ಸಂಜು ವೆಡ್ಸ್‌ ಗೀತಾ 2 ರಿಲೀಸ್‌ ಯಾಕೆ ನಿಂತು ಹೋಯ್ತು? ಅಸಲಿ ಕಾರಣ ಇಲ್ಲಿದೆ ನೋಡಿ!

Published : Jan 10, 2025, 11:28 AM ISTUpdated : Jan 10, 2025, 11:31 AM IST
 ಸಂಜು ವೆಡ್ಸ್‌ ಗೀತಾ 2 ರಿಲೀಸ್‌ ಯಾಕೆ ನಿಂತು ಹೋಯ್ತು? ಅಸಲಿ ಕಾರಣ ಇಲ್ಲಿದೆ ನೋಡಿ!

ಸಾರಾಂಶ

 ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ 'ಸಂಜು ವೆಡ್ಸ್ ಗೀತಾ' ಸಿನಿಮಾ ಇಂದು ಬಿಡುಗಡೆ ಆಗ್ಬೇಕಿತ್ತು. ಸಡನ್ನಾಗಿ ರಿಲೀಸನ್ನು ಮುಂದಕ್ಕೆ ಹಾಕಲಾಗಿದೆ. ಕಾರಣ ಏನು ಗೊತ್ತಾ?.

ವೈಕುಂಠ ಏಕಾದಶಿ ದಿನ ಸ್ವರ್ಗದ ಬಾಗಿಲು ತೆಗೆದರೂ 'ಸಂಜು ವೆಡ್ಸ್ ಗೀತಾ 2' ಸಿನಿಮಾಗೆ ಥಿಯೇಟರ್ ಬಾಗಿಲು ತೆಗೆದಿಲ್ಲ.

'ಸಂಜು ವೆಡ್ಸ್ ಗೀತಾ' ಸೂಪರ್ ಡೂಪರ್ ಹಿಟ್ ಸಿನಿಮಾ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ನಟಿಸಿದ್ದ ಈ ಸಿನಿಮಾ ಆ ಕಾಲಕ್ಕೆ ಒಂದಿಷ್ಟು ಹೆಸರು ಮಾಡಿ ಗಲ್ಲಾ ಪೆಟ್ಟಿಗೆ ದೋಚಿಕೊಂಡು ಹೋಯ್ತು. ಇದಾಗಿ ದಶಕಗಳ ನಂತರ ಈ ಸಿನಿಮಾ ನಿರ್ದೇಶಕ ನಾಗಶೇಖರ್ ಅದೇ ಟೈಟಲ್‌ನಲ್ಲಿ ಮುಂದುವರಿದ ಭಾಗ ಮಾಡೋದಕ್ಕೆ ಮನಸ್ಸಾಗಿದೆ. ಸರಿ ಅಂದ್ಕೊಂಡು ಶ್ರೀನಗರ ಕಿಟ್ಟಿ ಅವರನ್ನು ಸಂಪರ್ಕಿಸಿದ್ರೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ರಮ್ಯಾ ಅಷ್ಟೊತ್ತಿಗಾಗಲೇ ಸಿನಿಮಾದಿಂದ ಆಚೆ ಕಾಲಿಟ್ಟ ಕಾರಣ ನೋ ಅಂದಿದ್ದಾರೆ. ಆದರೆ ಡಿಂಪಲ್ ಕ್ವೀನ್ ರಚಿತಾ ರಾಮ್ ಡೇಟ್ಸ್ ಕೊಟ್ಟು ನಿರ್ದೇಶಕರ ಕನಸಿಗೆ ನೀರೆರೆದಿದ್ದಾರೆ. ಸೋ ನಾಗಶೇಖರ್ ಮತ್ತೆ ಪ್ರೇಮಕಥೆ ಬರೆದು ಅದಕ್ಕಾಗಿ ನಿರ್ಮಾಪಕರಿಗೆ ಎಡತಾಕಿದಾಗ ಅವರಿಗೆ ನಿರ್ಮಾಪಕ ಛಲವಾದಿ ಕುಮಾರ್ ಬಂಡವಾಳ ಹಾಕಲು ಮುಂದೆ ಬಂದಿದ್ದಾರೆ. ಸೋ ಸಿನಿಮಾ ಕೆಲಸ ಎಲ್ಲ ಸರಾಗವಾಗಿ ನಡೆದಿದೆ.

ಆದರೆ ಈ ಸಿನಿಮಾ ರಿಲೀಸ್ ಆಗುತ್ತೆ ಅಂತ ಘೋಷಿಸಿದ ಹಿಂದಿನ ದಿನವೇ ರಿಲೀಸ್ ಅನ್ನು ಸಿನಿಮಾ ತಂಡ ಮುಂದೂಡಿದೆ. ಯಾಕಪ್ಪಾ ಏನಾಯ್ತು ಅಂದರೆ ಎಲ್ಲರೂ ಹೈದರಾಬಾದ್‌ನ ನಿರ್ಮಾಪಕ ರಾಮರಾವ್ ಕಡೆ ಬೊಟ್ಟು ಮಾಡ್ತಾರೆ. ಅವರ ಹಾಗೂ ಚಿತ್ರತಂಡದ ನಡುವೆ ಏನೋ ಗುದ್ದಾಟ ನಡೆದಿದೆ. ಈ ಪುಣ್ಯಾತ್ಮ ಸಿನಿಮಾ ರಿಲೀಸ್‌ಗೂ ಒಂದು ದಿನ ಮೊದಲೇ ಕೋರ್ಟ್‌ಗೆ ಹೋಗಿ ಸಿನಿಮಾ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದಾರೆ.

ಅಣ್ಣಾವ್ರ ಕುಟುಂಬಕ್ಕೆ ಆರೋಗ್ಯದ ವಿಚಾರದಲ್ಲಿ ಏಟ್ ಮೇಲೆ ಏಟು ಬೀಳುತ್ತಿದೆ; ನೋವು ಹಂಚಿಕೊಂಡ ಪೂರ್ಣಿಮಾ ರಾಮ್‌ಕುಮಾರ್

ಸೋ ಶ್ರೀನಗರ ಕಿಟ್ಟಿ, ರಚಿತಾ ರಾಮ್ ಮುಂತಾದವರು ನಟಿಸಿರುವ ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಬಿಡುಗಡೆ ಕ್ಯಾನ್ಸಲ್ ಆಗಿದೆ. ಜನವರಿ 10ರಂದು ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಅಂತಿಮ ಹಂತದಲ್ಲಿ ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿದೆ. ಈ ಸಿನಿಮಾಗೆ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದು, ಚಿತ್ರತಂಡದಲ್ಲಿನ ಜಟಾಪಟಿಯಿಂದಾಗಿ ಸಿನಿಮಾದ ರಿಲೀಸ್​ ಮುಂದಕ್ಕೆ ಹೋಗುವಂತಾಗಿದೆ. ಹಾಗಾಗಿ, ಇಂದು ‘ಸಂಜು ವೆಡ್ಸ್​ ಗೀತಾ 2’ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಟೈಟಲ್​ ಕಾರಣದಿಂದಲೇ ‘ಸಂಜು ವೆಡ್ಸ್​ ಗೀತಾ 2’ ಚಿತ್ರ ನಿರೀಕ್ಷೆ ಮೂಡಿಸಿತ್ತು. ಹಾಗಾಗಿ ಈ ಸಿನಿಮಾವನ್ನು ನೋಡಬೇಕು ಎಂದು ರಚಿತಾ ರಾಮ್​, ಶ್ರೀನಗರ ಕಿಟ್ಟಿ ಫ್ಯಾನ್ಸ್ ಕಾಯುತ್ತಿದ್ದರು. ಇನ್ನೇನು ಜನವರಿ 10 ಬಂದೇ ಬಿಡ್ತು, ಚಿತ್ರಮಂದಿರದಲ್ಲಿ ಸಿನಿಮಾ ನೋಡೋಣ ಎಂದುಕೊಂಡಿದ್ದ ಎಲ್ಲ ಅಭಿಮಾನಿಗಳಿಗೆ ನಿರಾಸೆ ಆಗಿದೆ. ‘ಕ್ಷಮಿಸಿ, ಸಿನಿಮಾದ ರಿಲೀಸ್​ ದಿನಾಂಕ ಮುಂದೂಡಲಾಗಿದೆ’ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ನಿರ್ದೇಶಕ ನಾಗಶೇಖರ್​ ಮತ್ತು ಟಾಲಿವುಡ್ ನಿರ್ಮಾಪಕ ರಾಮರಾವ್ ನಡುವಿನ ಜಟಾಪಟಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಬಿಡುಗಡೆಗೆ ಹೈದಾರಾಬಾದ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕುವುದು ಅನಿವಾರ್ಯ ಆಗಿದೆ.

ಗೇಮ್ ಚೇಂಜರ್ ಸ್ಟೋರಿ ಏನು? ರಾಮ್ ಚರಣ್ ಅಬ್ಬರಕ್ಕೆ ಫ್ಯಾನ್ಸ್ ಏನಂದ್ರು? ಇಲ್ಲಿವೆ ಟ್ವಿಟ್ಟರ್ ರಿವೀವ್!

ಈ ಸಿನಿಮಾ ಬಿಡುಗಡೆ ಘೋಷಣೆ ಆದಾಗಿಂದ ಚಿತ್ರತಂಡ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು. ಸಿನಿಮಾಕ್ಕೆ ಸುದೀಪ್‌ರಂಥಾ ಸ್ಟಾರ್ ನಟರೂ ಪ್ರಮೋಶನ್ ನೀಡಿದ್ದರು. ನಾಯಕ ಶ್ರೀನಗರ ಕಿಟ್ಟಿ, ನಾಯಕಿ ರಚಿತಾ ರಾಮ್ ಕೂಡ ಮೀಡಿಯಾ ಮುಂದೆ ಸಿನಿಮಾದ ಹೆಚ್ಚುಗಾರಿಕೆ ಕುರಿತಾಗಿ ಪ್ರಚಾರ ಮಾಡಿದ್ದರು.

ಆದರೆ ಬ್ಯಾಡ್‌ ಲಕ್ ಈ ಎಲ್ಲ ಪ್ರಯತ್ನ ಸದ್ಯ ನೀರಲ್ಲಿ ಹೋಮ ಮಾಡಿದ ಹಾಗಾಗಿದೆ. ಸೋ, ಸಂಜು ಮತ್ತು ಗೀತಾ ಸದ್ಯಕ್ಕಂತೂ ನಿಮ್ ಕೈಗೆ ಸಿಗಲ್ಲ. ಅವರ ಬಿಡುಗಡೆಗೆ ಪ್ರಾರ್ಥನೆ ಮಾಡೋದು ಬಿಟ್ಟರೆ ಸಿನಿಮಾ ಪ್ರೇಮಿಗಳಿಗೆ ಮತ್ತೇನೂ ದಾರಿ ತೋಚುತ್ತಿಲ್ಲ. ಆದರೆ ಈ ರಾಮರಾವ್ ಅನ್ನೋ ಪುಣ್ಯಾತ್ಮ ಸಿನಿಮಾ ರಿಲೀಸ್ ಹಿಂದಿನ ದಿನ ತಡೆಯಾಜ್ಞೆ ಯಾಕೆ ತಗಂಬಂದ್ರು, ಅವ್ರಿಗೂ ಟೀಮ್‌ಗೂ ನಡುವೆ ಇರುವ ಫೈಟ್‌ಗೆ ಕಾರಣ ಏನು ಅನ್ನೋದೆಲ್ಲ ಟೀಮ್‌ನವ್ರಿಗೆ ಬಿಟ್ರೆ ಮತ್ಯಾರಿಗೂ ಗೊತ್ತಿಲ್ಲ. ಸೋ ಸದ್ಯ ಸ್ಟೇ ಟ್ಯೂನ್ಡ್‌ ಅಷ್ಟೇ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ