ಸಮಂತಾ ರುಥ್ ಪ್ರಭು(Samantha Ruth Prabhu) ಕೆರಿಯರ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಬಾಲಿವುಡ್‌ಗೂ(Bollywood) ಹೆಜ್ಜೆ ಇಟ್ಟಿರುವ ಸಮಂತಾ ಈಗ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ಹರಿಸಿದ್ದಾರೆ. ಸೌತ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಸಮಂತಾ ಆಗಾಗ ತಮ್ಮ ಜಿಮ್ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿ ಫಾಲೋವರ್ಸ್‌ಗೆ ಫಿಟ್ನೆಸ್ ಗೋಲ್ಸ್(Fitness Goals) ನೀಡುತ್ತಾರೆ. ಫೊಟೋಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿರೋ ಸಮಂತಾ ನಾನು ತಿನ್ನೋದಕ್ಕಾಗಿ ವರ್ಕೌಟ್ ಮಾಡುತ್ತೀನಿ ಎಂದಿದ್ದಾರೆ. ನಂತರದ ಫೋಟೋದಲ್ಲಿ ಸಮಂತಾ ತಮ್ಮ ನೆಚ್ಚಿನ ಸಮೋಸದತ್ತ ನೋಡಿ ನಗುತ್ತಿರುವುದನ್ನು ಕಾಣಬಹುದು.
ಸಮಂತಾ ರುಥ್ ಪ್ರಭು ಕೆರಿಯರ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಬಾಲಿವುಡ್‌ಗೂ ಹೆಜ್ಜೆ ಇಟ್ಟಿರುವ ಸಮಂತಾ ಈಗ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ಹರಿಸಿದ್ದಾರೆ. ಸೌತ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಸಮಂತಾ ಆಗಾಗ ತಮ್ಮ ಜಿಮ್ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿ ಫಾಲೋವರ್ಸ್‌ಗೆ ಫಿಟ್ನೆಸ್ ಗೋಲ್ಸ್ ನೀಡುತ್ತಾರೆ. ಫೊಟೋಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿರೋ ಸಮಂತಾ ನಾನು ತಿನ್ನೋದಕ್ಕಾಗಿ ವರ್ಕೌಟ್ ಮಾಡುತ್ತೀನಿ ಎಂದಿದ್ದಾರೆ. ನಂತರದ ಫೋಟೋದಲ್ಲಿ ಸಮಂತಾ ತಮ್ಮ ನೆಚ್ಚಿನ ಸಮೋಸದತ್ತ ನೋಡಿ ನಗುತ್ತಿರುವುದನ್ನು ಕಾಣಬಹುದು.
undefined
ಕಳೆದ ಕೆಲವು ದಿನಗಳನ್ನು ಗೋವಾದಲ್ಲಿ ಕಳೆದ ನಟಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಜಿಮ್ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ವೈಟ್ ಎತ್ತುವುದನ್ನು ಕಾಣಬಹುದು. ವರ್ಕೌಟ್ ಟು ಈಟ್ ಎಂದು ಸಮಂತಾ ಇದಕ್ಕೆ ಕ್ಯಾಪ್ಶನ್ ಕೊಟ್ಟಿದ್ದಾರೆ. ನಂತರದ ಫೋಟೋದಲ್ಲಿ ಸಮೋಸ ಪ್ಲೇಟ್ ನೋಡೋ ಸಮಂತಾರಲ್ಲಿ ಒಬ್ಬ ಫೂಡಿಯನ್ನು ನಾವು ನೋಡಬಹುದು.
ಇತ್ತೀಚೆಗೆ ಪುಷ್ಪಾ ಸಿನಿಮಾದ ಸಕ್ಸಸ್ ಪಾರ್ಟಿ(Pushpa Success Party) ನಡೆದಿದ್ದು ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ವಿಶೇಷವಾಗಿ ಥ್ಯಾಂಕ್ಸ್ ಹೇಳುತ್ತಾ ಹೋದ ಅಲ್ಲು ಅರ್ಜುನ್(Allu Arjun) ಸಮಂತಾಗೂ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ. ಹಾಗೆಯೇ ಸಿನಿಮಾಗೆ ಸಂಬಂಧಿಸಿ ಮಾತನಾಡುತ್ತಾ ಅಲ್ಲು ಅರ್ಜುನ್ ಭಾವುಕರಾದ ಘಟನೆಯೂ ನಡೆದಿತ್ತು. ಸಿನಿಮಾ ನೋಡಿದ ಸಿನಿಪ್ರಿಯರು ಅಲ್ಲು ಅರ್ಜುನ್ ಹೊಸ ಸ್ಟೈಲ್‌ಗೆ ಫಿದಾ ಆಗಿದ್ದು ಸಮಂತಾ ಅವರನ್ನು ಹೊಸ ಲುಕ್‌ನಲ್ಲಿ ನೋಡಿ ಥ್ರಿಲ್ ಆಗಿದ್ದಾರೆ.
ಸಮಂತಾ ರುಥ್ ಪ್ರಭು ಬೆಳ್ಳಿ ತೆರೆಯ ಮೇಲೆ ಮ್ಯಾಜಿಕ್ ಮಾಡಿದ್ದು ಪುಷ್ಪಾದಲ್ಲಿ ಸಮಂತಾರ ಐಟಂ ಸಾಂಗ್ ಹೊಸ ರೆಕಾರ್ಡ್ ಮಾಡಿದೆ. ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ಸಮಂತಾ ಅವರ ಐಟಂ ಸಾಂಗ್ ಪುಷ್ಪಾ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಪಾರ್ಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ನಟಿಯ ಈ ಸಡನ್ ಬೋಲ್ಡ್ ಅವತಾರಕ್ಕೆ ಸಿನಿಪ್ರಿಯರು ಶಾಕ್ ಆಗಿದ್ದೂ ನಿಜ. ಆದರೆ ನಂತರ ಸಮಂತಾ ತಮ್ಮ ಸಾಂಗ್‌ಗೆ ಸಿಗುವ ಪ್ರತಿಕ್ರಿಯೆ ಬಗ್ಗೆ ತಾವು ಸಂಪೂರ್ಣ ತೃಪ್ತರಾಗಿರುವುದಾಗಿ ಹೇಳಿದ್ದಾರೆ. ಇದೀಗ ನಟ ಅಲ್ಲು ಅರ್ಜುನ್ ಪುಷ್ಪಾ ಸಕ್ಸಸ್ ಪಾರ್ಟಿಯಲ್ಲಿ ಐಟಂ ಸಾಂಗ್‌ಗೆ ಸಮಂತಾ ಕೊಟ್ಟ ಬೆಂಬಲಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಐಟಂ ಸಾಂಗ್ ಶೂಟಿಂಗ್ ಸಂದರ್ಭ ನಟಿ ಕೊಟ್ಟ ಬೆಂಬಲವನ್ನು ಅಲ್ಲು ಅರ್ಜುನ್ ಹೊಗಳಿದ್ದಾರೆ.
ಸಾಂಗ್ ಬಗ್ಗೆ ಮಾತನಾಡಿದ್ದ ಸಮಂತಾ
ನಟಿ ಸಮಂತಾ ರುತ್ ಪ್ರಭು ಅವರು ತಮ್ಮ 'ಊ ಅಂತಾವಾ' ಹಾಡಿನ ಸ್ಟಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೆಕ್ಸಿಯಾಗಿರುವುದು ಕಠಿಣ ಕೆಲಸದ ಮುಂದಿನ ಹಂತದ ಎಂದು ನಟಿ ಬರೆದುಕೊಂಡಿದ್ದಾರೆ. ಐಟಂ ಸಾಂಗ್ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪ: ದಿ ರೈಸ್' ನಿಂದ ಹಿಟ್ ಆಗಿದೆ. ಈ ಹಿಂದೆ ಪುರುಷರ ಸಂಘವು ಪುರುಷರನ್ನು ಕಾಮಪ್ರಚೋದಕ ಎಂದು ಆರೋಪಿಸಿ ಹಾಡಿನ ಮೇಲೆ ನಿಷೇಧಕ್ಕೆ ಒತ್ತಾಯಿಸಿದ್ದವು. ಆದರೆ ಎಲ್ಲ ಅಡೆತಡೆಗಳನ್ನು ಮೀರಿ ಸಾಂಗ್ ಹಿಟ್ ಆಗಿದೆ.