್ನು ಮಿಸ್ ಮಾಡ್ಕೊಳ್ತಿದ್ದೇನೆ. ನಾನು ನನ್ನ ಮಗ ಅರ್ಹಾನ್ ತುಂಬ ಪ್ರೀತಿಸುತ್ತೇನೆ. ನನಗೆ ಒಬ್ಬ ಅಕ್ಕನಿದ್ದಾಳೆ. ನಾವು ಎಲ್ಲವನ್ನೂ ಹಂಚಿಕೊಳ್ಳುತ್ತೇವೆ. ನನಗೂ ಒಬ್ಬ ಮಗಳು ಬೇಕೆಂದು ನಾನು ಬಯಸುತ್ತೇನೆ. ಅವಳಿಗೆ ಡ್ರೆಸ್ ಮಾಡುವುದು ಸೇರಿ ಆ ಎಲ್ಲಾ ಸಿಲ್ಲಿ ಸಂಗತಿಗಳನ್ನು ಮಾಡಬೇಕೆನಿಸುತ್ತದೆ ಎಂದಿದ್ದಾರೆ.

ನನ್ನಲ್ಲಿ ತುಂಬಾ ಶೂಸ್, ಡ್ರೆಸ್ ಇದೆ: ನಂಗೆ ಮಗಳು ಬೇಕು ಎಂದ ಮಲೈಕಾ

ನಟಿ ಕರೀನಾ ಕಪೂರ್ ನಡೆಸಿಕೊಟ್ಟ ವಾಟ್ ವಿಮೆನ್ ವಾಂಟ್ ರೇಡಿಯೋ ಚಾಟ್ ಶೋನಲ್ಲಿ ಮಲೈಕಾ ಕಾಣಿಸಿಕೊಂಡಾಗ ಅರ್ಬಾಜ್‌ನಿಂದ ವಿಚ್ಛೇದನೆ ಪಡೆದಿದ್ದಕ್ಕೆ ಅರ್ಹಾನ್ ಪ್ರತಿಕ್ರಿಯೆಯ ಬಗ್ಗೆ ಮಲೈಕಾ ಮಾತನಾಡಿದ್ದಾರೆ. ನನ್ನ ಮಗುವನ್ನು ಸಂಪೂರ್ಣವಾಗಿ ಅಡ್ಡಿಪಡಿಸುವ ವಾತಾವರಣಕ್ಕೆ ಒಳಗಾಗುವುದಕ್ಕಿಂತ ಸಂತೋಷದ ವಾತಾವರಣದಲ್ಲಿ ನೋಡಲು ನಾನು ಬಯಸುತ್ತೇನೆ. ನನ್ನ ಮಗ ಹೆಚ್ಚು ಸಂತೋಷವಾಗಿದ್ದಾನೆ. ನಾವಿಬ್ಬರೂ ನಮ್ಮ ದಾಂಪತ್ಯದಲ್ಲಿದ್ದಕ್ಕಿಂತ ಹೆಚ್ಚು ಸಂತೋಷವಾಗಿರುವುದನ್ನು ಅವನು ನೋಡಬಹುದು. ಅವನು ನಿಜವಾಗಿಯೂ ಒಂದು ದಿನ 'ಅಮ್ಮಾ, ನೀನು ಸಂತೋಷದಿಂದ ಇರುವುದು ನೋಡುವುದು ಖುಷಿಯಾಗುತ್ತದೆ ಎಂದಿದ್ದ ಎಂದು ಹೇಳಿದ್ದಾರೆ.

ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಸಂಬಂಧ ಹೊಂದಿದ್ದಾರೆ. ಅವರು ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. 2019 ರಲ್ಲಿ ಅರ್ಜುನ್ ಅವರ 34 ನೇ ಹುಟ್ಟುಹಬ್ಬದಂದು ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಮಲೈಕಾ ಮುಂದಿನ ವರ್ಷದ ಸೂಪರ್ ಮಾಡೆಲ್ ನ ಹೊಸ ಸೀಸನ್ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?