Latest Videos

ಜೀವ ಬೆದರಿಕೆ: ಗನ್‌ ಲೈಸೆನ್ಸ್‌ಗೆ ಸಲ್ಮಾನ್‌ ಖಾನ್‌ ಅರ್ಜಿ

By Vaishnavi ChandrashekarFirst Published Jul 23, 2022, 11:33 AM IST
Highlights

ಮುಂಬೈ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಲ್ಮಾನ್ ಖಾನ್. ಜೀವನ ಕಾಪಾಡಿಕೊಳ್ಳಲು ಗನ್ ಬೇಕೇ ಬೇಕು ಎಂದ ನಟ.

ಒಂದೆರಡು ಸಿನಿಮಾಗಳಲ್ಲಿ ನಟಿಸಿ ಸೆಲೆಬ್ರಿಟಿ ಪಟ್ಟ ಪಡೆದುಕೊಂಡರೆ ಸಾಕು ಅವರ ಮೇಲೆ ಸಾವಿರಾರೂ ಜನರ ಕಣ್ಣಿರುತ್ತದೆ ಇನ್ನು 200 ಸಿನಿಮಾಗಳು 100 ಜಾಹೀತಾರುಗಳು ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರ ಮೇಲೆ ಎಷ್ಟು ಕಣ್ಣಿರುತ್ತದೆ ಹೇಳಿ? ಹೌದು! ಬಾಲಿವುಡ್ ಬ್ಯಾಡ್ ಬಾಯ್‌ ಸಲ್ಮಾನ್ ಖಾನ್‌ ಕೋಟ್ಯಾಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ ಆದರೆ ಸಲ್ಲು ಮೇಲೆ ಅನೇಕರಿಗೆ ಅಸಮಾಧಾನವಿದೆ, ದ್ವೇಷವಿದೆ ಅದಕ್ಕೆ ಕಾರಣವೇ ಸಲ್ಲು ಪೋಷಕರಿಗೆ ಬರುತ್ತಿರುವ ಜೀವ ಬೆದರಿಕೆ ಕರೆಗಳು. 

ಇತ್ತೀಚೆಗೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಹಂತಕರಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಗನ್‌ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ‘ಕಳೆದ ತಿಂಗಳು ಸಲ್ಮಾನ್‌ ಖಾನ್‌ ಮತ್ತು ಅವರ ತಂದೆಗೆ ಜೀವ ಬೆದರಿಕೆ ಪತ್ರಗಳನ್ನು ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮ ರಕ್ಷಣೆಗಾಗಿ ಸಲ್ಮಾನ್‌ ಖಾನ್‌ ಅವರು ಗನ್‌ ಪರವಾನಗಿ ಕೇಳಿದ್ದಾರೆ. ಇದಕ್ಕಾಗಿ ಶುಕ್ರವಾರ ಮಧ್ಯಾಹ್ನ ಮುಂಬೈ ಪೊಲೀಸ್‌ ಆಯುಕ್ತ ವಿವೇಕ್‌ ಪನ್ಸಾಲ್ಕರ್‌ ಅವರನ್ನು ಭೇಟಿ ಮಾಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆಯ ಬಳಿಕ ಸಲ್ಮಾನ್‌ ಖಾನ್‌, ಅವರ ತಂದೆ ಹಾಗೂ ವಕೀಲರಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ಜೀವ ಬೆದರಿಕೆ:

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ ಎಂದು ಪೋಲಿಸ್‌ರು ಬಹಿರಂಗಪಡಿದಿದ್ದಾರೆ, ಆದರೆ ಅವರೇ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ ಅವರ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದರು.

ಪ್ರೀತಿಯೂ ಸಿಗಲಿಲ್ಲ, ಮದುವೆಯೂ ಉಳಿಯಲಿಲ್ಲ 63 ವರ್ಷವಾದರೂ ಒಂಟಿಯಾಗಿದ್ದಾರೆ ಸಲ್ಮಾನ್‌ ಮಾಜಿ ಗೆಳತಿ

ಆದರೆ ಕೃಷ್ಣ ಮೃಗ  ತನ್ನ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ (ಜಂಬಾಜಿ) ಅವರ ಪುನರ್ಜನ್ಮ ಎಂದು ಅವರ ಸಮಾಜವು ಪರಿಗಣಿಸುತ್ತದೆ. ಹಾಗಾಗಿ ಸಲ್ಮಾನ್ ಬೇಟೆಯ ಘಟನೆಯಿಂದ ಅವರಿಗೆ ತೀವ್ರ ನೋವಾಗಿದೆ  ಎಂದು ಬಿಷ್ಣೋಯ್ ಹೇಳಿದರು.

ನೂಪುರ್‌ ಶರ್ಮ ತಲೆ ಕತ್ತರಿಸುವ ಹೇಳಿಕೆ ನೀಡಿದ್ದ ಸಲ್ಮಾನ್‌ ಚಿಸ್ತಿ ಬಂಧನ!

ಕಳೆದ ತಿಂಗಳ 5 ರಂದು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಬೆಳಿಗ್ಗೆ ವಾಕಿಂಗ್ ಮುಗಿಸಿ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನ ಬೆಂಚ್ ಮೇಲೆ ಕುಳಿತಿದ್ದಾಗ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಕೆಲವು ದಿನಗಳ ಹಿಂದೆ ಗುಂಡಿಕ್ಕಿ ಕೊಂದ ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರಂತೆ ನಡೆಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

click me!