
ಸಮಂತಾ ರುತು ಪ್ರಭು (Samantha Ruth Prabhu) ಹಾಗೂ ನಾಗಚೈತನ್ಯ (Naga chaitanya) ನಡುವಿನ ವಿಚ್ಚೇದನೆ ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸೆಲೆಬ್ರಿಟಿ ಜೋಡಿ ಸಪರೇಟ್ ಆಗುತ್ತಿರುವುದಾಗಿ ಘೋಷಿಸಿದ್ದರು. ಚಾಯ್-ಸ್ಯಾಮ್ ವಿಚ್ಚೇದನೆಯಾಗಿ ತಿಂಗಳು ಕಳೆದರೂ ಈ ಕುರಿತು ಚರ್ಚೆಯಾಗುತ್ತಲೇ ಇದೆ. ಡೈವೋರ್ಸ್ ( Divorce) ಬೇಕೆಂದು ಮೊದಲು ಬಯಸಿದ್ದು ಯಾರು ? ಇಬ್ಬರ ನಡುವೆ ಏನಾಗಿತ್ತು ? ಈ ಮೊದಲೇ ಡೈವೋರ್ಡ್ ನಿರ್ಧಾರ ಮಾಡಿದ್ರಾ ? ಹೀಗೆ ಹಲವಾರು ವಿಚಾರಗಳ ಕುರಿತು ಚರ್ಚೆಗಳು ನಡೀತಿದ್ವು.
ಆದ್ರೆ, ಎರಡೂ ಕುಟುಂಬಗಳೂ ಈ ಜೋಡಿಯನ್ನು ಮತ್ತೆ ಒಂದಾಗಿಸಲು ಪ್ರಯತ್ನ ಮಾಡ್ತಿದ್ವಂತೆ. ಆದ್ರೆ ಇನ್ಮುಂದೆ ಅದೇನೂ ಸಾಧ್ಯ ಇಲ್ಲ ಎಂಬಂತಾಗಿದೆ. ಯಾಕೆಂದರೆ ಸಮಂತಾ ಮದುವೆ ಸೀರೆಯನ್ನು ಅಕ್ಕಿನೇನಿ ಕುಟುಂಬಕ್ಕೆ ವಾಪಾಸ್ ಕೊಡಲು ನಿರ್ಧರಿಸಿದ್ದಾರಂತೆ. ನಾಗಚೈತನ್ಯಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಲು ಸಮಂತಾ ಇಷ್ಟಪಡುತ್ತಿಲ್ಲ ಎಂದು ಸ್ಯಾಮ್ ಸ್ನೇಹಿತರ ಬಳಗ ಹೇಳಿದೆ. ಹೀಗಾಗಿ ಸೆಲೆಬ್ರಿಟಿ ಜೋಡಿ ಮತ್ತೆ ಒಂದಾಗ್ತಾರೆ ಅನ್ನೋ ಅಭಿಮಾನಿಗಳ ನಿರೀಕ್ಷೆ ಮತ್ತೆ ಹುಸಿಯಾಗಿದೆ.
ಯಾರ ಜೊತೆ ಆನ್‌ಸ್ಕ್ರೀನ್ ಲವ್ಲಿ ಕೆಮಿಸ್ಟ್ರಿ ಇದೆ ಎಂದು ರಿವೀಲ್ ಮಾಡಿದ Naga Chaitanya
2017ರಲ್ಲಿ ನಾಗಚೈತನ್ಯ ಸಮಂತಾ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯಲ್ಲಿ ಸಮಂತಾ ಧರಿಸಿದ್ದ ದುಬಾರಿ ಸೀರೆಯ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಸದ್ಯ ಈ ಮದುವೆಯಲ್ಲಿ ಧರಿಸಿದ್ದ ಸೀರೆಯನ್ನು ಸಮಂತಾ ಅಕ್ಕಿನೇನಿ ಕುಟುಂಬಕ್ಕೆ ಹಿಂತಿರುಗಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ವರದಿಗಳ ಪ್ರಕಾರ ಮದುವೆಯಲ್ಲಿ ಸಮಂತಾ ರುತುಪ್ರಭು ಉಟ್ಟ ಸೀರೆ ನಾಗಚೈತನ್ಯ ಅಜ್ಜಿಗೆ ಸೇರಿದ್ದು ಅಂದರೆ ನಾಗಚೈತನ್ಯ ಕುಟುಂಬಕ್ಕೆ ಹಲವಾರು ವರ್ಷಗಳಿಂದ ದೊರಕಿರುವುದಾಗಿದೆ. ಹೀಗಾಗಿ ಇದನ್ನು ಇಟ್ಟುಕೊಳ್ಳಲು ಸಮಂತಾ ಬಯಸಲ್ಲಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ನಾಗಚೈತನ್ಯ ಜೀವನಾಂಶ ಕೊಡಲು ಮುಂದಾದಾಗಲೂ ಸಮಂತಾ ಇದನ್ನು ನಿರಾಕರಿಸಿದ್ದರು.
ಕಳೆದ ಅಕ್ಟೋಬರ್‌ನಲ್ಲಿ ನಾಗಚೈತನ್ಯ ಹಾಗೂ ಸಮಂತಾ ತಾವಿಬ್ಬರು ಡೈವೋರ್ಸ್ ನೀಡುತ್ತಿದ್ದು, ಪರಸ್ಪರ ಬೇರೆಯಾಗುತ್ತಿರುವುದಾಗಿ ಅಧಿಕೃತವಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ನಾಗಚೈತನ್ಯ ‘ಸ್ಯಾಮ್ ಮತ್ತು ನಾನು ಪ್ರತ್ಯೇಕ ಮಾರ್ಗಗಳಲ್ಲಿ ನಡೆಯಲು ನಿರ್ಧರಿಸಿದ್ದೇವೆ. ನಾವು ಒಂದು ದಶಕದ ಸ್ನೇಹವನ್ನು ಹೊಂದಲು ಅದೃಷ್ಟಶಾಲಿಯಾಗಿದ್ದೇವೆ. ಅದು ನಮ್ಮ ಸಂಬಂಧದ ಅತ್ಯಂತ ಸುಂದರ ದಿನಗಳಾಗಿದ್ದು, ನಾವು ಯಾವಾಗಲೂ ನಮ್ಮ ನಡುವಿನ ವಿಶೇಷ ಬಂಧವನ್ನು ಹೊಂದಿರುತ್ತೇವೆ. ಈ ಕಷ್ಟಕರ ಸಮಯದಲ್ಲಿ ನಮ್ಮ ಅಭಿಮಾನಿಗಳು ಮತ್ತು ಮಾಧ್ಯಮಗಳು ನಮ್ಮ ಅಭಿಮಾನಿಗಳು ಮತ್ತು ಮಾಧ್ಯಮಗಳನ್ನು ನಮ್ಮನ್ನು ಬೆಂಬಲಿಸುವಂತೆ ವಿನಂತಿಸುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ್ದರು.
ಇದು ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿತ್ತು. ಇಬ್ಬರೂ ತಾವು ಬೇರೆಯಾಗುತ್ತಿರುವುದಕ್ಕೆ ಕಾರಣವೇನೆಂದು ಹೇಳಿರಲ್ಲಿಲ್ಲ. ಆದರೆ ಪ್ರತ್ಯೇಕವಾದ ನಂತರವೂ ಇಬ್ಬರೂ ಪರಸ್ಪರ ಹೊಗಳಿಕೆಯ ಮಾತುಗಳನ್ನಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದ್ದರು.
ಗಂಡ ಹೆಂಡತಿ ನಡುವೆ ಏನೇ ನಡೆದರೂ ಪರ್ಸನಲ್, ಚೈತನ್ಯಾ ಶಾಂತವಾಗಿದ್ದ: Nagarjuna Akkineni
ನಾಗಚೈತನ್ಯ ತಂದೆ ನಟ ನಾಗಾರ್ಜುನ ಇತ್ತೀಚಿನ ಸಂದರ್ಶನದಲ್ಲಿ, ಸಮಂತಾ ಮೊದಲು ವಿಚ್ಛೇದನವನ್ನು ಬಯಸಿದ್ದರು ಎಂದು ಎಂದು ಬಹಿರಂಗಪಡಿಸಿದ್ದರು. ನಾಗ ಚೈತನ್ಯ ಅವರ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಅವರು ನನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು, ನಾನು ಏನು ಯೋಚಿಸುತ್ತೇನೆ ಮತ್ತು ಕುಟುಂಬದ ಖ್ಯಾತಿಗೆ ಏನಾಗುತ್ತದೆ ಎಂಬುದು ಅವರ ಚಿಂತೆಯಾಗಿತ್ತು ಎಂದು ನಾಗಾರ್ಜುನ ಹೇಳಿದ್ದಾರೆ ಎಂದು ತಿಳಿದುಬಂದಿತ್ತು.
ನಾಗಚೈತನ್ಯ ಚೊಚ್ಚಲ ಬಾಲಿವುಡ್ ಅಭಿನಯದ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಆಗಸ್ಟ್ 11ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಮೀರ್ ಖಾನ್, ಕರೀನಾ ಕಪೂರ್ ಸಹ ನಟಿಸಿದ್ದಾರೆ. ಮತ್ತೊಂದೆಡೆ ಸಮಂತಾ ರುತ್ ಪ್ರಭು ಇತ್ತೀಚೆಗೆ ಪುಷ್ಪಾದಲ್ಲಿ ಐಟಂ ಸಾಂಗ್ ಮಾಡಿದ್ದು ಸೂಪರ್ ಹಿಟ್ ಆಗಿತ್ತು. ಹೈ ಬಜೆಟ್ ‘ಶಾಕುಂತಲಂ’ ಚಿತ್ರದಲ್ಲೂ ಸಮಂತಾ ನಟಿಸುತ್ತಿದ್ದು, ಚಿತ್ರದ ಸ್ಟಿಲ್ ರಿಲೀಸ್ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.