ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ರಿಲೀಸ್‍ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಭಿಮಾನಿಗಳ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಇದೆಲ್ಲದರ ಮಧ್ಯೆ ಪುಷ್ಪ 2 ಸೆಟ್ ವಿಡಿಯೋವೊಂದು ಲೀಕ್ ಆಗಿದೆ. ವೈರಲ್ ಆದ ಕ್ಲಿಪ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ರಿಲೀಸ್‍ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದರಲ್ಲೂ ಅಲ್ಲು ಅರ್ಜುನ್ ಪುಷ್ಪಾ 1 ದಿ ರೈಸ್ ಸಿನಿಮಾಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಚಿತ್ರ ವಿಶೇಷ ಕುತೂಹಲ ಮೂಡಿಸುತ್ತಿದೆ. ಚಿತ್ರತಂಡ ಸಹ ಕಥೆ, ಮೇಕಿಂಗ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದೆ. ಅಭಿಮಾನಿಗಳ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಇದೆಲ್ಲದರ ಮಧ್ಯೆ ಪುಷ್ಪ 2 ಸೆಟ್ ವಿಡಿಯೋವೊಂದು ಲೀಕ್ ಆಗಿದೆ. ಇಲ್ಲಿಯವರೆಗೂ ಭಾಗ 2ರ ಬಗ್ಗೆ ಯಾವುದೇ ಸುಳಿವನ್ನು ತಂಡ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಈಗ ಸೆಟ್‍ನ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿದ್ದು, ಕೆಂಪು ಚಂದನವನ್ನು ಕಳ್ಳಸಾಗಣೆ ಮಾಡುತ್ತಾರೆ ಎಂಬುದನ್ನು ಸಿನಿಮಾದ ಮೊದಲ ಭಾಗದಲ್ಲಿ ತೋರಿಸಲಾಗಿದೆ. ಅದರಲ್ಲಿ ಅಲ್ಲು ಅರ್ಜುನ್ ಲಾರಿಯನ್ನು ಹೊಂದಿರುತ್ತಾರೆ. ಹೀಗೆ ಕಥೆ ಮುಂದುವರೆದಂತೆ, ಅವರು ಅಂತಹ ಸಾಕಷ್ಟು ಲಾರಿಗಳನ್ನು ಹೊಂದಿದ್ದಾರೆಂದು ಕ್ಲಿಪ್ ತೋರಿಸುತ್ತದೆ. ರಕ್ತ ಚಂದನದ (Sandalwood) ದಂಧೆಯಲ್ಲಿ ಬೆಳೆದು ನಿಂತ ಮೇಲೆ ಸಿನಿಮಾದಲ್ಲಿ (Movie) ಏನೆಲ್ಲಾ ತಿರುವು ಇರಲಿದೆ ಎಂಬುದನ್ನ ಪಾರ್ಟ್ 2ನಲ್ಲಿ ತೋರಿಸಲಾಗುತ್ತದೆ ಎಂಬುದು ಲೀಕ್ ಆದ ಕ್ಲಿಪ್‌ನಿಂದ ಕನ್ಫರ್ಮ್ ಆಗಿದೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸಾಕಷ್ಟು ಟ್ರಕ್‌ಗಳನ್ನು ನಿಲ್ಲಿಸಿರುವ ಬೃಹತ್ ಜಾಗವನ್ನು ನೋಡಬಹುದು.
ರಶ್ಮಿಕಾಗಿಂತ 'ಪುಷ್ಪ' ಸಿನಿಮಾಗೆ ನಾನೆ ಫಿಟ್ ಆಗ್ತಿದ್ದೆ; ನಟಿ ಐಶ್ವರ್ಯಾ ರಾಜೇಶ್ ಶಾಕಿಂಗ್ ಹೇಳಿಕೆ
ಬೃಹತ್ ಜಾಗದಲ್ಲಿ ಸಾಲು ಸಾಲಾಗಿ ಟ್ರಕ್ ನಿಂತಿರುವ ವಿಡಿಯೋ ವೈರಲ್
ತಂಡವು ಕೆಲವು ಟ್ರಕ್‌ಗಳನ್ನು ಕೃತಕವಾಗಿ ರಚಿಸಿರುವಂತೆ ತೋರುತ್ತಿದೆ. ಆದರೆ ಸೆಟ್‌ನ ಸಂಪೂರ್ಣ ಲುಕ್ ಅಲ್ಲು ಅರ್ಜುನ್ ಸಿನಿಮಾ ತೀವ್ರವಾದ ಆಕ್ಷನ್ ಸೀಕ್ವೆನ್ಸ್‌ನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. 'ಪುಷ್ಪಾ 2: ದಿ ರೂಲ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಿರ್ದೇಶಕ ಸುಕುಮಾರ್ ಇನ್ನೂ ಹೆಚ್ಚು ಆಕರ್ಷಕವಾದ ಸಿನಿಮೀಯ ಅನುಭವವನ್ನು (Experience) ನೀಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದು, ಫಹದ್ ಫಾಸಿಲ್ ಚಿತ್ರದ ಪ್ರಮುಖ ಖಳನಾಯಕನಾಗಿ (Villian) ನಟಿಸಿದ್ದಾರೆ. ಮಾತ್ರವಲ್ಲದೆ ಅನಸೂಯ ಭಾರದ್ವಾಜ್, ಡಾಲಿ ಧನಂಜಯ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪುಷ್ಪ 2 ಸಿನಿಮಾದ ಚಿತ್ರೀಕರಣ ಶುರುವಾದಗಿನಿಂದ ತಂಡದ ಕಡೆಯಿಂದ ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ. ಸಿನಿಮಾ ಅದೆಷ್ಟರ ಮಟ್ಟಿಗೆ ಕಂಪ್ಲೀಟ್ ಆಗಿದೆ. ಯಾವಾಗ ಬೆಳ್ಳಿತೆರೆಯ ಮೇಲೆ ನೋಡಬಹುದು ಎಂಬುದರ ಬಗ್ಗೆಯೂ ಮಾಹಿತಿಯಿಲ್ಲ. ಆದರೆ ಸದ್ಯ ಲೀಕ್ ಆಗಿರುವ ವಿಡಿಯೋ ನೋಡಿ ಫ್ಯಾನ್ಸ್ ಖುಷಿ ಕೊಟ್ಟಿರೋದಂತೂ ನಿಜ. ಸದ್ಯ ವಿಡಿಯೋ ಲೀಕ್ ಬಗ್ಗೆ ಚಿತ್ರತಂಡ ಆತಂಕಗೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಶೂಟಿಂಗ್ ವೇಳೆ ಮತ್ತಷ್ಟು ಬಿಗಿ ಭದ್ರತೆಗೆ ತಂಡ ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ.
'ಪುಷ್ಟ' ಸ್ಟಾರ್ ಅಲ್ಲು ಅರ್ಜುನ್ ಹೊಗಳಿ ಬಾಲಿವುಡ್ ನಟರನ್ನು ತೆಗಳಿದ್ದೇಕೆ ಹಿರಿಯ ನಟಿ ಹೇಮಾ ಮಾಲಿನಿ?
ಪುಷ್ಪ 2 ರಿಲೀಸ್ ಯಾವಾಗ?
ಪುಷ್ಪ 2 ಸಿನಿಮಾ ಶೂಟಿಂಗ್, ರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರದ ಫಸ್ಟ್ ಲುಕ್ ಏಪ್ರಿಲ್‌ನಲ್ಲಿ ರಿಲೀಸ್ ಅಗಿದ್ದು 7 ಮಿಲಿಯನ್ ಲೈಕ್ಸ್ ಪಡೆದಿತ್ತು. ಸದ್ಯ ನಿರ್ದೇಶಕ ಸುಕುಮಾರ್ ಪುಷ್ಪ 2 ಶೂಟಿಂಗ್ ಮಾಡುತ್ತಿದ್ದು ಕೊನೆ ಹಂತದ ಚಿತ್ರೀಕರಣ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, 2024 ರ ಮೊದಲ ತ್ರೈಮಾಸಿಕದಲ್ಲಿ ಪುಷ್ಪ 2ಪ್ರೀಮಿಯರ್ ಆಗಬಹುದು. ಈ ಫ್ರಾಂಚೈಸ್‌ನ ಎರಡನೇ ಭಾಗವು 2021 ರಿಂದ ಬ್ಲಾಕ್‌ಬಸ್ಟರ್‌ಗಿಂತ ದೊಡ್ಡದಾಗಿದೆ ಮತ್ತು ಉತ್ತಮವಾಗಿರುತ್ತದೆ. ಆದ್ದರಿಂದ ಪ್ರೊಡಕ್ಷನ್ ವಿಳಂಬವಾಗಿದೆ ಎಂದು ಹೇಳಲಾಗ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪಾ-1 ದಿ ರೈಸ್' ಡಿಸೆಂಬರ್ 17, 2021 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಇಉದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ 365 ಕೋಟಿ ಗಳಿಸಿ, 2021ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂದು ಕರೆಸಿಕೊಂಡಿತು.
Omg... What's going on at Shooting.
This seems Huge 😱 🙏 pic.twitter.com/DkchjVVdHI