ಸಲ್ಮಾನ್ ಖರೀದಿಸಬೇಕಿದ್ದ ಮನ್ನತ್ ಬಂಗಲೆ ಶಾರುಖ್ ಪಾಲಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ಬಹಿರಂಗ

By Shruiti G Krishna  |  First Published Aug 5, 2022, 1:46 PM IST

ಶಾರುಖ್ ಖಾನ್ ಅವರ ಮನ್ನತ್ ಬಂಗಲೆ ಮೊದಲು ಸಲ್ಮಾನ್ ಖಾನ್ ಖರೀದಿಸ ಬೇಕಿತ್ತು ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮನ್ನತ್ ಬಂಗಲೆ ಮೊದಲು ಸಲ್ಮಾನ್ ಖಾನ್ ಕುಟುಂಬದವರಿಗೆ ಖರೀದಿಸಲು ಆಫರ್ ಬಂದಿದ್ದಂತೆ. ಆದರೆ ಖರೀದಿಸಿಲ್ಲ ಎಂದು ಹೇಳಿದ್ದಾರೆ.  


ಬಾಲಿವುಡ್ ಖಾನ್‌ಗಳು ಸದಾ ಸುದ್ದಿಯಲ್ಲಿರುತ್ತಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸಲ್ಮಾನ್ ಖಾನ್ ಸದ್ಯ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಸಲ್ಮಾನ್ ಮಿಂಚಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಸಲ್ಮಾನ್ ಖಾನ್, ಶರುಖ್ ಜೊತೆ ನಟಿಸುವುದು ಸಹೋದರರ ಅನುಭವ ಎಂದಿದ್ದರು.ಇನ್ನು ಸಲ್ಮಾನ್ ಖಾನ್ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಶಾರುಖ್ ಖಾನ್ ಅವರ ಮನ್ನತ್ ಬಂಗಲೆ ಮೊದಲು ಸಲ್ಮಾನ್ ಖಾನ್ ಖರೀದಿಸ ಬೇಕಿತ್ತು ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 

ಶಾರುಖ್ ಖಾನ್ ಅಷ್ಟೆ ಶಾರುಖ್ ಅವರ ಮನ್ನತ್ ಬಂಗಲೆ ಫೇಮಸ್. ಶಾರುಖ್ ಖಾನ್ ಕುಟುಂಬ ಮನ್ನತ್ ನಿವಾಸದಲ್ಲಿ ವಾಸವಾಗಿದೆ. ಈ ಮನೆಯ ಬಗ್ಗೆ ವಿಶೇಷ ಮಾಹಿತಿಯನ್ನು ಸಲ್ಮಾನ್ ಖಾನ್ ಬಹಿರಂಗ ಪಡಿಸಿದರು.ಶಾರುಖ್ ಖಾನ್ ಹೊಂದಿದ್ದ ಒಂದು ವಸ್ತುವಿನ ಬಗ್ಗೆ ಸಲ್ಮಾನ್ ಅವರನ್ನು ಪತ್ರಕರ್ತ ಫರಿದೂನ್ ಕೇಳಿದಾಗ ಸಲ್ಮಾನ್ ಖಾನ್, 'ಅವರ ಮನ್ನತ್ ಬಂಗಲೆ ನನಗೆ ಮೊದಲು ಬಂದಿತು,  ಆದರೆ ನನ್ನ ತಂದೆ (ಚಲನಚಿತ್ರ ನಿರ್ಮಾಪಕ ಮತ್ತು ಸ್ಕ್ರಿಪ್ಟ್ ಬರಹಗಾರ ಸಲೀಂ ಖಾನ್) ಅಷ್ಟು ದೊಡ್ಡ ಮನೆಯಲ್ಲಿ ಏನು ಮಾಡುತ್ತೀರಿ ಎಂದು ಹೇಳಿ ಬೇಡ ಎಂದು ನಿರಾಕರಿಸಿದರು' ಎಂದು ಬಹಿರಂಗ ಪಡಿಸಿದರು., 

Tap to resize

Latest Videos

ಶಾರುಖ್ ಖಾನ್ ಅವರ ಮನ್ನತ್ ನಿವಾಸ ಮುಂಬೈನ ಬಾಂದ್ರಾದಲ್ಲಿದೆ. ಬಂಗಲೆಗೆ ಶಾರುಖ್ ಖಾನ್ ಪತ್ನಿ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಮತ್ತು ಅವರ ಮೂವರು ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ವಾಸವಾಗಿದ್ದಾರೆ. ಆರು ಅಂತಸ್ತಿನ ಈ ಮಹಲನ್ನು ಗೌರಿ ವಿನ್ಯಾಸಗೊಳಿಸಿದ್ದಾರೆ ಮತ್ತು ಇದು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ಮನೆಗಳಲ್ಲಿ ಒಂದಾಗಿದೆ. ಈ ಮನೆ ಐಷಾರಾಮಿ ಸೌಕರ್ಯಗಳನ್ನು ಮತ್ತು ಕಲಾ ಸಂಗ್ರಹಣೆಗಳನ್ನು ಒಳಗೊಂಡಿದೆ. ಅಂದಾಜಿನ ಪ್ರಕಾರ ಈ  ಮನೆ 200 ಕೋಟಿ ರೂ ಮೌಲ್ಯದ್ದಾಗಿದೆ ಎನ್ನಲಾಗಿದೆ.

ಜೀವ ಬೆದರಿಕೆ; ಸ್ವಯಂ ರಕ್ಷಣೆಗೆ ಸಲ್ಮಾನ್ ಖಾನ್‌ಗೆ ಸಿಕ್ತು ಗನ್ ಲೈಸೆನ್ಸ್

ಸಲ್ಮಾನ್ ಖಾನ್ ತಂದೆ ಒಂದುವೇಳೆ ಮನ್ನತ್ ಬಂಗಲೆಯನ್ನು ಒಪ್ಪಕೊಂಡಿದ್ದರೆ ಇಂದು ಆ ಬಂಗಲೆ ಸಲ್ಮಾನ್ ಅವರದಾಗಿರುತ್ತಿತ್ತು. ಆದರೀಗ ಶಾರುಖ್ ಖಾನ್ ಅವರ ಬಂಗಲೆಯಾಗಿದೆ. ಅಂದಹಾಗೆ ಶಾರುಖ್ ಮತ್ತು ಸಲ್ಮಾನ್ ಇಂದು ಅನ್ಯೂನ್ಯವಾಗಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. 2008ರಲ್ಲಿ ನಟಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರುಖ್ ಮತ್ತು ಸಲ್ಮಾನ್ ನಡುವೆ ಕಿತ್ತಾಟವಾಗಿದ್ದು ಬಳಿಕ ಇಬ್ಬರ ಸಂಬಂಧ ಹಳಸಿತ್ತು ಎನ್ನುವ ಮಾತು ಕೇಳಿಬಂದಿತ್ತು.ಆದರೀಗ ಮತ್ತೆ ಒಂದಾಗಿದ್ದಾರೆ, ಸಹೋದರರ ಹಾಗೆ ಇದ್ದಾರೆ.  

ರಾ.. ರಾ.. ರಕ್ಕಮ್ಮ.. ಹಾಡಿಗೆ ಸಲ್ಮಾನ್ ಸಖತ್ ಸ್ಟೆಪ್; ವಿಕ್ರಾಂತ್ ರೋಣ ಈವೆಂಟ್‌ನಲ್ಲಿ ಬಾಲಿವುಡ್ ಸ್ಟಾರ್

 ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್  1995ರಲ್ಲಿ ಬಂದ ಕರಣ್ ಅರ್ಜುನ್‌ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಸಲ್ಮಾನ್ ಖಾನ್, ಶಾರುಖ್ ಅವರ ಪಠಾಣ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಖಾನ್ ಸ್ಟಾರ್ ಇಬ್ಬರು ಆದಿತ್ಯ ಚೋಪ್ರಾ ಅವರು ನಿರ್ಮಾಣದ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. 

click me!