ಸಂಪೂರ್ಣ ಬೆತ್ತಳಾದ ಸಮಂತಾ ಫೋಟೋ ವೈರಲ್ ಆಗಿದ್ದು ಟ್ರೋಲಿಗರಿಗೆ ನಟಿ ಹೇಳಿದ್ದೇನು?
ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿತ್ತು. ಸಮಂತಾ ಫ್ಯಾನ್ಸ್ ಇದನ್ನು ನಕಲಿ ಎನ್ನುತ್ತಿದ್ದರು. ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಷ್ಟಕ್ಕೂ ಇದು ಸಮಂತಾ ರುತ್ ಪ್ರಭು ಅವರ ನಕಲಿ ಚಿತ್ರವೆಂದೇ ಹೇಳಲಾಗಿತ್ತು. ಇದರಲ್ಲಿ ನಟಿ ಬಾತ್‌ಟಬ್‌ನಲ್ಲಿ ನಗ್ನವಾಗಿ ಕುಳಿತ ಫೋಟೋ ಆಗಿತ್ತು. ಆದರೆ ಶೀಘ್ರದಲ್ಲೇ ಅದನ್ನು ಡಿಲೀಟ್ ಮಾಡಲಾಗಿತ್ತು. ಈ ಬಗ್ಗೆ ಸಮಂತಾ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಇದೀಗ ನಟಿ ಇದರ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಿಲ್ಲ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ.
ಮಾರ್ಫ್ ಮಾಡಿದ ಅರೆ ಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಅದು ಸಮಂತಾ ಅವರ ಫೋಟೋ ಎಂದು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರು. ಅದರ ಬೆನ್ನಲ್ಲೇ ಸಮಂತಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಕೋಟ್ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಿಲ್ಲ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ. ಸಮಂತಾ ಫೇಕ್ ನ್ಯೂಡ್ ಫೋಟೋ ಪ್ರಸಾರ ಮಾಡುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸ್ಲ್ಯಾಮ್ ಮಾಡಿರುವ ಅಭಿಮಾನಿಗಳು, ಆಕೆಯ ಮೇಲೆ ನೀವು ಉಳಿ ಪೆಟ್ಟು ಕೊಟ್ಟಷ್ಟೂ ಆಕೆ ಉತ್ತಮವಾಗುತ್ತಲೇ ತೋರುತ್ತಿದ್ದಾಳೆ ಎಂದು ಹೇಳುತ್ತಿದ್ದಾರೆ.
ಪ್ರಧಾನಿ ಮೋದಿಯ ಪ್ರತಿಕ್ರಿಯೆಗೆ ಅಬ್ಬಾ ಅವರೇ ಸಾಟಿ: ಹಾಡಿ ಹೊಗಳಿದ ನಟ ಮಿಥುನ್ ಚಕ್ರವರ್ತಿ
ಇನ್ನು ಸಮಂತಾ ಅವರು, ಪತಿ ನಾಗ ಚೈತನ್ಯ (Naga Chaitanya) ಅವರ ಬೇರ್ಪಡಿಕೆಯಿಂದ ಸುದ್ದಿಯಲ್ಲಿದ್ದಾರೆ. ಆದರೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿತು ಈ ಜೋಡಿ. 2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದು ಇದಾಗಲೇ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಆದರೆ ಇವರ ಡಿವೋರ್ಸ್ ಸುದ್ದಿ ಮಾತ್ರ ಇಂದಿಗೂ ಸದ್ದು ಮಾಡುತ್ತಲೇ ಇದೆ. ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ (Dating) ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಇಬ್ಬರೂ ಲಂಡನ್ ಹೋಟೆಲ್ ಒಂದರಲ್ಲಿ ಸಿಕ್ಕಿ ಕೂಡ ಬಿದ್ದಿದ್ದರು. ಇದೇ ಕಾರಣಕ್ಕೆ ನಾಗಚೈತನ್ಯ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
ಇದರ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ನಟಿ, ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುತ್ತಾರೆ. ಸಮಂತಾ ಅವರ ಅಭಿಮಾನಿಯೊಬ್ಬ ತೀರಾ ಪರ್ಸನಲ್ ವಿಷಯ ಕೆದಕಿದ್ದರು. ಅಮಾಯಕ ಪತಿಗೆ ಮೋಸ ಯಾಕೆ ಮಾಡಿದ್ರಿ ಎಂದು ಸಮಂತಾರನ್ನು ವಿಶಾಲ್ ಕದಮ್ ಹೆಸರಿನ ಖಾತೆಯುಳ್ಳ ಅಭಿಮಾನಿಯೊಬ್ಬರು ಕೇಳಿದ್ದರು. ಸಮಂತಾ ಸಾಮಾನ್ಯವಾಗಿ ತಮ್ಮ ಪರ್ಸನಲ್ ವಿಷಯಕ್ಕೆ ಯಾರೂ ತಲೆ ಹಾಕುವುದನ್ನು ಇಷ್ಟಪಡುವುದಿಲ್ಲ. ಇದರ ಹೊರತಾಗಿಯೂ ನಟಿ ಕೂಲ್ ಆಗಿಯೇ ಈ ಪ್ರಶ್ನೆಗೆ ಉತ್ತರಿಸಿದ್ದರು. ನನ್ನ ಅಭ್ಯಾಸಗಳ ಬಗ್ಗೆ ನಿಮಗೆ ಹೇಳಿದರೆ ಅದು ನಿಮಗೆ ಅರ್ಥವಾಗದೇ ಹೋಗಬಹುದು. ಆದ್ದರಿಂದ ಬೇರೆ ಏನನ್ನಾದರೂ ಕೇಳಿ. ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ವಿಷಯಕ್ಕೆ ಬರಬೇಕು ಎಂದು ನಟಿ ಪರೋಕ್ಷವಾಗಿ ಹೇಳಿದ್ದರು.
ನೀನೂ ಎಲ್ಲರ ಹಾಗೆ ಆಗೋದ್ಯಲ್ಲಾ ಪುಟ್ಟಕ್ಕಾ... ಈಗ ಎದೆ ಬಡಿದುಕೊಂಡು ಅತ್ತರೆ ಏನ್ ಪ್ರಯೋಜನ? ಫ್ಯಾನ್ಸ್ ಕಿಡಿ