Prithviraj and Prabhas: 'ಸಲಾರ್' ಅಡ್ಡಕ್ಕೆ ಎಂಟ್ರಿ ಕೊಟ್ಟ ಪೃಥ್ವಿರಾಜ್ ಸುಕುಮಾರನ್!

Suvarna News   | Asianet News
Published : Mar 09, 2022, 04:46 PM IST
Prithviraj and Prabhas: 'ಸಲಾರ್' ಅಡ್ಡಕ್ಕೆ ಎಂಟ್ರಿ ಕೊಟ್ಟ ಪೃಥ್ವಿರಾಜ್ ಸುಕುಮಾರನ್!

ಸಾರಾಂಶ

'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು 'ಬಾಹುಬಲಿ' ಪ್ರಭಾಸ್ ಕಾಂಬಿನೇಷನ್‌ನ 'ಸಲಾರ್‌' ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಸದ್ಯ ಈ ಚಿತ್ರಕ್ಕೆ ಮಲಯಾಳಂನ ಖ್ಯಾತ ನಟನ ಆಗಮನವಾಗಿದೆ. 

'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ (Prashanth Neel) ಮತ್ತು 'ಬಾಹುಬಲಿ' ಪ್ರಭಾಸ್ (Prabhas) ಕಾಂಬಿನೇಷನ್‌ನ 'ಸಲಾರ್‌' (Salaar) ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ದೊಡ್ಡ ದೊಡ್ಡ ಸೆಟ್‌ ಹಾಕಿ, ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಆ್ಯಕ್ಷನ್ ಎಂಟರ್‌ಟೈನರ್ ಆಗಿ ತೆರೆಗೆ ಬರಲಿರುವ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಮತ್ತೊಂದು ತಾಜಾ ಸುದ್ದಿ ಇದೀಗ ಸದ್ದು ಮಾಡುತ್ತಿದೆ. 

ಹೌದು! ಈ ಚಿತ್ರದಲ್ಲಿ ಮಲಯಾಳಂ (Malayalam) ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಪ್ರಭಾಸ್ ಇದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಪ್ರಭಾಸ್, 'ಪೃಥ್ವಿರಾಜ್ ಮತ್ತು ನಾನು 'ಸಲಾರ್' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದೇವೆ. ಅವರೊಬ್ಬ ಶ್ರೇಷ್ಠ ನಟ. ಪೃಥ್ವಿರಾಜ್ ಜೊತೆ ನಟಿಸಲು ಅವಕಾಶ ನೀಡಿದ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶಾಂತ್ ನೀಲ್ ಕನ್ನಡದವರು, ಪ್ರಭಾಸ್ ತೆಲುಗು ಹಾಗೂ ಪೃಥ್ವಿರಾಜ್ ಮಲಯಾಳಂನವರು. ಒಟ್ಟಿನಲ್ಲಿ ಈ ಮೂವರು 'ಸಲಾರ್'ನಲ್ಲಿ ಕೆಲಸ ಮಾಡಿದರೆ ಮೂರು ಚಿತ್ರರಂಗಗಳ ಪ್ರೇಕ್ಷಕರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಕೂಡ ಇರಬಹುದು. ಈ ಮಾತನ್ನು ತಳ್ಳಿಹಾಕುವಂತಿಲ್ಲ. 

Radhe Shyam: ರಾಧೇ ಶ್ಯಾಮ್‌ಗಾಗಿ ಸಂಭಾವನೆ ಮೊತ್ತ 100 ಕೋಟಿಯಿಂದ ಇಳಿಸಿಕೊಂಡ ಪ್ರಭಾಸ್!

ವಿಶೇಷವಾಗಿ 'ಕೆಜಿಎಫ್ 2' (KGF 2) ಚಿತ್ರದ ಮಲಯಾಳಂ ಅವತರಣಿಕೆಯ ವಿತರಕರಾಗಿಯೂ ಪೃಥ್ವಿರಾಜ್ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಪೃಥ್ವಿರಾಜ್ ಮಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. 'ಸಲಾರ್‌'ನಲ್ಲಿ ಅವರು ವಿಲನ್ ಪಾತ್ರ ಮಾಡುವ ಸಾಧ್ಯತೆಯೇ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ 'ಸಲಾರ್' ಚಿತ್ರ ತೆರೆ ಕಾಣಲಿದ್ದು, ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ 'ಸಲಾರ್‌'ಗೆ ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಛಾಯಾಗ್ರಹಣವಿದೆ. ರಾಜಮನಾರ್ ಪಾತ್ರವನ್ನು ನಟ ಜಗಪತಿ ಬಾಬು (Jagapati Babu) ಮಾಡುತ್ತಿದ್ದಾರೆ ಎಂದು ಪೋಸ್ಟರ್ ಮೂಲಕ ಪ್ರಶಾಂತ್ ನೀಲ್ ಪರಿಚಯ ಮಾಡಿಕೊಟ್ಟಿದ್ದರು.



'ರಾಜಮನಾರ್' ಪಾತ್ರ ನಿರ್ವಹಿಸುವ ಜಗಪತಿ ಬಾಬು ಚಿತ್ರದಲ್ಲಿ ಖಳನಾಯಕನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರಾ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. 'ಸಲಾರ್‌'ನಲ್ಲಿ ಜಗಪತಿ ಬಾಬು ಲುಕ್ ನೋಡಿದವರಿಗೆ ಮಾತ್ರ 'ಇವರೇ ವಿಲನ್ ಇರಬಹುದಾ' ಎಂಬ ಸಂದೇಹ ಕಾಡಿತ್ತು. ಇನ್ನು 'ಸಲಾರ್' ಚಿತ್ರದಲ್ಲಿ ಸೂಪರ್ ಸ್ಪೆಷಲ್ ಐಟಂ ಸಾಂಗ್‌ವೊಂದು ಇರಲಿದ್ದು, ಬಾಲಿವುಡ್ ಹಾಟ್ ಚೆಲುವೆ ಕತ್ರೀನಾ ಕೈಫ್ (Katrina Kaif) ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಸಿನಿ ಅಂಗಳದಲ್ಲಿ ಓಡಾಡಿತ್ತು. ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ 'ಅಗ್ನೀಪತ್' ಚಿತ್ರದ 'ಚಿಕ್ನಿ ಚಮೇಲಿ' ಹಾಡು ಹಾಗೂ 'ತೀಸ್ ಮಾರ್ ಖಾನ್' ಚಿತ್ರದ 'ಶೀಲಾ ಕಿ ಜವಾನಿ' ಹಾಡುಗಳು ಸೂಪರ್ ಡ್ಯೂಪರ್ ಹಿಟ್ ಆಗಿದ್ದವು. ಹೀಗಾಗಿ ಪ್ರಶಾಂತ್ ನೀಲ್ ಅವರು 'ಸಲಾರ್‌'ಗೆ ಕತ್ರೀನಾ ಕೈಫ್ ಕರೆಸಿ ಡ್ಯಾನ್ಸ್ ಮಾಡಿಸಲಿದ್ದಾರೆ.

Radhe Shyam: ಪ್ರಭಾಸ್​ ಚಿತ್ರದ ಕಥೆ ಹೇಳಲಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ!

ಇನ್ನು ಪ್ರಭಾಸ್, ರಾಧಾಕೃಷ್ಣ ಕುಮಾರ್ (Radha Krishna Kumar)​ ಅವರು ಆಕ್ಷನ್ ಕಟ್ ಹೇಳಿರುವ  'ರಾಧೆ ಶ್ಯಾಮ್​' (Radhe Shyam) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 'ರಾಧೆ ಶ್ಯಾಮ್' ಮಾರ್ಚ್ 11ರಂದು ತೆರೆಕಾಣಲಿದೆ. ರೊಮ್ಯಾಂಟಿಕ್​ ಲವ್​ ಸ್ಟೋರಿ ಹೊಂದಿರುವ ಈ ಸಿನಿಮಾ ಪ್ರಭಾಸ್​ ವೃತ್ತಿಜೀವನದ ಡಿಫರೆಂಟ್ ಚಿತ್ರ ಎನ್ನಲಾಗುತ್ತಿದೆ. ಪ್ರಭಾಸ್​ಗೆ ಜತೆಯಾಗಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಕೃಷ್ಣಂರಾಜು (Krishnam Raju) ಅವರು ಋಷಿ ಪರಮಹಂಸ ಪಾತ್ರದಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!