ವಿಚ್ಛೇದನ ಬಳಿಕ ಜೀವನ ಬದಲಾಗಿದೆ, ಹೊಸ ವ್ಯಕ್ತಿಯಾಗಿದ್ದೀನಿ; ನಾಗಚೈತನ್ಯ

Published : Jul 22, 2022, 05:58 PM IST
ವಿಚ್ಛೇದನ ಬಳಿಕ ಜೀವನ ಬದಲಾಗಿದೆ, ಹೊಸ ವ್ಯಕ್ತಿಯಾಗಿದ್ದೀನಿ; ನಾಗಚೈತನ್ಯ

ಸಾರಾಂಶ

ನಾಗಚೈತನ್ಯ ಸದ್ಯ ಥ್ಯಾಂಕ್ ಯು ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನಾಗ್ ವಿಚ್ಛೇದನದ ಬಳಿಕ ಜೀವನ ಹೇಗೆ ಬದಲಾಗಿದೆ ಎಂದು ವಿವರಿಸಿದ್ದಾರೆ. 

ತೆಲುಗಿನ ಸ್ಟಾರ್ ಕಪಲ್ ಸಮಂತಾ ಮತ್ತು ನಾಗಚೈತನ್ಯಾ ದೂರ ದೂರ ಆಗಿ ಅನೇಕ ತಿಂಗಳುಗಳೇ ಕಳೆದಿವೆ. ಸ್ಯಾಮ್ ಮತ್ತು ಚೈ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಮದುವೆಯಾಗಿ ಮೂರು ವರ್ಷಗಳ ಕಾಲ ಜೊತೆಯಲ್ಲಿದ್ದ ಈ ಜೋಡಿ ದೂರ ದೂರ ಆಗುವ ಮೂಲಕ ಅಚ್ಚರಿಕರ ನಿರ್ಧಾರ ತೆಗೆದುಕೊಂಡರು. ಅಕ್ಟೋಬರ್ 2, 2021ರಲ್ಲಿ ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಸಮಂತಾ ಮತ್ತು ನಾಗಚೈತನ್ಯ ಅವರ ಈ ನಿರ್ಧಾರ ಸಂಚಲನ ಸೃಷ್ಟಿಮಾಡಿತ್ತು. ಇಬ್ಬರು ಬೇರೆ ಬೇರೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿ ಸೈಲೆಂಟ್ ಆದರು. ಆದರೆ ಬಳಿಕ ಸಮಂತಾ ಹಿಗ್ಗಾಮುಗ್ಗಾ ಟ್ರೋಲ್ ಆದರು. ಆದರೂ ಸ್ಯಾಮ್ ವಿಚ್ಧೇದನದ ಬಗ್ಗೆ ಎಲ್ಲೂ ಮೌನ ಮುರಿದಿಲ್ಲ. ಇತ್ತೀಚಿಗಷ್ಟೆ ಕರಣ್ ಜೋಹರ್ ಶೋನಲ್ಲಿ ಈ ಬಗ್ಗೆ ಮಾತನಾಡಿದ್ದರು. ವಿಚ್ಛೇದನದ ಬಳಿಕ ತುಂಬಾ ಕಷ್ಟವಾಗಿತ್ತು. ಆದರೀಗ ಆರಾಮಾಗಿ ಇದ್ದೀನಿ, ಮೊದಲಿಗಿಂತ ಉತ್ತಮವಾಗಿದ್ದೀನಿ. ಮತ್ತಷ್ಟು ಬಲಿಷ್ಟ ಆಗಿದ್ದೀನಿ ಎಂದು ಹೇಳಿದ್ದರು. 

ಸಮಂತಾ ಈ ಬಗ್ಗೆ ಮಾತನಾಡಿದ ಬೆನ್ನಲ್ಲೇ ಇದೀಗ ನಾಗಚೈತನ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾಗಚೈತನ್ಯ ಸದ್ಯ ಥ್ಯಾಂಕ್ ಯು ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನಾಗ್ ವಿಚ್ಛೇದನದ ಬಳಿಕ ಜೀವನ ಹೇಗೆ ಬದಲಾಗಿದೆ ಎಂದು ವಿವರಿಸಿದ್ದಾರೆ. ಪ್ರಚಾರ ವೇಳೆ ಮಾತನಾಡಿದ ನಾಗ ಚೈತನ್ಯ, 

ಕೊರೊನಾ ಸಮಯ ಮತ್ತು ಪತ್ನಿಯೊಂದಿಗಿನ ವಿಚ್ಛೇದನವು ಅವರ ಜೀವನದ ಕಠಿಣ ಹಂತವಾಗಿತ್ತು ಎಂಬುದನ್ನು ವಿವರಿಸಿದರು. ವಿಚ್ಥೇದನ ಬಳಿಕ ಒಬ್ಬ ವ್ಯಕ್ತಿಯಾಗಿ ತಾನು ಸಾಕಷ್ಟು ಬದಲಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಅವರ ಪ್ರಕಾರ, ಮೊದಲು ಅವರು ಹೆಚ್ಚು ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ಈಗ ಹಾಗಿಲ್ಲವಂತೆ.  ಚೈತನ್ಯ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹೆಚ್ಚು ಹತ್ತಿರವಾಗಿದ್ದಾರೆ ಎಂದು ಹೇಳಿದರು. ಸಂಪೂರ್ಣವಾಗಿ ಹೊಸ ವ್ಯಕ್ತಿಯಾಗಿ ನನ್ನನ್ನು ನೋಡಿಕೊಳ್ಳಲು ಸಂತೋಷವಾಗುತ್ತದೆ ಎಂದು ಅವರು ಹೇಳಿದರು.

ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು

ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಅದ್ದೂರಾಯಾಗಿ ಮದುವೆಯಾದರು. ಮದುವೆಗೂ ಮೊದಲು ಮೂರು ವರ್ಷಗಳ ಕಾಲ ನಾಗಚೈತನ್ಯ ಮತ್ತು ಸ್ಯಾಮ್ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಡೇಟಿಂಗ್ ಬಳಿಕ ಮದುವೆಯಾಗಲು ನಿರ್ಧರಿಸಿದರು. ಗೋವಾದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ದೂರ ದೂರ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಎಳ್ಳುನೀರುಬಿಟ್ಟರು. 

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಹಬ್ಬಿಸಿದವರಿಗೆ ಶೋಭಿತಾ ಹೀಗ್ ಹೇಳೋದಾ.!

ಸದ್ಯ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಪ್ಯಾನ್ ಇಂಡಿಯಾ ಸ್ಟಾರ್ ಮೆರೆಯುತ್ತಿದ್ದಾರೆ. ನಾಗಚೈತನ್ಯ ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಥ್ಯಾಂಕ್ ಯು ಸಿನಿಮಾ ಜೊತೆಗೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ನಾಗಚೈತನ್ಯ ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ.     
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?