ಸಮಂತಾವರು ಸದ್ಯಕ್ಕೆ ಒಂಟಿಯಾಗಿದ್ದರೂ ಮತ್ತೆ ಜಂಟಿಯಾಗುವ ಪ್ಲಾನ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಕನ್ಫರ್ಮ್ ಆಗಿಲ್ಲ. ಈ ಮಧ್ಯೆ ನಟಿ ಸಮಂತಾ ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಇದೀಗ ಸಕತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಸಮಂತಾ ಅವರು ಅದೇನು ಹೇಳಿದ್ದಾರೆ? ಯಾರ ಬಗ್ಗೆ ..
ತೆಲುಗು ಸ್ಟಾರ್ ನಟ-ನಟಿ ಜೋಡಿ ಸಮಂತಾ (Samantha Ruth Prabhu) ಹಾಗೂ ನಾಗಚೈತನ್ಯ (Naga Chaitanya) ಅವರಿಬ್ಬರ ಲವ್, ಮದುವೆ ಹಾಗೂ ಡಿವೋರ್ಸ್ ಪ್ರಕರಣ ಬಹುತೇಕ ಎಲ್ಲರಿಗೂ ಗೊತ್ತಿದೆ. ಅವರಿಬ್ಬರೂ ದೂರವಾದ ಮೇಲೂ ಆರಾಮವಾಗಿಯೇ ಇದ್ದಿರಬಹುದು. ಆದರೆ, ಅವರ ಅಭಿಮಾನಿಗಳು ಮಾತ್ರ ತಲೆಬಿಸಿ ಮಾಡಿಕೊಂಡಿದ್ದಾರೆ. ಅವರಿಬ್ಬರ ಫ್ಯಾನ್ಸ್ ತಲೆಬಿಸಿ ಮಾಡಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕಿಕೊಂಡು ಒದ್ದಾಡುತ್ತಿದ್ದರು. ಬಳಿಕ ನಟ ನಾಗಚೈತನ್ಯ ಅವರು ನಟಿ ಶೋಭಿತಾ ದುಲಿಪಾಲ ಅವರನ್ನು ಮದುವೆಯಾಗಿ ಮತ್ತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈಗ ಸಮಂತಾವರು ಸದ್ಯಕ್ಕೆ ಒಂಟಿಯಾಗಿದ್ದರೂ ಮತ್ತೆ ಜಂಟಿಯಾಗುವ ಪ್ಲಾನ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಕನ್ಫರ್ಮ್ ಆಗಿಲ್ಲ. ಈ ಮಧ್ಯೆ ನಟಿ ಸಮಂತಾ ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಇದೀಗ ಸಕತ್ ವೈರಲ್ ಆಗುತ್ತಿದೆ. ಹಾಗಿದ್ದರೆ ಸಮಂತಾ ಅವರು ಅದೇನು ಹೇಳಿದ್ದಾರೆ? ಯಾರ ಬಗ್ಗೆ ಮಾತನ್ನಾಡಿದ್ದಾರೆ ಎಂಬ ಕುತೂಹಲ ಅವರ ಫ್ಯಾನ್ಸ್‌ಗಳಿಗೆ ಇರಬಹುದು. ಅಂಥವರು ಇದನ್ನು ನೋಡಿದರೆ ಅವರಿಗೊಮದು ಕ್ಲಾರಿಟಿ ಸಿಗಬಹುದು. ಮುಂದಿದೆ ಮಾಹಿತಿ ನೋಡಿ..
ಸಂಕ್ರಾಂತಿಗೆ 'ಪುಷ್ಪ 2' ಹೊಸ ವರ್ಷನ್ ಕೊಟ್ಟ ಟೀಮ್; ಇಲ್ಲಿದೆ ಹೊಸ ಗುಟ್ಟು!
'ನೀನು ಹೊರಗೆ ಸ್ಟಾರ್ ಆದ್ರೂ ಮನೆಲ್ಲಿ ನೀನು ಸಾಮಾನ್ಯ ಗೃಹಿಣಿ. ಅಡುಗೆಗೆ ಸಾಮಾನುಗಳು ಇದೆಯೋ ಇಲ್ವೋ ನೋಡ್ಕೋಬೇಕು. ವಾರಾಂತ್ಯದ ಪ್ಲಾನ್ ಮಾಡ್ಕೋಬೇಕು' ಅಂತ ನಾಗಚೈತನ್ಯ ಸಮಂತಾಗೆ ಹೇಳಿದ್ರಂತೆ. ಇದನ್ನು ಬೇರೆ ಯಾರೋ ಹೇಳಿದ್ದಲ್ಲ, ಸ್ವತಃ ಸಮಂತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಸಮಂತಾ ಮಾಜಿ ಪತಿ, ನಟ ನಾಗಚೈತನ್ಯ ಅವರು ಹೇಳಿದ್ದರಲ್ಲಿ ಏನಾದ್ರೂ ತಪ್ಪಿದ್ಯಾ? ಅವರು ಹಾಗೆ ಹೇಳಿದ್ದರು ಎಂದರೆ ಸಮಂತಾ ಅವರು ಅದನ್ನು ಮಾಡುತ್ತಿರಲಿಲ್ಲವೇ? ಈ ಪ್ರಶ್ನೆಗಳು ಸಹಜ!
ಅದರೆ, ಅದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿರುವುದು ಅವರ ಅಭಿಮಾನಿಗಳೋ ಅಥವಾ ಮತ್ಯಾರೋ ಅಲ್ಲ, ಅದನ್ನು ಸ್ವತಃ ಸಮಂತಾ ಹಾಗೂ ನಾಗಚೈತನ್ಯ ಅವರೇ ಕಂಡುಕೊಳ್ಳಬೇಕಿತ್ತು. ಇಬ್ಬರೂ ಒಂದುಕಡೆ ಕುಳಿತು, ಪರಸ್ಪರ ಮಾತನ್ನಾಡಿಕೊಂಡು ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಈಗ ಮಾಜಿ ಸತಿಪತಿಗಳಾದ ಬಳಿಕ ಆ ಬಗ್ಗೆ ಮಾತನ್ನಾಡಿದರೆ ಏನು ಪ್ರಯೋಜನ ಎನ್ನಬಹುದು. ಅದಿರಲಿ, ಸಮಂತಾ ಈಗ ಆ ಸಂಗತಿ ಹೇಳಿರುವುದು ಜ್ಞಾನೋದಯದಿಂದಲೋ ಅಥವಾ ನಾಗಚೈತನ್ಯ ವಿರುದ್ಧ ಆರೋಪವೋ? ಬಲ್ಲವರಾರು?
'ತೀರ್ಥರೂಪ ತಂದೆಯವರಿಗೆ' ಚಿತ್ರಕ್ಕೆ ನಿಹಾರ್ ಜೋಡಿಯಾಗಿ ರಚನಾ ಇಂದರ್!
ಅದೇನೇ ಇರಲಿ, ನಟಿ ಸಮಂತಾ ಅವರಿಗೆ ಅಥವಾ ನಾಗಚೈತನ್ಯ ಅವರಿಗೆ ಅವರ ಜೀವನವನ್ನು ಅವರಿಷ್ಟದಂತೆ ಬದುಕುವ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರೇನೇದಾರೂ ಮಾಡಿಕೊಳ್ಳಲಿ, ಜಗತ್ತು ಹಾಗೂ ಫ್ಯಾನ್ಸ್ ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಅಚ್ಚರಿಯ ಸಂಗತಿಯೇ ಸರಿ. ಯಾರದೋ ಲೈಫ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಭಿಮಾನಿಗಳು ಈ ಬಗ್ಗೆ ಯೋಚನೆ ಮಾಡಬೇಕಿಷ್ಟೇ. ಅವರು ಬೇಕಾದಾಗ ಮದುವೆ ಆಗುತ್ತಾರೆ, ಬೇಡವೆಂದರೆ ವಿಚ್ಛೇದನ ತೆಗೆದುಕೊಳ್ಳುತ್ತಾರೆ. ಅದೇ ಆಟದಲ್ಲಿ ಅವರ ಜೀವನ ಹೇಗೋ ನಡೆಯುತ್ತದೆ. ಆ ಬಗ್ಗೆ ಜಗತ್ತು ತಲೆಕೆಡಿಸಿಕೊಳ್ಳಬೇಕಿಲ್ಲ' ಅಂತ ಒಂದು ಕಾಮೆಂಟ್ ಓಡಾಡುತ್ತಿದೆ. ಈ ಮಾತು ತುಂಬಾ ಅರ್ಥಪೂರ್ಣವಾಗಿದೆ ಎನ್ನಬಹುದೇ?