'ನನ್ನನ್ನು ಮದ್ವೆ ಆಗ್ತೀರಾ' ಎಂದ ಪತ್ರಕರ್ತೆಗೆ ಸಲ್ಮಾನ್ ಖಾನ್ ಕೊಟ್ಟ ಉತ್ತರ ಹೀಗಿತ್ತು: ವಿಡಿಯೋ ವೈರಲ್

Published : May 27, 2023, 01:54 PM IST
'ನನ್ನನ್ನು ಮದ್ವೆ ಆಗ್ತೀರಾ' ಎಂದ ಪತ್ರಕರ್ತೆಗೆ ಸಲ್ಮಾನ್ ಖಾನ್ ಕೊಟ್ಟ ಉತ್ತರ ಹೀಗಿತ್ತು: ವಿಡಿಯೋ ವೈರಲ್

ಸಾರಾಂಶ

'ನನ್ನನ್ನು ಮದ್ವೆ ಆಗ್ತೀರಾ' ಎಂದು ಹಾಲಿವುಡ್ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಸಲ್ಮಾನ್ ಖಾನ್ ಕೊಟ್ಟ ಉತ್ತರ ವೈರಲ್ ಆಗಿದೆ. 

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ ಐಫಾ 2023 ಅವಾರ್ಡ್ ಸಮಾರಂಭದಲ್ಲಿದ್ದಾರೆ. ಸಲ್ಮಾನ್ ಖಾನ್ ಎಲ್ಲೇ ಹೋದರೂ ಮದುವೆ ವಿಚಾರ ಚರ್ಚೆಯಾಗುತ್ತದೆ. ಮದುವೆಯ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಐಫಾ ಸಮಾರಂಭದಲ್ಲೂ ಸಲ್ಮಾನ್ ಮದ್ವೆ ವಿಚಾರ ಸದ್ದು ಮಾಡಿದೆ. ಸಲ್ಮಾನ್ ಖಾನ್ ಮದುವೆ ಯಾವಾಗಾ? ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಮದ್ವೆ ಯಾವಾಗ ಎನ್ನುವ ಪ್ರಶ್ನೆ ಬದಲಿಗೆ ಬಹಿರಂಗವಾಗಿಯೇ ಪ್ರಪೋಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ಬಾರಿಯ IIFA ಸಮಾರಂಭ ಅಬುಧಾಬಿಯಲ್ಲಿ ನಡೆಯುತ್ತಿದೆ. ಭಾರತದ ಅನೇಕ ಕಲಾವಿದರು ಐಫಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಸುದ್ದಿಗಾರರ ಜೊತೆಗಿನ ಸಂವಾದದಲ್ಲಿ ನಟ ಸಲ್ಮಾನ್ ಖಾನ್ ಅವವರಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಪತ್ರಕರ್ತೆಯೊಬ್ಬರು, 'ನಾನು ಹಾಲಿವುಡ್‌ನಿಂದ ಈ ಪ್ರಶ್ನೆ ಕೇಳಲು ಬಂದಿದ್ದೀನಿ, ನಾನು ನಿಮ್ಮನ್ನು ನೋಡಿದಾಗಿನಿಂದ ನಿಮ್ಮ ಮೇಲೆ ಪ್ರೀತಿಯಾಗಿದೆ. ನೀವು ನನ್ನನ್ನು ಮದುವೆಯಾಗ್ತೀರಾ?' ಎಂದು ಪ್ರಶ್ನೆ ಮಾಡಿದರು. 

ಪತ್ರಕರ್ತೆಯ ಪ್ರಶ್ನೆಗೆ ಬೆಚ್ಚಿದ ಸಲ್ಮಾನ್ ಖಾನ್ ಬಳಿಕ ಉತ್ತಮ ನೀಡಿದರು. 'ನನ್ನ ಮದುವೆಯ ದಿನಗಳು ಮುಗಿದಿವೆ. ನೀವು ನನ್ನನ್ನು 20 ವರ್ಷಗಳ ಹಿಂದೆಯೇ ಭೇಟಿಯಾಗಬೇಕಿತ್ತು' ಎಂದು ಹೇಳಿದ್ದಾರೆ.  ಸಲ್ಮಾನ್ ಖಾನ್ ಅವರ ಉತ್ತರ ಅಭಿಮಾನಿಗಳ ಹೃದಯ ಗೆದ್ದಿವೆ. ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅದ್ಭುತವಾದ ಪ್ರತಿಕ್ರಿಯೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ಸಲ್ಮಾನ್ ಖಾನ್‌ಗೆ ಶೇಕ್‌ಹ್ಯಾಂಡ್ ಮಾಡಲು ಹೋದ ವಿಕ್ಕಿ ಕೌಶಲ್‌ನ ನೂಕಿದ ಬಾಡಿಗಾರ್ಡ್: ಅಭಿಮಾನಿಗಳ ಆಕ್ರೋಶ

ವಿಕ್ಕಿ ಕೌಶಲ್ ಜೊತೆಗಿನ ವಿವಾದ 

ಐಫಾ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಎಂಟ್ರಿ ಕೊಡುತ್ತಿರುವಾಗ ಮಾತನಾಡಿಸಲು ಬಂದ ವಿಕ್ಕಿ ಕೌಶಲ್ ಅವರನ್ನು ಬಾಡಿಗಾರ್ಡ್ಸ್ ತಳ್ಳಿದ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ವಿಡಿಯೋ ವೈರಲ್ ಆದ ಬಳಿಕ ವಿಕ್ಕಿ ಕೌಶಲ್ ಪ್ರತಿಕ್ರಿಯೆ ಕೂಡ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.  

ಸಲ್ಮಾನ್ ಖಾನ್ ಎಂಟ್ರಿ ಕೊಡುತ್ತಿರುವಾ ವಿಕ್ಕಿ ಕೌಶಲ್ ಅಲ್ಲಿದ್ದವರಿಗೆ ಸೆಲ್ಫಿ ನೀಡುತ್ತಿರುತ್ತಾರೆ. ಸಲ್ಮಾನ್ ಖಾನ್ ಜೊತೆ ದೊಡ್ಡ ಗುಂಪೇ ಬರುತ್ತೆ. ಅಲ್ಲೇ ಇದ್ದ ವಿಕ್ಕಿ ಕೌಶಲ್ ಪಕ್ಕಕ್ಕೆ ಸರಿಯುತ್ತಾರೆ. ಬಳಿಕ ಸಲ್ಮಾನ್ ಖಾನ್ ಅವರನ್ನು ಮಾತನಾಡಿಸಲು ಮುಂದಾಗುತ್ತಾರೆ. ಅಷ್ಟೊತ್ತಿಗೆ ಸಲ್ಮಾನ್ ಬಾಡಿಗಾರ್ಡ್ ವಿಕ್ಕಿ ಕೌಶಲ್ ಅವರನ್ನು ಪಕ್ಕಕ್ಕೆ ಸರಿಸಿ ಸಲ್ಮಾನ್ ಖಾನ್‌ಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೊಸ ಬ್ಯುಸಿನೆಸ್‌ ಆರಂಭಿಸಿದ ಸಲ್ಮಾನ್ ಖಾನ್: 19 ಅಂತಸ್ತಿನ ಹೋಟೆಲ್ ನಿರ್ಮಾಣ

ವಿಕ್ಕಿ ಕೌಶಲ್ ಪ್ರತಿಕ್ರಿಯೆ 

ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ವಿಕ್ಕಿ,  'ಅನೇರ ಬಾರಿ ಕೆಲವು ವಿಷಯಗಳ ಬಗ್ಗೆ ಅನಾವಶ್ಯಕ ಚರ್ಚೆಯಾಗುತ್ತದೆ. ಅದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲಾ ವಿಷಯಗಳು ವಿಡಿಯೋದಲ್ಲಿ ತೋರಿಸಿದ ಹಾಗೆ ಇರುವುದಿಲ್ಲ. ಆ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಹೇಳಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ