
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ನಟನೆಯ ಬಜರಂಗಿ ಭಾಯಿಜಾನ್(Bajrangi Bhaijaan) ಸಿನಿಮಾವನ್ನು ಮರೆಯಲು ಸಾಧ್ಯನಾ?. ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದರು. 2015ರಲ್ಲಿ ಬಂದ ಈ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿತ್ತು. ಭಾವನಾತ್ಮಕ ಕಥಾಹಂದರ ಹೊಂದಿದ್ದ ಈ ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಇದೀಗ ಚಿತ್ರದ ಸಿಕ್ವೆಲ್ ಬರುತ್ತೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ಸಿಕ್ವೆಲ್ ಗೆ ಎಲ್ಲಾ ತಯಾರಿ ನಡೆಯುತ್ತಿದ್ದು, ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿಯುಳಿದಿದೆ.
ಬಜರಂಗಿ ಭಾಯಿಜಾನ್ ಸಿಕ್ವೆಲ್ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು, ಸಲ್ಮಾನ್ ಖಾನ್ ಸದ್ಯ ತನ್ನ ಬಳಿ ಇರುವ ಪ್ರಾಜೆಕ್ಟ್ ಮುಗಿಸಿ ಸೂಪರ್ ಹಿಟ್ ಸಿನಿಮಾದ ಸಿಕ್ವೆಲ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಬಜರಂಗಿ ಭಾಯಿಜಾನ್ ಚಿತ್ರಕ್ಕೆ ತೆಲುಗಿನ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಮಾಡಿದ್ದರು. ಕಬೀರ್ ಖಾನ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿತ್ತು. ಇದೀಗ ಮತ್ತದೆ ಕಾಂಬಿನೇಷನ್ ನಲ್ಲಿ ಪಾರ್ಟ್-2 ಬರಲಿದೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿದೆ.
ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಪಿಂಕ್ವಿಲ್ಲ ವೆಬ್ ಪೋರ್ಟಲ್ ಜೊತೆ ಮತನಾಡಿ, 'ಶೀಘ್ರದಲ್ಲೇ ಸ್ಕ್ರಿಪ್ಟ್ ಕೆಲಸ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ ಎಂದು ವರದಿ ಮಾಡಿದೆ. ನಾನು ಸ್ವಲ್ಪ ಸಮಯದ ಹಿಂದೆ ಸಲ್ಮಾನ್ ಖಾನ್ ಜೊತೆ ಕತೆಯ ಪ್ಲಾನ್ ಹೇಳಿದ್ದೆ. ಅದನ್ನು ತುಂಬಾ ಇಷ್ಟಪಟ್ಟಿದ್ದರು. ನಾನು ಮೇ ತಿಂಗಳ ಹೊತ್ತಿಗೆ ಸ್ಕ್ರಿಪ್ಟ್ ಬರೆಯಲು ಪ್ರಾರಂಭಿಸುತ್ತೇನೆ' ಎಂದಿದ್ದಾರೆ.
ಚಿರಂಜೀವಿ 'ಗಾಡ್ ಫಾದರ್' ಚಿತ್ರೀಕರಣ ಮುಗಿಸಿದ ಸಲ್ಮಾನ್ ಖಾನ್; ಧನ್ಯವಾದ ತಿಳಿಸಿದ ನಿರ್ದೇಶಕ
ಅಂದಹಾಗೆ ಇದು ಮೊದಲ ಭಾಗದ ಮುಂದುವರೆದ ಭಾಗನಾ ಅಥವಾ ಸಂಪೂರ್ಣ ಹೊಸ ಕಥೆನಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಪ್ರಸಾದ್ ಇದು ಮೊದಲ ಭಾಗದ ಮುಂದುವರಿಕೆ ಎಂದು ಹೇಳಿದ್ದಾರೆ. ಇನ್ನು ನಿರ್ದೇಶಕ ಕಬೀರ್ ಖಾನ್ ಸಹ ಸಲ್ಮಾನ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಈ ಮೊದಲು ಸಂದರ್ಶನವೊಂದರಲ್ಲಿ ಮತ್ತೆ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ ಸಿಕ್ವೆಲ್ ಗೂ ಕಬೀರ್ ಖಾನ್ ಅವರೇ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.
ಇನ್ನು ಮೊದಲ ಭಾಗದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದ ಮುನ್ನಿ, ಪಾರ್ಟ್-2ನಲ್ಲೂ ಇರ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ನಟಿ ಹರ್ಷಾಲಿ ಮಲ್ಹೋತ್ರಾ ಮುನ್ನಿ ಪಾತ್ರದಲ್ಲಿ ನಟಿಸಿದ್ದರು. ಪಾಕಿಸ್ತಾನದ ಪುಟ್ಟ ಬಾಲಕಿ ಮುನ್ನಿ ಭಾರತದಲ್ಲಿ ಕಳೆದುಹೋಗುತ್ತಾಳೆ. ಮುನ್ನಿಯನ್ನು ಸಲ್ಮಾನ್ ಖಾನ್ ವಾಪಾಸ್ ಅವಳ ತಾಯ್ನಾಡಿಗೆ ಸೇರಿಸುವ ಕಥೆ ಇದಾಗಿತ್ತು. ಹರ್ಷಾಲಿ ಸಿನಿಮಾದಲ್ಲಿ ಮೂಕ ಮುನ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು.
ಪತ್ರಕರ್ತನಿಗೆ ಬೆದರಿಕೆ; ನಟ ಸಲ್ಮಾನ್ ಖಾನ್ ಗೆ ಸಮನ್ಸ್ ಜಾರಿಮಾಡಿದ ಕೋರ್ಟ್
ಇದೀಗ ಪಾರ್ಟ್-2 ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಷಾಲಿ, 'ನಾನು ಸೂಪರ್ ಡೂಪರ್ ಎಕ್ಸೈಟ್ ಆಗಿದ್ದೇನೆ. ಸಲ್ಮಾನ್ ಖಾನ್ ಅಂಕಲ್ ಅವರಿಂದ ಕರೆ ಬರುತ್ತೆ, ಚಿತ್ರಕ್ಕೆ ತಯಾರಿ ನಡೆಸಬೇಕು ಎಂದು ಹೇಳುತ್ತಾರೆ ಅಂತ ಕಾಯುತ್ತಿದ್ದೀನಿ. ಈಗಾಗಲೇ ಅನೇಕರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾ ಪ್ರಾರಂಭಿಸಲು ನಾನು ಕಾಯುತ್ತಿದ್ದೇನೆ. ನನ್ನ ಪಾತ್ರವಿದೆ ಎಂದು ಭಾವಿಸುತ್ತೇನೆ' ಎಂದು ಹರ್ಷಾಲಿ ಹಿಂದೂಸ್ತಾನ್ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇಂಟ್ರಸ್ಟಿಂಗ್ ಎಂದರೆ ಸದ್ಯಕ್ಕೆ ಪಾರ್ಟ್-2ಗೆ ಪವನ ಪುತ್ರ ಭಾಯಿಜಾನ್ ಎಂದು ಹೆಸರಿಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಇದು ತಾತ್ಕಾಲಿಕ ಹೆಸರು ಆಗಿರಲಿದೆಯಾ ಅಥವಾ ಇದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರಲಿದೆಯಾ ಎಂದು ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.