JAWAN: ಲೈಫ್​ನಲ್ಲಿ ಮೊದಲ ಬಾರಿಗೆ ತಲೆ ಬೋಳಿಸಿಕೊಂಡ ಕುತೂಹಲದ ಮಾಹಿತಿ ದುಬೈನಲ್ಲಿ ರಿವೀಲ್​ ಮಾಡಿದ ಶಾರುಖ್​​!

Published : Sep 01, 2023, 04:52 PM IST
 JAWAN: ಲೈಫ್​ನಲ್ಲಿ ಮೊದಲ ಬಾರಿಗೆ ತಲೆ ಬೋಳಿಸಿಕೊಂಡ ಕುತೂಹಲದ ಮಾಹಿತಿ ದುಬೈನಲ್ಲಿ ರಿವೀಲ್​ ಮಾಡಿದ ಶಾರುಖ್​​!

ಸಾರಾಂಶ

ನಟ ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ ಜವಾನ್​ ಚಿತ್ರದ ಟ್ರೈಲರ್​ ನಿನ್ನೆ ದುಬೈನಲ್ಲಿ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಅವರು, ಚಿತ್ರದಲ್ಲಿ ತಾವು ತಲೆ ಬೋಳಿಸಿಕೊಂಡಿರುವ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?  

ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್ ಜವಾನ್ (Jawan) ಚಿತ್ರದ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜವಾನ್ ಚಿತ್ರದ ಟ್ರೈಲರ್ ಅನ್ನು ತಯಾರಕರು ಗುರುವಾರ ಅನಾವರಣಗೊಳಿಸಿದ್ದಾರೆ. ಇದರಲ್ಲಿ  ಶಾರುಖ್ ಅವರು 8 ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರೋದನ್ನು ನೋಡಬಹುದು. ದುಬೈನ ಬುರ್ಜ್ ಖಲೀಫಾದಲ್ಲಿ ನಡೆದ ಜವಾನ್ ಚಿತ್ರದ ಗ್ರ್ಯಾಂಡ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಶಾರುಖ್​ ದುಬೈಗೆ ಹೋಗಿದ್ದರು. ಜವಾನ್​ ಚಿತ್ರದಲ್ಲಿ ತಲೆ ಬೋಳಿಸಿಕೊಂಡಿರುವ ಕುರಿತು ಅವರು ಮಾತನಾಡಿದ್ದಾರೆ.

 ಶಾರುಖ್ ಖಾನ್​ಗೂ ದುಬೈಗೂ ಒಳ್ಳೆಯ ನಂಟಿದೆ. ಅವರು ದುಬೈ (Dubai) ಪ್ರವಾಸೋದ್ಯಮದ ಪ್ರಚಾರ ರಾಯಭಾರಿಗಳಲ್ಲಿ ಒಬ್ಬರು. ಅಲ್ಲಿ ಶಾರುಖ್​​ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಶಾರುಖ್ ಖಾನ್ ಅವರು ಆಗಾಗ ದುಬೈಗೆ ತೆರಳುತ್ತಾರೆ. ಅಲ್ಲಿಯೂ ಸಿನಿಮಾ ಪ್ರಚಾರ ಮಾಡುತ್ತಾರೆ. ಈಗ ದುಬೈನ ಬುರ್ಜ್ ಖಲೀಫಾದಲ್ಲಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಅವರು ಚಿತ್ರಕ್ಕಾಗಿ ತಲೆ ಬೋಳಿಸಿಕೊಂಡಿರುವ ಕುರಿತು ಮಾತನಾಡಿದ್ದಾರೆ. ನಿಮಗಾಗಿ ಇದೇ ಮೊದ್ಲ ಬಾರಿಗೆ ನಾನು  ತಲೆ ಬೋಳಿಸಿಕೊಂಡಿದ್ದೇನೆ. ಹಿಂದೆಯೂ ಹೀಗೆ ಮಾಡಿರಲಿಲ್ಲ, ಮುಂದೆಯೂ ಮಾಡಲ್ಲ. ಹೀಗೆ ತಲೆ ಬೋಳಿಸಿಕೊಂಡಿರೋದು ಇದೇ ಮೊದಲು ಹಾಗೂ ಕೊನೆ ಎಂದು ಶಾರುಖ್​ ಹೇಳಿದ್ದ್ಆರೆ.  ನಿಮಗಾಗಿ ನಾನೀಗ ಬಾಲ್ಡಿ ಆಗಿದ್ದೇನೆ. ಇವೆಲ್ಲವೂ ನಿಮಗಾಗಿ. ಆದ್ದರಿಂದ ದಯವಿಟ್ಟು ಈ ಬಾಲ್ಡಿ ತಲೆಯನ್ನಾದರೂ ನೋಡಲು ಜವಾನ್​ ನೋಡಿ. ಇದನ್ನು ಬಿಟ್ಟರೆ ನನ್ನನ್ನು ಈ ಅವತಾರಲ್ಲಿ ಪುನಃ ನೋಡಲು ನಿಮಗೆ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದ್ದರಿಂದ ದಯವಿಟ್ಟು ಎಲ್ಲರೂ ಹೋಗಿ ಎಂದಿದ್ದಾರೆ.

Jawan Trailer- ಮುಂಬೈಯನ್ನು ಬೆಚ್ಚಿಬೀಳಿಸಿದ ಅತಿದೊಡ್ಡ ಹೈಜಾಕ್​: ಆಲಿಯಾ ಭಟ್​ಗಾಗಿ ವಿಲನ್​ ಬೇಡಿಕೆ!

ಅಂದಹಾಗೆ, ಶಾರುಖ್ ಖಾನ್ ಅವರ ಹೊಸ ಚಿತ್ರ ಜವಾನ್ (Jawan) ಪ್ರಪಂಚದಾದ್ಯಂತದ ಭಾರತೀಯ ಸಿನಿಪ್ರಿಯರಲ್ಲಿ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸುತ್ತಿದೆ. ಟ್ರೇಲರ್‌ಗಳು, ಹಾಡುಗಳು ಮತ್ತು ಪೋಸ್ಟರ್‌ಗಳು (poster) ಸರಿಯಾದ ರೀತಿಯ ಬಜ್ ಮತ್ತು ಆಸಕ್ತಿಯನ್ನು ಸೃಷ್ಟಿಸಿರುವ ಕಾರಣದಿಂದ ಜನರು ನಿಜವಾಗಿಯೂ ಅದನ್ನು ಎದುರು ನೋಡುತ್ತಿದ್ದಾರೆ. ಶಾರುಖ್ ಅವರ ಮೆಗಾ-ಸಕ್ಸಸ್ ಪಠಾಣ್‌ನ ನೆರಳಿನಲ್ಲೇ ಚಿತ್ರ ಬಂದಿರುವುದು ಕೂಡ ಒಂದು ಕಾರಣವಾಗಿದೆ. ಸೆಪ್ಟೆಂಬರ್ 7 ರಂದು  ಜವಾನ್ ತೆರೆಗೆ ಬರಲು ಸಿದ್ಧವಾಗಿದೆ.  ಎಸ್‌ಆರ್‌ಕೆ ಅವರ ಬಹು ನಿರೀಕ್ಷಿತ ಚಿತ್ರ ಜರ್ಮನಿಯಲ್ಲಿ ವಿಶ್ವದ ಅತಿದೊಡ್ಡ ಪರದೆಯಲ್ಲಿ ಬಿಡುಗಡೆಯಾಗಲಿದೆ. ಜರ್ಮನಿಯ ಲಿಯಾನ್‌ಬರ್ಗ್‌ನಲ್ಲಿ ದೈತ್ಯಾಕಾರದ ಶಾಶ್ವತ IMAX ಪರದೆಯ ಮೇಲೆ ಜವಾನ್ ಅನ್ನು ತೋರಿಸಲಾಗುವುದು. ಈ ಪರದೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದು 125 ಅಡಿ ಅಗಲ ಮತ್ತು 72 ಅಡಿ ಎತ್ತರವಿದೆ. ಇದು ಸಾಮಾನ್ಯ ಪರದೆಗಿಂತ ದೊಡ್ಡದಾಗಿದೆ! ಇದೀಗ ಇತಿಹಾಸವನ್ನೂ ಸೃಷ್ಟಿಸಿದೆ. ಅದೇನೆಂದರೆ  ಇದುವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟು ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಂಡಿಲ್ಲ. ಇದು ನಿಜವಾಗಿಯೂ ಅದ್ಭುತವಾಗಿದೆ. ಏಕೆಂದರೆ ಜನರು ಚಲನಚಿತ್ರದ ಎಲ್ಲಾ ರೋಮಾಂಚಕಾರಿ ಕ್ರಿಯೆಯನ್ನು ಮತ್ತು ವಿನೋದವನ್ನು ನಿಜವಾಗಿಯೂ ಅದ್ಭುತವಾದ ರೀತಿಯಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

 
ನಿನ್ನೆ ಜವಾನ್​ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶಾರುಖ್ (Shahrukh Khan) ಮಾತ್ರವಲ್ಲದೆ 8 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಬಹುದು.  ಈ ಟ್ರೇಲರ್​ ನೋಡಿದ್ರೆ ವಿಲನ್​, ಹೀರೋ ಎಲ್ಲವೂ ಶಾರುಖ್​ ಖಾನೇ ಎನಿಸುವಂತಿದೆ. ಈ ವಿಡಿಯೋದಲ್ಲಿ ಗನ್​ ಹಿಡಿದು ವಿಲನ್​ ರೂಪದಲ್ಲಿ ಶಾರುಖ್​ ಹೈಜಾಕ್​ ಮಾಡುವ ವಿಡಿಯೋ ಇದ್ದು, ಅದರಲ್ಲಿ ಪೊಲೀಸರು ಏನು ಬೇಕು ಎಂದು ಕೇಳಿದಾಗ ಆಲಿಯಾ ಭಟ್​ ಎನ್ನುತ್ತಾನೆ ವಿಲನ್​! ಇದಾಗಲೇ ಬಳಿಕ ಚೀರಾಟ, ಕೂಗಾಟ, ರಕ್ತಪಾತ ಎಲ್ಲವೂ ಚಿತ್ರದಲ್ಲಿದೆ. ತಮನ್ನಾ ಭಾಟಿಯಾ, ದೀಪಿಕಾ ಪಡುಕೋಣೆಯ ಜೊತೆ ರೊಮ್ಯಾನ್ಸಿಂಗ್​ ಸೀನ್​ ಕೂಡ ಇದ್ದು, ಒಂದು ಹಂತದಲ್ಲಿ ದೀಪಿಕಾ ಶಾರುಖ್​ ಖಾನ್​ರನ್ನು ಹೊಡೆದುರುಳಿಸುವ ದೃಶ್ಯವೂ ಇದೆ. ಒಟ್ಟಾರೆಯಾಗಿ ಈ ಟ್ರೇಲರ್​ ಸಕತ್​ ಕುತೂಹಲವನ್ನು ಕೆರಳಿಸಿದೆ. 

ಜರ್ಮನಿಯಲ್ಲಿ ಶಾರುಖ್ ಖಾನ್​ ದಾಖಲೆ​; ಇತಿಹಾಸ ಸೃಷ್ಟಿಸಲಿದೆ ಜವಾನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!