Baahubali Movie: ಮತ್ತೊಮ್ಮೆ ಮೋಡಿ ಮಾಡ್ತಾರಾ ರಾಜಮೌಳಿ ? ಬಾಹುಬಲಿ-3 ಬಗ್ಗೆ ಪ್ರಭಾಸ್ ಏನ್ ಹೇಳ್ತಾರೆ ?

Suvarna News   | Asianet News
Published : Mar 09, 2022, 04:22 PM ISTUpdated : Mar 09, 2022, 04:32 PM IST
Baahubali Movie: ಮತ್ತೊಮ್ಮೆ ಮೋಡಿ ಮಾಡ್ತಾರಾ ರಾಜಮೌಳಿ  ? ಬಾಹುಬಲಿ-3 ಬಗ್ಗೆ ಪ್ರಭಾಸ್ ಏನ್ ಹೇಳ್ತಾರೆ ?

ಸಾರಾಂಶ

ಭಾರತೀಯ ಸಿನಿಪ್ರಿಯರನ್ನು ಬೆರಗುಗೊಳಿಸಿದ ಚಿತ್ರ ಬಾಹುಬಲಿ (Baahubali). ರಾಜಮೌಳಿ (Rajamouli) ಮಾಡಿದ ಮೋಡಿ, ಪ್ರಭಾಸ್ (Prabhas)-ಅನುಷ್ಕಾ ಶೆಟ್ಟಿ (Anushka Shetty) ಜೋಡಿ ಮಾಡಿದ ಮ್ಯಾಜಿಕ್. ಬಾಹುಬಲಿ-1, 2 ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತ್ತು. ಹೀಗಿದ್ದಾಗ ಪಾರ್ಟ್-3 ಬಂದ್ರೆ ಹೇಗಿರುತ್ತೆ ?

ಬಾಹುಬಲಿ (Baahubali). ಭಾರತೀಯ ಸಿನಿಮಾ ರಂಗದಲ್ಲೊಂದು ಅತ್ಯಪರೂಪದ ಅತ್ಯದ್ಭುತ ದೃಶ್ಯ ಕಾವ್ಯ. ವಿಭಿನ್ನ ಕಥಾಹಂದರ, ಪಾತ್ರಗಳು, ಸೆಟ್, ಸಾಂಗ್, ಮ್ಯೂಸಿಕ್, ಫೈಟ್, ಮುಕ್ತಾಯವನ್ನು ಹೊಂದಿರುವ ಸಿನಿಮಾ. ರಾಜಮೌಳಿ (Rajamouli) ನಿರ್ದೇಶನದ ಪ್ರಭಾಸ್ (Prabhas), ಅನುಷ್ಕಾ ಶೆಟ್ಟಿ(Anushka Shetty), ತಮನ್ನಾ ಭಾಟಿಯಾ ಅಭಿನಯದ ಚಿತ್ರ ಇಂಡಿಯನ್ ಬಾಕ್ಸಾಫೀಸ್‌ನ್ನು ಅಕ್ಷರಶಃ ಕೊಳ್ಳೆ ಹೊಡೆದಿತ್ತು.

ಬಾಹುಬಲಿ-1 ರಿಲೀಸ್ ಆಗಿ ಜನರಲ್ಲಿ ಕ್ರೇಜ್ ಹುಟ್ಟು ಹಾಕಿದ ಬೆನ್ನಲ್ಲೇ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಟ್ರೆಂಡಿಂಗ್ ಆಗಿತ್ತು. ಹೀಗಾಗಿಯೇ ಇದರ ಬಾಹುಬಲಿ-2 ಚಿತ್ರಕ್ಕಾಗಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಬಾಹುಬಲಿ-1ನಂತೆಯೇ ಬಾಹುಬಲಿ-2 ಸಹ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿತ್ತು. ಕೋಟಿಗಟ್ಟಲೆ ಕಲೆಕ್ಷನ್ ಬಾಚಿತ್ತು. ಬಾಹುಬಲಿ ಚಿತ್ರ ರಿಲೀಸ್ ಆಗಿ ವರ್ಷಗಳೇ ಕಳೆದರೂ ಚಿತ್ರದ ಕುರಿತಾದ ಕ್ರೇಜ್ ಮಾತ್ರ ಹಾಗೆಯೇ ಇದೆ. ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾ.

6 ಸಾವಿರ ಮದುವೆ ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಬಾಹುಬಲಿ ನಟ!

ಸದ್ಯ ಹೊಸ ವಿಚಾರ ಏನಪ್ಪಾ ಅಂದ್ರೆ ಬಾಹುಬಲಿ-3 ಚಿತ್ರ ನಿರ್ಮಾಣವಾಗುತ್ತೋ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಏಷಿಯಾನೆಟ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಎಸ್‌.ಎಸ್ ರಾಜಮೌಳಿ ಅವರ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರ ಬಾಹುಬಲಿ ಚಿತ್ರದ ಇನ್ನೊಂದು ಕಂತು ಬರುತ್ತದೆಯೇ ಎಂಬುದರ ಕುರಿತು ಪ್ರಭಾಸ್ ಮಾತನಾಡಿದ್ದಾರೆ.  ‘ಬಾಹುಬಲಿ-೩ ಬರುವುದಾದರೆ ಅದು ಯಾವಾಗ ಬರುತ್ತದೆ, ಹೇಗೆ ಬರುತ್ತದೆ, ಯಾವ ರೀತಿಯಲ್ಲಿ ಬರುತ್ತದೆ ಎಂಬುದನ್ನು ರಾಜಮೌಳಿ ನಿರ್ಧರಿಸಲಿದ್ದಾರೆ. ಯಾಕೆಂದರೆ ಬಾಹುಬಲಿ ಎಂಬ ಅದ್ಭುತವನ್ನು ಸೃಷ್ಟಿಸಿದವರು ರಾಜಮೌಳಿಯವರು’ ಎಂದರು.

ಇಂಟರ್‌ವ್ಯೂ ನೋಡಲು ಇಲ್ಲಿ ಕ್ಲಿಕ್ಕಿಸಿ:

ಬಾಹುಬಲಿ ಒಟಿಟಿ ಬಿಡುಗಡೆಯ ಬಗ್ಗೆ ಪ್ರಭಾಸ್ ಮಾತನಾಡಿದ್ದಾರೆ. ‘ಬಾಹುಬಲಿ-3, ಬಾಹುಬಲಿ-4 ಯಾವುದು ಬೇಕಾದರೂ ಬರಬಹುದು. ಅದನ್ನು ವಿಭಿನ್ನ ರೀತಿಯಲ್ಲಿ ಸಹ ಮಾಡಬಹುದು. ಅದು ಯಾವ ರೀತಿ ಬರಬೇಕೆಂದು ರಾಜಮೌಳಿಯವರು ನಿರ್ಧರಿಸುತ್ತಾರೆ’ ಎಂದು ಹೇಳಿದರು. ‘ಬಾಹುಬಲಿಯನ್ನು ಒಟಿಟಿ ರಿಲೀಸ್ ಮಾಡಲು ಯೋಜಿಸುತ್ತಿದ್ದಾರೆ. ಬಾಹುಬಲಿ ಇಲ್ಲಿ ಅಥವಾ ಅಲ್ಲಿ ಎಲ್ಲಾದರೂ ಇರುತ್ತದೆ’ ಎಂದು ಪ್ರಭಾಸ್ ಹೇಳಿದ್ದಾರೆ. ಪ್ರಭಾಸ್ ಇಲ್ಲಿ ಎಂದು ಒಟಿಟಿಯನ್ನು ಹೇಳಿದ್ದು ಅಲ್ಲಿ ಎಂದು ಥಿಯೇಟರ್ ಬಗ್ಗೆ ಹೇಳಿದ್ದಾರಾ ? ಬಾಹುಬಲಿ-3 ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಾ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.  

Radhe Shyam Review Out: ಪ್ರಭಾಸ್, ಪೂಜಾ ಹೆಗ್ಡೆ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ

ಇತ್ತೀಚೆಗೆ, ನೆಟ್‌ಫ್ಲಿಕ್ಸ್ ಬಾಹುಬಲಿ ಒಟಿಟಿ ವೆಬ್ ಸರಣಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಬಿಟ್ಟಿದೆ ಎಂದು ವರದಿಯಾಗಿತ್ತು. ಇದು ಭಾರಿ ಬಜೆಟ್‌ನಲ್ಲಿ ತಯಾರಿಸಲ್ಪಟ್ಟಿದೆ ಎಂದು ಸಹ ವರದಿಯಾಗಿತ್ತು. ಬಾಹುಬಲಿ ಎಂಬ ಹೊಸ ಕಂತನ್ನು ನಿರ್ಮಿಸಲು ತಯಾರಕರು ಯೋಜಿಸಿದ್ದಾರೆ. ಇದು ಬಾಹುಬಲಿ ತಾಯಿ ಶಿವಗಾಮಿಯ ಉದಯವನ್ನು ಎತ್ತಿ ತೋರಿಸುತ್ತದೆ ಎಂದು ಸಹ ಹೇಳಲಾಗಿತ್ತು.

ಸದ್ಯ ಪ್ರಭಾಸ್ ಬಗ್ಗೆ ಹೇಳುವುದಾದರೆ, ನಟ ಪ್ರಸ್ತುತ ಬಹುನಿರೀಕ್ಷಿತ ಚಿತ್ರ 'ರಾಧೆ ಶ್ಯಾಮ್' ಬಿಡುಗಡೆಗೆ ಸಜ್ಜಾಗಿದ್ದಾರೆ. ಪೂಜಾ ಹೆಗ್ಡೆ ನಟಿಸಿರುವ ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಚಿತ್ರವು ಮಾರ್ಚ್ 11ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಅದೇನೆ ಇರ್ಲಿ, ಬಾಹುಬಲಿ-3 ಬರುತ್ತೆ ಅಂದ್ರೆ ಭಾರತೀಯ ಸಿನಿಪ್ರಿಯರು ಇನ್ನೊಂದು ಬ್ಲಾಕ್‌ಬಸ್ಟರ್ ಸಿನಿಮಾವನ್ನು ಸ್ವಾಗತಿಸಲು ಸಜ್ಜಾಗಬಹುದು. ರಾಜಮೌಳಿ ಮಾಯಾಜಾಲ ಇನ್ಯಾವ ರೀತಿಯಲ್ಲಿ ಮೋಡಿ ಮಾಡುತ್ತೆ ಕಾದು ನೋಡ್ಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?