ಕನ್ನಡ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಅವರಿಗೆ ಇಂದು (ಮಾರ್ಚ್ 29) ಹುಟ್ಟುಹಬ್ಬದ ಸಂಭ್ರಮ. ರಂಜನಿ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಕಿರುತೆರೆ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಬರುತ್ತಿದೆ. ಅಭಿಮಾನಿಗಳು ನೆಚ್ಚಿನ ನಾಯಕಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್(Ranjani Raghavan) ಅವರಿಗೆ ಇಂದು (ಮಾರ್ಚ್ 29) ಹುಟ್ಟುಹಬ್ಬದ(Birthday) ಸಂಭ್ರಮ. ರಂಜನಿ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಕಿರುತೆರೆ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಬರುತ್ತಿದೆ. ನಟಿ ರಂಜನಿ ಎನ್ನುವುದಕ್ಕಿಂತ ಭುವಿ ಎಂದೇ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ. ಪುಟ್ಟಗೌರಿ(puttagowri) ಎಂದೇ ಗುರುತಿಸಿಕೊಳ್ಳುತ್ತಿದ್ದ ರಂಜಿನಿ ಇದೀಗ ಭುವಿಯಾಗಿ ಫೇಮಸ್ ಆಗಿದ್ದಾರೆ ಎಂದರೆ ಅವರ ನಿರ್ವಹಿಸುತ್ತಿರುವ ಪಾತ್ರ ಕಂಡ ಯಶಸ್ಸು ಎಂದು ಹೇಳಿದರೆ ತಪ್ಪಾಗಲ್ಲ.
ಕನ್ನಡ ಕಿರುತೆಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ(Kannadati) ಧಾರಾವಾಹಿಯಲ್ಲಿ ರಂಜನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಭುವಿ(ಭುವನೇಶ್ವರಿ) ಎನ್ನುವ ಪಾತ್ರಕ್ಕೆ ಜೀವ ತುಂಬುತ್ತಿದ್ದು, ಈ ಪಾತ್ರ ಪ್ರೇಕ್ಷಕರ ಮನಗೆದ್ದಿದೆ. ನಾಯಕನಾಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಹರ್ಷ ಎನ್ನುವ ಪಾತ್ರಕ್ಕೆ ಕಿರಣ್ ರಾಜ್ ಬಣ್ಣ ಹಚ್ಚಿದ್ದಾರೆ. ಹರ್ಷ-ಭುವಿ ಪಾತ್ರಗಳು ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಕಂಡಿವೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಂಜನಿ ಅವರಿಗೆ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ವಿಶೇಷ ಶುಭಾಶಯ ಬಂದಿದೆ. ಪ್ರಮುಖ ಧಾರಾವಾಹಿ ನಟಿಯರು ರಂಜನಿ ವಿಶ್ ಮಾಡಿರುವ ಶುಭಾಶಯಗಳ ಸಾಲುಗಳನ್ನು ಪುಸ್ತಕ ರೂಪದಲ್ಲಿ ಮಾಡಿ ರಂಜನಿ ಅವರಿಗೆ ವಿಶ್ ಮಾಡಿದ್ದಾರೆ. ಈ ವಿಡಿಯೋ ನೋಡಿ ರಂಜನಿ ಫುಲ್ ಖುಷ್ ಆಗಿದ್ದಾರೆ.
Kannadathi Serial: ಕನ್ನಡತಿಯ ಟೀಚರ್ ರಂಜನಿಯ ಡಿಫರೆಂಟ್ ಸೀರೆ ಲುಕ್ಸ್ ಇವು
ಇನ್ನು ವಿಶೇಷ ಎಂದರೆ ರಂಜನಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಹುಟ್ಟುಹಬ್ಬದ ದಿನ ರಂಜನಿ ಅವರಿಗೆ ಸಾಕಷ್ಟು ಗಿಫ್ಟ್ ಗಳು ಸಹ ಸಿಕ್ಕಿದೆ. ತನಗೆ ಬಂದಿರುವ ಗಿಫ್ಟ್ ಗಳನ್ನು ರಂಜನಿ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಬಂದಿರುವ ರಂಜನಿ ಅಭಿಮಾನಿಗಳಿಂದ ಬಂದ ಸುಂದರ ಉಡುಗೊರೆಗಳನ್ನು ಹಂಚಿಕೊಂಡಿದ್ದಾರೆ. ಸೀರೆ, ಪುಸ್ತಕ ಸೇರಿದಂತೆ ಅನೇಕ ಉಡುಗೊರೆಗಳು ಅಭಿಮಾನಿಗಳಿಂದ ಸಿಕ್ಕಿವೆ. ಅಭಿಮಾನಿಗಳ ಅಪಾರ ಪ್ರೀತಿಗೆ ರಂಜನಿ ರಾಘವನ್ ಧನ್ಯವಾದ ತಿಳಿಸಿದ್ದಾರೆ.
ಇನ್ನು ರಂಜನಿ ಅವರ ಬಣ್ಣದ ಲೋಕದ ಪಯಣದ ಬಗ್ಗೆ ಹೇಳುವುದಾದರೆ ಕಿರುತೆರೆಯಿಂದ ಪ್ರಾರಂಭ ಮಾಡಿದರು. ಕೆಳದಿ ಚೆನ್ನಮ್ಮ ಎನ್ನುವ ಪೌರಾಣಿಕ ಧಾರಾವಾಹಿಯಿಂದ ತನ್ನ ವೃತ್ತಿ ಬದುಕನ್ನು ಪ್ರಾರಂಭ ಮಾಡಿದರು. ಆ ಧಾರಾವಾಹಿಯಲ್ಲಿ ರಂಜನಿ ನಾಗವೇಣಿ ಎನ್ನವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕಾಶ ದೀಪ ಧಾರಾವಾಹಿಯಲ್ಲಿ ನಾಯಕನ ತಂಗಿ ಪಾತ್ರದಲ್ಲಿ ಮಿಂಚಿದ್ದರು. ಬಳಿಕ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಆಯ್ಕೆಯಾದರು. ಈ ಧಾರಾವಾಹಿ ರಂಜನಿ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತು.
ಈ ಧಾರಾವಾಹಿ ಬಳಿಕ ರಂಜನಿ ಇಸ್ಟದೇವತೆ ಎನ್ನುವ ಧಾರಾವಾಹಿಯಲ್ಲಿ ರಂಜನಿ ಕ್ರಿಯೇಟಿವ್ ನಿರ್ದೇಶಕಿಯಾಗಿ ಕೆಲಸ ಮಾಡಿದರು. ಜೊತೆಗೆ ಮಲಯಾಳಂ ಧಾರಾವಾಹಿಯಲ್ಲೂ ಮಿಂಚಿದರು. ಇಸ್ಟದೇವತೆ ಮುಗಿಯುತ್ತಿದ್ದಂತೆ ರಂಜನಿ ಕನ್ನಡತಿ ಧಾರಾವಾಹಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದರು. ಸರಳ ಅಭಿನಯ, ಸಂಪ್ರದಾಯಸ್ತ ಕುಟುಂಬದ ಹೆಣ್ಣುಮಗಳಾಗಿ ಬಣ್ಣ ಹಚ್ಚಿರುವ ರಂಜನಿಗೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಇದ್ದಕ್ಕಿದ್ದಂತೆ ಕನ್ನಡತಿಯಲ್ಲಿ ಭುವಿ ಕಣ್ಮರೆಯಾಗಿದ್ದಕ್ಕೆ ಸಿಕ್ತು ಕಾರಣ!
ಅಂದಹಾಗೆ ಕಿರುತೆರೆ ಮಾತ್ರವಲ್ಲದೆ ಬೆಳ್ಳಿ ಪರದೆಮೇಲೆ ಮಿಂಚಿದ್ದಾರೆ. ಆದರೆ ಕಿರುತೆರೆ ತಂದುಕೊಟ್ಟ ಯಶಸ್ಸು ಸಿನಿಮಾ ತಂದುಕೊಟ್ಟಿಲ್ಲ. ರಾಜಹಂಸ ಸಿನಿಮಾ ಮೂಲಕ ರಂಜನಿ ಸಿನಿಮಾರಂಗಕ್ಕೆ ಕಾಲಿಟ್ಟರು. ಬಳಿಕ ಟಕ್ಕರ್, ಸತ್ಯಮ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ರಂಜನಿ ಕ್ಷಮಿಸಿ ನಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮತ್ತು ಐಂದ್ರಿತಾ ರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮತ್ತೊಂದು ಹೊಸ ಸಿನಿಮಾ ರಂಜನಿ ಲಿಸ್ಟ್ ಗೆ ಸೇರಿದೆ.