
ಭಾರತೀಯ ಚಿತ್ರರಂಗ ಕಂಡಂತಹ ಅದ್ಭುತ ನಟ, ಸೂಪರ್ ಸ್ಟಾರ್ ಮಮ್ಮುಟ್ಟಿ ಬಣ್ಣದ ಲೋಕಕ್ಕೆ ಕಾಲಿಟ್ಟು 50 ವರ್ಷ ಪೂರೈಸಿದ್ದಾರೆ. ಆಗಸ್ಟ್ 6ರಂದು ಸರಳವಾಗಿ ಕುಟುಂಬಸ್ಥರು ಹಾಗೂ ಸಿನಿ ಆಪ್ತರ ಜೊತೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ಆದರೆ ಕೇರಳ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ.
ಹೌದು! ಪಿಣರಾಯಿ ಸರ್ಕಾರ ಮಲಯಾಳಂ ಸೂಪರ್ ಸ್ಟಾರ್ ಈ ಸಾಧನೆಯನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ಸರಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳವ ನಿರ್ಧಾರ ಮಾಡಿತ್ತು. ಈ ವಿಚಾರವನ್ನು ಮಮ್ಮುಟ್ಟಿ ಅವರಿಗೆ ತಿಳಿಸಿದಾಗ ಬೇಡವೇ ಬೇಡ ಎಂದು ನಿರಾಕರಿಸಿದ್ದಾರಂತೆ. ಹೀಗೆಂದು ಮಲಯಾಳಂನ ಖಾಸಗಿ ವೆಬ್‌ಸೈಟ್‌ಗಳು ವರದಿ ಮಾಡಿದೆ.
'ಸರ್ಕಾದಿಂದ ಅಂತಹ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಸಾರ್ವಜನಿಕರ ಹಣದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ನಾನು ಬಯಸುವುದಿಲ್ಲ' ಎಂದು ಮಮ್ಮುಟ್ಟಿ ಹೇಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಣ ಖರ್ಚು ಮಾಡಿ ಸಂಭ್ರಮಿಸುವುದು ಬೇಡ ಎಂಬ ಮಮ್ಮುಟ್ಟಿ ನಿರ್ಧಾರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸರ್ಕಾರಕ್ಕಿಂತ ನೀವು ಜನರ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದೀರಿ ಭೇಷ್ ಎಂದು ಎಲ್ಲೆಡೆ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.