ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಕತ್ತರಿ ಹಾಕಿದ್ದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ.
ಕಳೆದ ಜುಲೈ 28ರಂದು ಬಿಡುಗಡೆಯಾಗಿದ್ದ ನಟಿ ಆಲಿಯಾ ಭಟ್ (Alia Bhatt) ಮತ್ತು ರಣವೀರ್ ಸಿಂಗ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರ ಬಿಡುಗಡೆಯಾದಾಗಿನಿಂದಲೂ ಸಕತ್ ಸುದ್ದಿಯಾಗುತ್ತಲೇ ಇದೆ. ಇದು ಸಕತ್ ಸುದ್ದಿಯಾದುದಕ್ಕೆ ಕಾರಣ, ಧರ್ಮೇಂದ್ರ, ಶಬಾನಾ ಅಜ್ಮಿ ಅವರ ಲಿಪ್ಲಾಕ್ ವಿಷಯಕ್ಕೆ. ಪ್ರಮುಖ ಜೋಡಿಗಳಾದ ರಣವೀರ್ ಮತ್ತು ಆಲಿಯಾ ನಡುವಿನ ಕೆಮೆಸ್ಟ್ರಿ ಹೊರತಾಗಿ, ಪ್ರೇಕ್ಷಕರನ್ನು ಆಶ್ಚರ್ಯದಿಂದ ಸೆಳೆದದ್ದು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಡುವಿನ ಲಿಪ್-ಲಾಕ್ ಸರಣಿ. ಒಂದು ನಿರ್ದಿಷ್ಟ ದೃಶ್ಯದಲ್ಲಿ, ಈ ಇಬ್ಬರು ಪ್ರೇಮಿಗಳು ವರ್ಷಗಳ ಪ್ರತ್ಯೇಕತೆಯ ನಂತರ ಭೇಟಿಯಾಗುತ್ತಾರೆ. ದೃಶ್ಯದಲ್ಲಿ, ಧರ್ಮೇಂದ್ರ ಜನಪ್ರಿಯ ರೆಟ್ರೊ ಹಾಡು 'ಅಭಿ ನ ಜಾವೋ ಛೋಡ್ ಕರ್' ಹಾಡುತ್ತಿದ್ದಂತೆ ನಟಿ ಶಬನಾ ಜೊತೆ ಭಾವೋದ್ರಿಕ್ತರಾಗಿ ಚುಂಬನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ. ಇದೀಗ ಸಕತ್ ಸದ್ದು ಮಾಡಿತ್ತು. ರ್ಮೇಂದ್ರ ಅವರಿಗೆ ಈಗ 87 ವರ್ಷ ಹಾಗೂ ನಟಿ ಶಬನಾ ಅಜ್ಮಿ (Shabana Azmi) ಅವರಿಗೆ 72 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಇವರ ಕೆಮೆಸ್ಟ್ರಿಯನ್ನೂ (Chemistry) ಜನ ಮೆಚ್ಚಿಕೊಂಡಿದ್ದಾರೆ.
ಇದೀಗ ಇದೇ ಚಿತ್ರದ ಇನ್ನೊಂದು ರೊಮ್ಯಾಂಟಿಕ್ ವಿಡಿಯೋ (Romantic Video) ಒಂದು ವೈರಲ್ ಆಗಿದೆ. ಅಸಲಿಗೆ ಇದು ನಾಯಕ ರಣವೀರ್ ಸಿಂಗ್ ಮತ್ತು ನಾಯಕಿ ಆಲಿಯಾ ಭಟ್ ನಡುವಿನ ಹಾಟೆಸ್ಟ್ ರೊಮ್ಯಾನ್ಸ್ ಸೀನ್. ಎರಡು ಹಾಡುಗಳಲ್ಲಿ ಮೈ ಚಳಿ ಬಿಟ್ಟು ಆಲಿಯಾ ನಟಿಸಿದ್ದಾರೆ. ಆದರೆ ಈ ಎರಡೂ ಹಾಡುಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವುಗಳಿಗೆ ಕತ್ತರಿ ಹಾಕಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ರೊಮ್ಯಾಂಟಿಕ್ ಹಾಡುಗಳ ವಿಡಿಯೋ ವೈರಲ್ ಆಗಿವೆ.
RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?
ಮೊದಲನೆಯದ್ದು ರಾಜ್ ಕಪೂರ್ ಅವರ 1973 ರ ರೊಮ್ಯಾಂಟಿಕ್ ಚಿತ್ರ ಬಾಬಿಯ ಹಮ್ ತುಮ್ ಏಕ್ ಕಮ್ರೆ ಮೇ ಬಂದ್ ಹೋ ಹಾಡು. ಇದಕ್ಕೆ ಈ ಜೋಡಿ ರೊಮ್ಯಾನ್ಸ್ನಲ್ಲಿ ತೊಡಗಿರುವುದನ್ನು ನೋಡಬಹುದು. ಮೂಲ ಹಾಡಿನಲ್ಲಿ ಡಿಂಪಲ್ ಕಪಾಡಿಯಾ ಜೊತೆಗೆ ಆಲಿಯಾ ಅವರ ಮಾವ ರಿಷಿ ಕಪೂರ್ ಕಾಣಿಸಿಕೊಂಡಿದ್ದಾರೆ ಮತ್ತು ಇದನ್ನು ಆಲಿಯಾ ಅವರ ಪತಿ ರಣಬೀರ್ ಕಪೂರ್ ಅವರ ಅಜ್ಜ ರಾಜ್ ಕಪೂರ್ ನಿರ್ದೇಶಿಸಿರುವುದು ಕುತೂಹಲಕಾರಿಯಾಗಿದೆ. ಈ ದೃಶ್ಯದಲ್ಲಿ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ (Shabana Azmi) ಬೆಳಗಿನ ಉಪಾಹಾರವನ್ನು ಸೇವಿಸುತ್ತಿದ್ದಾರೆ. ರಣವೀರ್ ಮತ್ತು ಆಲಿಯಾ ಈ ದಂಪತಿ ಹಿಂದಿನ ಕೋಣೆಯಲ್ಲಿ ರೊಮ್ಯಾನ್ಸ್ನಲ್ಲಿ ತೊಡಗಿರುವುದನ್ನು ನೋಡಬಹುದು.
ಇನ್ನೊಂದು ಹಾಡು 1972 ರ ರೊಮ್ಯಾಂಟಿಕ್ ಕಾಮಿಡಿ ಮೇರೆ ಜೀವನ ಸಾಥಿಯ ಆವೋ ನಾ, ಗಲೇ ಲಗಾವೋ ನಾ ಚಿತ್ರದ್ದು. ಇದರಲ್ಲಿ ಧರ್ಮೇಂದ್ರ ಮತ್ತು ಶಬಾನಾ ಅವರು ಸ್ಪಾ ಸೆಷನ್ ಆನಂದಿಸುತ್ತಿರುವಾಗ ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಿರುತ್ತಾರೆ. ಈ ಸಂದಭರ್ದಲ್ಲಿ ರಣವೀರ್ ಮತ್ತು ಆಲಿಯಾ ಕಾರಿಡಾರ್‌ನಲ್ಲಿ ಮತ್ತು ಮೆಟ್ಟಿಲುಗಳ ಮೇಲೆ ರೊಮ್ಯಾನ್ಸ್ನಲ್ಲಿ ತೊಡಗಿರುವುದು ಕಂಡುಬರುತ್ತದೆ. ಅವರಿಬ್ಬರೂ ಕಪ್ಪು ಬಣ್ಣದ (Black dress) ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಕಪ್ಪು ಸೀರೆಯಲ್ಲಿ ಮತ್ತು ರಣವೀರ್ ಕಪ್ಪು ಟ್ರ್ಯಾಕ್‌ಸೂಟ್‌ನಲ್ಲಿದ್ದಾರೆ, ರೆಟ್ರೊ ಶೈಲಿಯಲ್ಲಿ ಕುತ್ತಿಗೆಯ ಸುತ್ತ ಸ್ಕಾರ್ಫ್ ಹಾಕಲಾಗಿದೆ.
ಟ್ವಿಟರ್ನಲ್ಲಿ ಈ ವಿಡಿಯೋಗಳು ವೈರಲ್ ಆಗಿದ್ದು, ಇವರ ಕೆಮೆಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೇನಾದರೂ ಚಿತ್ರದಲ್ಲಿ ತೋರಿಸಿದ್ದರೆ, ಆಲಿಯಾ ಪತಿ ರಣವೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಪತ್ನಿ ದೀಪಿಕಾ ಅವರ ಕಥೆ ಅಷ್ಟೇ ಎಂದು ತಮಾಷೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಆ ದೃಶ್ಯಗಳಿಗೆ ಕತ್ತರಿ ಹಾಕಿರುವುದಾಗಿ ಕಮೆಂಟಿಗರು ಹೇಳುತ್ತಿದ್ದಾರೆ.
RRPK: 72 ವರ್ಷದ ಶಬನಾ ಜೊತೆ ಲಿಪ್ಲಾಕ್ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?
I AM NOT OKAYYY 😭😭🔥🔥
❤️❤️🥵🥵 jeeezz Ranveer Aliaa hottest pairrrr everr !!! pic.twitter.com/r6HKXEXH6m