ಟೈಗರ್ V/S ಪಠಾಣ್ : ಬಾಲಿವುಡ್​ನಲ್ಲಿ ಖಾನ್​ದ್ವಯರಿಂದ ಇನ್ನೊಂದು ಇತಿಹಾಸ ಸೃಷ್ಟಿ?

Published : Sep 18, 2023, 06:31 PM IST
ಟೈಗರ್ V/S ಪಠಾಣ್ : ಬಾಲಿವುಡ್​ನಲ್ಲಿ ಖಾನ್​ದ್ವಯರಿಂದ ಇನ್ನೊಂದು ಇತಿಹಾಸ ಸೃಷ್ಟಿ?

ಸಾರಾಂಶ

ಶಾರುಖ್ ಖಾನ್​  ಮತ್ತು ಸಲ್ಮಾನ್​ ಖಾನ್​ ಅಭಿನಯದ ಟೈಗರ್ V/S ಪಠಾಣ್ ಚಿತ್ರ ಬರುವ ಮಾರ್ಚ್​ನಲ್ಲಿ ತೆರೆ ಕಾಣುವ ನಿರೀಕ್ಷೆ ಇದ್ದು, ಇಬ್ಬರೂ ಇದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.   

 

ಶಾರುಖ್ ಖಾನ್ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಶಾರುಖ್ ಅವರ ಇತ್ತೀಚಿನ ಚಿತ್ರ ಜವಾನ್ ವಿಶ್ವಾದ್ಯಂತ ಸುಮಾರು 700 ಕೋಟಿ ಗಳಿಸಿದೆ. ಈಗ ಯಶ್​ ರಾಜ್​ ಫಿಲ್ಮ್​ನ (YRF) ಪತ್ತೇದಾರಿ ವಿಶ್ವದಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಪರಸ್ಪರ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಅಣಿಯಾಗಿದ್ದಾರೆ.  ಅಂದರೆ ಟೈಗರ್ ವರ್ಸಸ್ ಪಠಾಣ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಬರಲು ಸಜ್ಜಾಗಿದ್ದಾರೆ. ಏತನ್ಮಧ್ಯೆ, ಈ ಇಬ್ಬರು ತಾರೆಯರ ಮುಂಬರುವ ಚಿತ್ರ 'ಟೈಗರ್ ವರ್ಸಸ್ ಪಠಾಣ್' ಚಿತ್ರದ ಸ್ಕ್ರಿಪ್ಟ್ ಮತ್ತು ಶೂಟಿಂಗ್‌ಗೆ ಸಂಬಂಧಿಸಿದ ದೊಡ್ಡ ಅಪ್‌ಡೇಟ್ ಈಗ ಹೊರಬಿದ್ದಿದೆ. ಪಿಂಕ್ವಿಲ್ಲಾ ವರದಿಯ ಪ್ರಕಾರ, ಆದಿತ್ಯ ಚೋಪ್ರಾ ಅವರು ಶಾರುಖ್ ಖಾನ್ ಮತ್ತು ಸಲ್ಮಾನ್‌ಗೆ ಪ್ರತ್ಯೇಕ ಮೀಟಿಂಗ್​ ನಡೆಸಿ  ವಿಭಿನ್ನ ಸ್ಕ್ರಿಪ್ಟ್‌ಗಳನ್ನು ವಿವರಿಸಿದ್ದಾರೆ. ಟೈಗರ್ ವರ್ಸಸ್ ಪಠಾಣ್ ಇಬ್ಬರು ಸೂಪರ್ ಸ್ಪೈಸ್ ಕಥೆ ಎಂದು ಹೇಳಲಾಗಿದೆ. ಇದು ಟೈಗರ್ ಮತ್ತು ಪಠಾಣ್ ಚಿತ್ರಕ್ಕೆ ಬಹುಕಾಲ ಮನ್ನಣೆ ನೀಡಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಮತ್ತು ಶಾರುಖ್ ಇಬ್ಬರೂ ಮುಖಾಮುಖಿಯಾಗಲು ಉತ್ಸುಕರಾಗಿದ್ದಾರೆ.

ಜವಾನ್​ ಪಾರ್ಟ್​-2 ಬರುತ್ತಾ? ಯಾವಾಗ? ಫ್ಯಾನ್ಸ್​ಗೆ ಗುಡ್​​ ನ್ಯೂಸ್​​ ನೀಡಿದ ನಿರ್ದೇಶಕ ಅಟ್ಲಿ

ಈ ವರ್ಷ ದೀಪಾವಳಿಯಲ್ಲಿ ಟೈಗರ್ 3 ಬಿಡುಗಡೆಯಾದ ನಂತರ ಟೈಗರ್ ವರ್ಸಸ್ ಪಠಾಣ್ ತಂಡವು ನವೆಂಬರ್‌ನಿಂದ 'ಟೈಗರ್ ವರ್ಸಸ್ ಪಠಾಣ್' ನಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ವರದಿಗಳು ಹೇಳಿವೆ. ಮಾರ್ಚ್ 2024 ರಲ್ಲಿ ಅದನ್ನು ಬಿಡುಗಡೆಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇನ್ನು 5 ತಿಂಗಳೊಳಗೆ ಚಿತ್ರ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ. ಟೈಗರ್ ವರ್ಸಸ್ ಪಠಾಣ್ ಚಿತ್ರವನ್ನು ಪಠಾಣ್ ಮತ್ತು ವಾರ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಸ್ತುತ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಗಣರಾಜ್ಯೋತ್ಸವದಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

 ಅಂದಹಾಗೆ ಇದಾಗಲೇ ಶಾರುಖ್​ ಖಾನ್​ ಮತ್ತು  ಸಲ್ಮಾನ್ ಖಾನ್  ಇಬ್ಬರೂ ಆ್ಯಕ್ಷನ್ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.  ಇವರ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಇಬ್ಬರೂ ಪ್ರತ್ಯೇಕವಾಗಿ ಹಲವಾರು ಹಿಟ್​, ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿದ್ದಾರೆ.  

ವಿಜಯ್​ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್​ ಖಾನ್​: ಟೈಮ್​ ಕೂಡ ಫಿಕ್ಸ್​!

ಈಗ ಇವರಿಬ್ಬರೂ ಒಂದಾಗುತ್ತಿರುವುದು ಫ್ಯಾನ್ಸ್​ಗೆ ಖುಷಿ ತಂದಿದೆ.  ‘ಟೈಗರ್ Vs ಪಠಾಣ್’ ಚಿತ್ರದಲ್ಲಿ ನಟಿಸೋಕೆ ಈ ಜೋಡಿ ಕೂಡ ಇದಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು, ಫ್ಯಾನ್ಸ್​ ಚಿತ್ರ ನೋಡಲು ಕಾತರರಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್​ ಈಗಾಗಲೇ ಸಿನಿಮಾ ಯೂನಿವರ್ಸ್ ಸಿದ್ಧಪಡಿಸಿದೆ. ಅದರ ಅಡಿಯಲ್ಲಿ ಈ ಸಿನಿಮಾ ಮೂಡಿ ಬರಲಿವೆ. ‘ಟೈಗರ್’ ಸಿನಿಮಾ ಸರಣಿಯಲ್ಲಿ ಸಲ್ಮಾನ್ ಖಾನ್ ನಿರ್ವಹಿಸಿದ ‘ಟೈಗರ್’ ಪಾತ್ರ ಹಾಗೂ ‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ ನಿರ್ವಹಿಸಿದ ಪಠಾಣ್ ಪಾತ್ರ ಹೊಸ ಚಿತ್ರದಲ್ಲಿ ಒಂದಾಗಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?