
ವೈಸಿಪಿ ನಾಯಕಿ, ತೆಲುಗು ಎಪಿ ಮತ್ತು ಸಂಸ್ಕೃತ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಆಂಧ್ರದ ಮಾಜಿ ಸಿಎಂ ಹಾಗೂ ಖ್ಯಾತ ನಟ ಎನ್‌ಟಿಆರ್ ಬೆನ್ನಿಗೆ ಚೂರಿ ಹಾಕಿದ್ದರಲ್ಲಿ ಹಿನ್ನಡೆಯಾಗಿದ್ದು, ಚಂದ್ರಬಾಬು ಮತ್ತು ಎನ್‌ಟಿಆರ್ ಮಗಳು ಪುರಂದೇಶ್ವರಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಎನ್‌ಟಿಆರ್ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಕೇಂದ್ರ ಸರ್ಕಾರ ಅವರ ಭಾವಚಿತ್ರ ಇರುವ 100 ಮುಖ ಬೆಲೆಯ ನಾಣ್ಯ ಬಿಡುಗಡೆ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೌದು! ಕೆಲವು ದಿನಗಳ ಹಿಂದೆ ನಟಸಾರ್ವಭೌಮ ಎನ್‌ಟಿಆರ್ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಎನ್‌ಟಿಆರ್ ಭಾವಚಿತ್ರ ಇರುವ 100 ರೂಪಾಯಿ ಬೆಲೆಯ ನಾಣ್ಯ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿದ್ದು, ತಮಗೆ ಆಹ್ವಾನ ನೀಡಿಲ್ಲ ಎಂದು ಲಕ್ಷ್ಮಿ ಪಾರ್ವತಿ ಬೇಸರ ವ್ಯಕ್ತ ಪಡಿಸಿದ್ದಾರೆ. 'ನಾಣ್ಯ ಬಿಡುಗಡೆ ಮಾಡಿರುವುದು ಖುಷಿ ಇದೆ. ಆದರೆ ಹೆಂಡತಿಯಾಗಿ ನನಗೆ ಆಹ್ವಾನ ನೀಡದೇ ಇರುವುದಕ್ಕೆ ಬೇಸರವಾಗಿದೆ. ನನ್ನನ್ನು ಆಹ್ವಾನಿಸದೇ ಇರುವುದು ದೊಡ್ಡ ತಪ್ಪು. ಈ ಕಾರ್ಯಕ್ರಮನ್ನು ನನ್ನನ್ನು ಆಹ್ವಾನಿಸುವಂತೆ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೆ.ಒಂದು ವೇಳೆ ಸರ್ಕಾರವೇ ಈ ಕಾರ್ಯಕ್ರಮ ಆಯೋಜಿಸಿದ್ದರೆ ಪತ್ನಿಯಾಗಿ ನನ್ನನ್ನು ಆಹ್ವಾನಿಸದೇ ಇರುವುದು ಅನ್ಯಾಯ,' ಎಂದು ಲಕ್ಷ್ಮಿ ಪಾರ್ವತಿ ಹೇಳಿದ್ದಾರೆ.
1000 ಕೋಟಿ ವಾರಸ್ದಾರ ನರೇಶ್; ಪವಿತ್ರಾ ಲೋಕೇಶ್ ಹಣಕ್ಕಾಗಿ ಬಂದಿಲ್ಲ ಎಂದ ಸವತಿ ಮಗ!
ಸಾವಿನ ಆರೋಪ:
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಲಕ್ಷ್ಮಿ ಪಾರ್ವತಿ ಎನ್‌ಟಿಆರ್ ಸಾವಿಗೆ ಕುಟುಂಬವೇ ಕಾರಣ ಎಂದು ಆರೋಪಿಸಿದ್ದಾರೆ. ಎನ್‌ಟಿಆರ್ ಪ್ರಾಣ ತೆಗೆದವರು ಅವರ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸರಿ ಅಲ್ಲ. ಎನ್‌ಟಿಆರ್ ತಮ್ಮನ್ನು ಮದುವೆ ಆಗಿದ್ದಾರೆ ಎಂಬ ಪ್ರಶ್ನೆಗೆ ಅವರ ಮಕ್ಕಳು ಉತ್ತರಿಸಬೇಕು. ನಾವಿಬ್ಬರು ಮದುವೆ ಆಗಿದ್ದೀನಿ ಅನ್ನೋದಕ್ಕೆ ಫೋಟೋಗಳು ಮತ್ತು ಆಗ ಪ್ರಕಟವಾದ ಸುದ್ದಿಯೇ ಸಾಕ್ಷಿ. ಮದುವೆ ವಿಚಾರವಾಗಿ ಹಲವು ಸಲ ಎನ್‌ಟಿಆರ್ ಸಾರ್ವಜನಿಕವಾಗಿ ಹೇಳಿದ್ದಾರೆ ಕೂಡ,' ಎಂದು ಲಕ್ಷ್ಮಿ ಪಾರ್ವತಿ ಹೇಳಿದ್ದಾರೆ.
ತಂದೆ ಜೊತೆ Dp ಹಾಕಿದ್ದ ಸ್ಪಂದನಾ ಎಂದೂ ಬದಲಾಯಿಸಲಿಲ್ಲ: ವಿಜಯ್ ರಾಘವೇಂದ್ರ ಭಾವುಕ
80ರ ದಶಕದಲ್ಲಿ ಪುರಂದೇಶ್ವರಿ ಹೋಗಿಬಿಟ್ಟರು ಅಗ ಎನ್‌ಟಿಆರ್‌ನ ನೋಡಿಕೊಂಡಿದ್ದು ಯಾರು ಆರೋಗ್ಯ ಕೆಟ್ಟಿದ್ದಾಗ ಜೊತೆಯಲ್ಲಿದ್ದವರು ಯಾರು? ಹೀಗಾಗಿ ನಾನು ಮದುವೆ ಮಾಡಿಕೊಂಡೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.