
ಎರಡು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿರುವುದು ಎಲ್ಲರಿಗೂ ತಿಳಿದೇ ಇದೆ. ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಇದು ಫೇಮಸ್ ಆಗಿತ್ತು. ಶಾರುಖ್ ಪುತ್ರ ಆರ್ಯನ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಮಕ್ಕಳು ಈ ಕೇಸ್ನಲ್ಲಿ ಸಿಲುಕಿದ್ದರಿಂದ ಇದು ಭಾರಿ ಸದ್ದು ಮಾಡಿತ್ತು. ಈ ಘಟನೆಯಿಂದ ಶಾರುಖ್ ಖಾನ್ ಜರ್ಜರಿತರಾಗಿದ್ದೂ ಸುಳ್ಳಲ್ಲ. ಇಂದಿಗೂ ಇದರ ಕುರಿತು ಚರ್ಚೆಯಾಗುತ್ತಲೇ ಇದೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.
ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್ನಲ್ಲಿ ಒಳಗೇ ಇದ್ದರೆ, ಆರ್ಯನ್ ಖಾನ್ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು. ಆದರೆ ಕುತೂಹಲದ ಬೆಳವಣಿಗೆಯಲ್ಲಿ, ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಡ್ರಗ್ಸ್ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು ಸಮೀರ್ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು ಎನ್ನಲಾಗಿತ್ತು. ಆದರೆ ಆರ್ಯನ್ ಖಾನ್ ಅವರನ್ನು ಅರೆಸ್ಟ್ ಮಾಡಿದುದಕ್ಕಾಗಿ ತಮ್ಮನ್ನು ಹೇಗೆ ಸಿಲುಕಿಸುತ್ತಿದ್ದಾರೆ ಎಂದು ವಾಂಖೆಡೆ ಈ ಹಿಂದೆಯೇ ಹೇಳಿದ್ದರು. ನಿಯತ್ತಾಗಿ ಕೆಲಸ ಮಾಡಿದರೆ ಸಿಗುವ ಶಿಕ್ಷೆ ಇದು ಎಂದು ಅವರ ಪತ್ನಿ ಕ್ರಾಂತಿ ರೆಡ್ಕಾರ್ (Kranti Redkar) ಕೂಡ ದುಃಖಿತರಾಗಿದ್ದರು. ಇದೊಂದು ದೊಡ್ಡ ಷಡ್ಯಂತ್ರ ಎಂದೂ ಹೇಳಲಾಗುತ್ತಿದ್ದು, ಅದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.
ಶಾರುಖ್ ಪುತ್ರನ ಅರೆಸ್ಟ್ ಮಾಡಿದ ವಾಂಖೆಡೆ ಶರ್ಟ್ನಲ್ಲಿ ರಕ್ತದ ಕಲೆ: ಶಾಕಿಂಗ್ ಸತ್ಯ ಬಹಿರಂಗ
ಆದರೆ ಈ ನಡುವೆಯೇ ಜವಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದು ಶಾರುಖ್ ಖಾನ್ ಮತ್ತು ಸಮೀರ್ ವಾಂಖೆಡೆ ಅವರ ಪರೋಕ್ಷ ವಾಕ್ಸಮರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಜವಾನ್ ಚಿತ್ರದ ಟ್ರೈಲರ್ನಲ್ಲಿ ಶಾರುಖ್ ಖಾನ್, ‘ನನ್ನ ಮಗನ ಮೇಲೆ ಕೈ ಇಡೋ ಮುನ್ನ ಅಪ್ಪನೊಂದಿಗೆ ಮಾತನಾಡು’ ಎಂಬ ಡೈಲಾಗ್ ಇದೆ. ಈ ಡೈಲಾಗ್ ಶಾರುಖ್ ಖಾನ್ ಧ್ವನಿಯಲ್ಲಿದ್ದು, ಈ ಸಂಭಾಷಣೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಪರೋಕ್ಷವಾಗಿ ಶಾರುಖ್ ಖಾನ್ ನೀಡಿರುವ ಟಾಂಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಶಾರುಖ್ ಯಾವ ಉದ್ದೇಶಕ್ಕಾಗಿ ಟ್ರೇಲರ್ನಲ್ಲಿ ಈ ಡೈಲಾಗ್ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಇದೀಗ ಹಾಟ್ ಚರ್ಚೆಗೆ ಕಾರಣವಾಗಿದೆ. ನನ್ನ ಮಗನನ್ನು ಮುಟ್ಟುವ ಮೊದಲು ಈ ಅಪ್ಪನನ್ನು ಮುಟ್ಟು ಎನ್ನುವ ಡೈಲಾಗ್ ಸಮೀರ್ ಅವರಿಗೇ ಹೇಳಿದ್ದು ಎನ್ನಲಾಗುತ್ತಿದೆ. ಇಷ್ಟೆಲ್ಲಾ ಆದ ಮೇಲೆ ಸಮೀರ್ ಅವರು ಸುಮ್ಮನಿರುತ್ತಾರೆಯೇ?
ಇದೀಗ ಈ ಮಾತಿಗೆ ಸಮೀರ್ ವಾಂಖೆಡೆ (Sameer Wankhede) ತಿರುಗೇಟು ನೀಡಿದ್ದಾರೆ. ಅವರು ಯಾವ ಉದ್ದೇಶಕ್ಕಾಗಿ ತಾವು ಈ ಮಾತನ್ನು ಹೇಳುತ್ತಿದ್ದೇನೆ ಎನ್ನುವುದನ್ನು ತಿಳಿಸಿಲ್ಲ. ಸಹಜವಾಗಿ ಒಂದು ಕೋಟ್ ಹಾಕಿದ್ದಾರೆ. ಅದು ಲೇಖಕಿ ನಿಕೋಲಸ್ ಲಯೋನ್ನ (Nicole Lyons) ಅವರು ಹೇಳಿರುವ ಮಾತು. ಅದೇನೆಂದರೆ, ‘ನಾನು ಬೆಂಕಿಯನ್ನು ನೆಕ್ಕಿದ್ದೇನೆ, ನಾನು ಸುಟ್ಟ ಪ್ರತಿ ಸೇತುವೆಯ ಬೂದಿಯಲ್ಲಿಯೂ ನರ್ತಿಸಿದ್ದೇನೆ. ನರಕದ ಭಯ ನನಗೆ ಇಲ್ಲ’ ಎಂದಿದ್ದಾರೆ. ಟ್ರೈಲರ್ನಲ್ಲಿ ಶಾರುಖ್ ನೇರವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ, ಅದೇ ಮಾದರಿಯಲ್ಲಿ ಯಾರಿಗೆ ಈ ಚಾಟಿಯೇಟು ಎನ್ನುವುದನ್ನು ವಾಂಖೆಡೆ ಉಲ್ಲೇಖಿಸದೇ ಇದನ್ನು ಟ್ವೀಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಯಾಗುತ್ತಿದೆ.
ಆರ್ಯನ್ ಡ್ರಗ್ಸ್ ಕೇಸ್ಗೆ ಟ್ವಿಸ್ಟ್: 25 ಕೋಟಿ ಲಂಚ ಕೇಸಲ್ಲಿ ಸಿಲುಕಿದ ಶಾರುಖ್ಗೆ ಬಂಧನದ ಭೀತಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.