ಕುಮಾರ್ ಸಾನುಗೆ ಪತ್ನಿ ಕಾಟ ! ಖಿನ್ನತೆಗೊಳಗಾಗಿದ್ದ ಗಾಯಕನ ಜೊತೆ ನಟಿಯ ಸಿಕ್ರೇಟ್ ರಿಲೇಶನ್ಶಿಪ್

By Roopa Hegde  |  First Published Jan 10, 2025, 11:38 AM IST

ಗಾಯಕ ಕುಮಾರ್ ಸಾನು ಹಾಗೂ ಮಾಜಿ ಪತ್ನಿ ರೀಟಾಗೆ ಸಂಬಂಧಿಸಿದ ಕೆಲ ವಿಷ್ಯಗಳು ಈಗ ಬಹಿರಂಗವಾಗಿವೆ. ಹಾಗೆಯೇ ನಟಿಯೊಬ್ಬಳು ಕುಮಾರ್ ಸಾನು ಜೊತೆ ಸಂಬಂಧದಲ್ಲಿದ್ದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.  
 


ಪ್ರಸಿದ್ಧ ಹಿನ್ನೆಲೆ ಗಾಯಕ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ಕುಮಾರ್ ಸಾನು (playback singer and Filmfare Award winner Kumar Sanu) ಕೂಡ ಪತ್ನಿ ಪೀಡನೆಗೆ ಒಳಗಾದವರು ಅಂದ್ರೆ ನೀವು ನಂಬ್ಲೇಬೇಕು. ಈ ಮಾತನ್ನು ನಾವು ಹೇಳ್ತಿಲ್ಲ. ಕುಮಾರ್ ಸಾನು ಜೊತೆ ಐದು ವರ್ಷಗಳ ಕಾಲ ಸಿಕ್ರೇಟ್ ರಿಲೇಶನ್ಶಿಪ್ (Secret Relationship) ನಲ್ಲಿದ್ದ ನಟಿ ಕುಣಿಕಾ ಸದಾನಂದ್ (actress Kunika Sadanand) ಹೇಳಿದ್ದಾರೆ. ಕುಮಾರ್ ಸಾನು ಮೊದಲ ಪತ್ನಿಯ ಕಾಟಕ್ಕೆ ಬೇಸತ್ತಿದ್ದರು. ಅತಿಯಾಗಿ ಮದ್ಯಪಾನ ಮಾಡಿ, ಕಣ್ಣೀರಿಟ್ಟಿದ್ದ ಅವರು ಹೊಟೇಲ್ ಕಿಟಕಿಯಿಂದ ಹಾರಿ ಜೀವ ತೆಗೆದುಕೊಳ್ಳುವ ಪ್ರಯತ್ನಕ್ಕೆ   ಮುಂದಾಗಿದ್ದರು ಎಂದು ಕುಣಿಕಾ ಸದಾನಂದ್ ಹೇಳಿದ್ದಾರೆ.

ಸಿದ್ಧಾರ್ಥ್ ಕಣ್ಣನ್ ಜೊತೆ ಮಾತುಕತೆ ನಡೆಸಿದ ಕುಣಿಕಾ ಸದಾನಂದ್, ಕುಮಾರ್ ಸಾನು ಜೊತೆ ತಮಗಿದ್ದ ಅಫೇರ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಅವರು, ಕುಮಾರ್ ಸಾನು ಯಾವ ಸಮಯದಲ್ಲಿ ತನ್ನನ್ನು ಭೇಟಿಯಾದ್ರು, ಕುಮಾರ್ ಸಾನುಗೆ ಮನಸೋತಿದ್ದು ಎಲ್ಲಿ, ಕುಮಾರ್ ಸಾನು ಯಾವ ಪರಿಸ್ಥಿತಿಯಲ್ಲಿದ್ದರು ಎಂಬೆಲ್ಲವನ್ನು ಹೇಳಿದ್ದಾರೆ. ಕುಮಾರ್ ಸಾನು ಯಶಸ್ಸಿನ ತುತ್ತ ತುದಿಯಲ್ಲಿರುವ ಸಮಯದಲ್ಲಿ ಕುಣಿಕಾ ಸದಾನಂದ್   ವೃತ್ತಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದರು. ಆಗ್ಲೇ ಇಬ್ಬರು ಹತ್ತಿರ ಬಂದಿದ್ದು ಎಂದು ಕುಣಿಕಾ ಸದಾನಂದ್ ಹೇಳಿದ್ದಾರೆ.

Tap to resize

Latest Videos

ತಾಂಡವ್ ಜೊತೆ ಪೂಜೆಗೆ ಕುಳಿತುಕೊಳ್ತಾಳ ಭಾಗ್ಯ? ಪ್ರಸಾದ ಅಂತ ಶ್ರೇಷ್ಠಾ ಮಾಡಿದ್ದು ಉಪ್ಪಿಟ್ಟು!

ಕುಣಿಕಾ ಮತ್ತು ಕುಮಾರ್ ಸಾನು ಮೊದಲ ಬಾರಿ ಊಟಿಯಲ್ಲಿ ಭೇಟಿಯಾಗಿದ್ದರು. ಕೆಲಸದ ನಿಮಿತ್ತ ಕುಣಿಕಾ ಊಟಿಗೆ ಹೋಗಿದ್ದರು. ಈ ಸಮಯದಲ್ಲಿ ಸಹೋದರಿ ಮತ್ತು ಸೋದರಳಿಯನ ಜೊತೆ ಕುಮಾರ್ ಸಾನು ಊಟಿಗೆ ಬಂದಿದ್ದರು. ಹೊಟೇಲ್ ರೂಮಿನಲ್ಲಿ ಡ್ರಿಂಕ್ ಮಾಡ್ತಾ ಎಲ್ಲರು ಕುಳಿತಿದ್ದರು. ಈ ವೇಳೆ ಪತ್ನಿ ರೀಟಾ ಸಂಬಂಧವನ್ನು ನೆನಪಿಸಿಕೊಂಡು ಅತ್ತಿದ್ದರು. ಖಿನ್ನತೆಗೆ ಒಳಗಾಗಿದ್ದರು. ಕಿಟಕಿಯಿಂದ ಜಿಗಿಯುವ ನಿರ್ಧಾರಕ್ಕೆ ಬಂದಿದ್ದರು ಎಂದು ಕುಣಿಕಾ ಹೇಳಿದ್ದಾರೆ. ಕುಣಿಕಾ ಪ್ರಕಾರ, ಕುಮಾರ್ ಸಾನು ಹಾಗೂ ರೀಟಾ ಸಂಬಂಧ ಚೆನ್ನಾಗಿರಲಿಲ್ಲ. ರೀಟಾ ಜೊತೆ ಕುಮಾರ್ ಸಾನು ಕಷ್ಟದ ಜೀವನವನ್ನು ನಡೆಸಿದ್ದರು. ಊಟಿಯಿಂದ ವಾಪಸ್ ಆಗ್ತಿದ್ದಂತೆ ಅವರು ರೀಟಾರಿಂದ ಬೇರೆಯಾಗಿದ್ದರು. 

ಕುಮಾರ್ ಸಾನು ಹೊಸ ಮನೆ ಕುಣಿಕಾ ಸದಾನಂದ್ ಮನೆ ಬಳಿಯೇ ಇತ್ತು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಐದು ವರ್ಷಗಳ ಕಾಲ ಇಬ್ಬರು ಪ್ರೀತಿಯಲ್ಲಿದ್ದರು. ಆದ್ರೆ ಯಾರಿಗೂ ಅವರ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ಕುಮಾರ್ ಸಾನು ಅವರನ್ನು ನಾನು ಪತಿಯಂತೆ ನೋಡಿದ್ದೆ. ಅವರು ನನ್ನನ್ನು ಪತ್ನಿಯಂತೆ ನೋಡಿದ್ದರು. ಆದ್ರೆ ನಾವು ಮದುವೆ ಆಗಿರಲಿಲ್ಲ ಎಂದು ಕುಣಿಕಾ ಹೇಳಿದ್ದಾರೆ. ಕುಣಿಕಾ ಹಾಗೂ ಸಾನು ವಿಷ್ಯ ರೀಟಾಗೆ ತಿಳಿಯುತ್ತಿದ್ದಂತೆ ಹಾಕಿ ಸ್ಟಿಕ್ ನಿಂದ ಕಾರಿನ ಗ್ಲಾಸ್ ಒಡೆದಿದ್ದರಂತೆ. ಕುಣಿಕಾ ಮನೆ ಮುಂದೆ ಬಂದು ರಂಪ ಮಾಡಿದ್ದರಂತೆ. ಆ ಸಂದರ್ಭವನ್ನು ನೆನೆಪಿಸಿಕೊಳ್ಳುವ ಕುಣಿಕಾ, ರೀಟಾಗೆ ಕುಮಾರ್ ಸಾನು ಬೇಕಾಗಿರಲಿಲ್ಲ. ಮಕ್ಕಳನ್ನು ಸಾಕಲು ಹಣದ ಅವಶ್ಯಕತೆ ಇತ್ತು. ಅದರ ಅರಿವು ನನಗಿತ್ತು. ಎಂದಿಗೂ ಕುಮಾರ್ ಸಾನು ನನಗೆ ಬೇಡ ಎಂದು ರೀಟಾ ಹೇಳಿದ್ದರು. ಈ ಘಟನೆ ಸಮಯದಲ್ಲಿ ರೀಟಾ ಹಾಗೂ ಕುಮಾರ್ ಸಾನು ವಿಚ್ಛೇದನ ಪಡೆದಿದ್ದರು ಎಂದು ಕುಣಿಕಾ ಹೇಳಿದ್ದಾರೆ.

ನನ್ನ ಮಗಳಿಗೆ ನಾನು ನೀಡುವ ದೊಡ್ಡ ಉಡುಗೊರೆ ಅಂದ್ರೆ 'ಪ್ರೈವೈಸಿ' ಎಂದ ನಟ ರಾಮ್ ಚರಣ್:

ಕುಮಾರ್ ಸಾನು ಹಾಗೂ ರೀಟಾ ಮದುವೆ 1980ರಲ್ಲಿ ನಡೆದಿತ್ತು. ಅವರಿಗೆ ಮೂವರು ಮಕ್ಕಳು. 1994ರಲ್ಲಿ ರೀಟಾರಿಂದ ಸಾನು ಅಧಿಕೃತವಾಗಿ ದೂರವಾಗಿದ್ದರು. ಕುಮಾರ್ ಸಾನು ನಿಜವಾದ ಹೆಸರು ಕೇದಾರನಾಥ ಭಟ್ಟಾಚಾರ್ಯ.  ಕುಣಿಕಾ ಸದಾನಂದ್ ನಟಿ ಮಾತ್ರವಲ್ಲ ನಿರ್ಮಾಪಕಿ, ಸಾಮಾಜಿಕ ಕಾರ್ಯಕರ್ತೆ. 
 

click me!