ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಲಂಚ ಪಡೆದಿರುವ ಆರೋಪ ಹೊತ್ತ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಸಿಎಟಿ ಕ್ಲೀನ್ ಚಿಟ್ ನೀಡಿದೆ.
ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್ ಒಳಗೊಂಡ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಲಂಚದ ಆರೋಪ ಎದುರಿಸುತ್ತಿದ್ದಾರೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದ ಪ್ರಕರಣ ಇದಾಗಿದೆ.
ಆರ್ಯನ್ ಖಾನ್ ಅವರನ್ನು ಉಳಿಸಲು ಎನ್‌ಸಿಬಿಯ ಮಾಜಿ ವಲಯ ನಿರ್ದೇಶಕರು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಕುತೂಹಲದ ಬೆಳವಣಿಗೆಯಲ್ಲಿ, ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಡ್ರಗ್ಸ್ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು ಸಮೀರ್ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು ಎನ್ನಲಾಗಿತ್ತು. ಆರ್ಯನ್ ಖಾನ್ ಅವರನ್ನು ಅರೆಸ್ಟ್ ಮಾಡಿದುದಕ್ಕಾಗಿ ತಮ್ಮನ್ನು ಹೇಗೆ ಸಿಲುಕಿಸುತ್ತಿದ್ದಾರೆ ಎಂದು ವಾಂಖೆಡೆ ಈ ಹಿಂದೆಯೇ ಹೇಳಿದ್ದರು. ನಿಯತ್ತಾಗಿ ಕೆಲಸ ಮಾಡಿದರೆ ಸಿಗುವ ಶಿಕ್ಷೆ ಇದು ಎಂದು ಅವರ ಪತ್ನಿ ಕ್ರಾಂತಿ ರೆಡ್ಕಾರ್ (Kranti Redkar) ಕೂಡ ದುಃಖಿತರಾಗಿದ್ದರು. ಇದೊಂದು ದೊಡ್ಡ ಷಡ್ಯಂತ್ರ ಎಂದೂ ಹೇಳಿದ್ದರು.
ಬೆಂಕಿಯನ್ನೇ ನೆಕ್ಕಿದವ ನಾನು, ಇನ್ನು... ಶಾರುಖ್ಗೆ ಮಾತಿನಿಂದ ತಿವಿದ ಎನ್‌ಸಿಬಿ ಅಧಿಕಾರಿ ವಾಂಖೆಡೆ
ತಮ್ಮ ವಿರುದ್ಧದ ಆರೋಪವನ್ನು ಪ್ರಶ್ನಿಸಿ ಅವರು ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಮೊರೆ ಹೋಗಿದ್ದರು. ಇದೀಗ ಸಿಎಟಿ ಈ ತನಿಖೆಯ ಮೇಲೆಯೇ ಪ್ರಶ್ನೆಗಳನ್ನು ಎತ್ತಿದೆ. ಸಮೀರ್ ವಾಂಖೆಡೆಗೂ ಈ ವಿಚಾರದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ ಎನ್ನಲಾಗಿದೆ. 'ಇ-ಟೈಮ್ಸ್' ನಲ್ಲಿನ ವರದಿಗಳ ಪ್ರಕಾರ, 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಎಟಿ ವಾಂಖೆಡೆ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸಿಎಟಿ ತನ್ನ ಆದೇಶದಲ್ಲಿ ವಾಂಖೆಡೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಲ್ಲಿ (ಎಸ್‌ಇಟಿ) ಎನ್‌ಸಿಬಿ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಉಪಸ್ಥಿತಿಯ ಕುರಿತು ಪ್ರಶ್ನೆ ಎತ್ತಿದೆ. ವಾಸ್ತವವಾಗಿ, ಸಮೀರ್ ವಾಂಖೆಡೆ ಕ್ರೂಸ್ ಮೇಲೆ ದಾಳಿಗೆ ಸೂಚನೆಗಳನ್ನು ಪಡೆದ ಅಧಿಕಾರಿಗಳಲ್ಲಿ ಜ್ಞಾನೇಶ್ವರ್ ಸಿಂಗ್ ಕೂಡ ಇದ್ದರು. ಹೀಗಿರುವಾಗ ಸ್ವತಃ ಆದೇಶ ನೀಡಿದ ಅಧಿಕಾರಿಯೇ ತನಿಖೆಯಲ್ಲಿ ತೊಡಗಿದ್ದು ಹೇಗೆ ಎಂದು ಸಿಎಟಿ ಪ್ರಶ್ನಿಸಿದೆ.
ಆದಾಗ್ಯೂ, ಎಸ್‌ಇಟಿ ವರದಿಯು ಪ್ರಾಥಮಿಕ ಸ್ವರೂಪದಲ್ಲಿದೆ ಎಂಬ ಎನ್‌ಸಿಬಿಯ ವಾದವನ್ನು ಸಹ ಸಿಎಟಿ ಪರಿಗಣನೆಗೆ ತೆಗೆದುಕೊಂಡಿದೆ. ಸಮೀರ್ ವಾಂಖೆಡೆ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಎನ್‌ಸಿಬಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಿದೆ. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್ನಲ್ಲಿ ಒಳಗೇ ಇದ್ದರೆ, ಆರ್ಯನ್ ಖಾನ್ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು.
ಶಾರುಖ್ ಪುತ್ರನ ಅರೆಸ್ಟ್ ಮಾಡಿದ ವಾಂಖೆಡೆ ಶರ್ಟ್ನಲ್ಲಿ ರಕ್ತದ ಕಲೆ: ಶಾಕಿಂಗ್ ಸತ್ಯ ಬಹಿರಂಗ
ಜವಾನ್ ಚಿತ್ರದ ಟ್ರೈಲರ್ನಲ್ಲಿ ಶಾರುಖ್ ಖಾನ್, ‘ನನ್ನ ಮಗನ ಮೇಲೆ ಕೈ ಇಡೋ ಮುನ್ನ ಅಪ್ಪನೊಂದಿಗೆ ಮಾತನಾಡು’ ಎಂಬ ಡೈಲಾಗ್ ಇದೆ. ಈ ಡೈಲಾಗ್ ಶಾರುಖ್ ಖಾನ್ ಧ್ವನಿಯಲ್ಲಿದ್ದು, ಈ ಸಂಭಾಷಣೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಪರೋಕ್ಷವಾಗಿ ಶಾರುಖ್ ಖಾನ್ ನೀಡಿರುವ ಟಾಂಗ್ ಎನ್ನಲಾಗಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾ ಮೂಲಕವೇ ಮಾತಿನ ಏಟು ನೀಡಿದ್ದ ಸಮೀರ್ ಅವರು, ‘ನಾನು ಬೆಂಕಿಯನ್ನು ನೆಕ್ಕಿದ್ದೇನೆ, ನಾನು ಸುಟ್ಟ ಪ್ರತಿ ಸೇತುವೆಯ ಬೂದಿಯಲ್ಲಿಯೂ ನರ್ತಿಸಿದ್ದೇನೆ. ನರಕದ ಭಯ ನನಗೆ ಇಲ್ಲ’ ಎನ್ನುವ ಲೇಖಕಿ ನಿಕೋಲಸ್ ಲಯೋನ್ನ (Nicole Lyons) ಅವರ ಮಾತನ್ನು ಉಲ್ಲೇಖಿಸಿದ್ದರು.