
ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಸದ್ಯ ಪ್ರತಿಷ್ಠಿತ ಕಾನ್ ಫಿಲ್ಮ್‌ಫೆಸ್ಟಿವಲ್‌ನಲ್ಲಿದ್ದಾರೆ. ಅನುಷ್ಕಾ ಶರ್ಮಾ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅನುಷ್ಕಾ ಶರ್ಮಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ನಡುವೆ ಅನುಷ್ಕಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಬಾಲಿವುಡ್ ಸುಂದರಿ ನಟನೆಗೆ ಗುಡ್ ಬೈ ಹೇಳ್ತಾರಾ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಅನುಷ್ಕಾ ಮಾತುಗಳು. ಸದ್ಯ ಸಿನಿಮಾಗಳಿಂದ ದೂರ ಇರುವ ಅನುಷ್ಕಾ ಮತ್ತೆ ನಟನೆ ಕಡೆ ಮುಖ ಮಾಡುವುದು ಅನುಮಾನ ಎನ್ನಲಾಗಿದೆ.
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಇಬ್ಬರೂ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಅನುಷ್ಕಾ ಸದ್ಯ ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ಅನುಷ್ಕಾ ಮಗಳಿಗೆ ಜನ್ಮ ನೀಡಿದರು. ಮದುವೆ, ಮಗು ಆದ ಬಳಿಕ ಅನುಷ್ಕಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಮೊದಲ ಬಾರಿಗೆ ಅನುಷ್ಕಾ ತನ್ನ ಮುಂದಿನ ಸಿನಿಮಾ ಜೀವನದ ಬಗ್ಗೆ ಮಾತನಾಡಿದ್ದಾರೆ. ತಾನು ತಾಯಿ ಆದ ಬಳಿಕ ತನ್ನ ಆದ್ಯತೆಗಳು ಬದಲಾಗಿವೆ ಎಂದು ಹೇಳಿದರು.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ ನಟಿ ಅನುಷ್ಕಾ ಶರ್ಮಾ, 'ನಾನು ನಟನೆಯನ್ನು ಆನಂದಿಸುತ್ತೇನೆ. ಆದರೆ ಹೆಚ್ಚು ಸಿನಿಮಾಗಳನ್ನು ಮಾಡಲು ಬಯಸಲ್ಲ. ವರ್ಷಕ್ಕೆ ಒಂದು ಸಿನಿಮಾ ಮಾಡಲು ಬಯಸುತ್ತೇನೆ. ನಾನು ಇಷ್ಟಪಡುವ ನಟನೆಯ ಪ್ರಕ್ರಿಯೆಯನ್ನು ಆನಂದಿಸಿ ಮತ್ತು ನನ್ನ ಜೀವನವನ್ನು ನನ್ನಂತೆಯೇ ಸಮತೋಲನಗೊಳಿಸಬೇಕು, ಕುಟುಂಬಕ್ಕೆ ಸಮಯ ನೀಡಬೇಕು' ಎಂದು ಹೇಳಿದ್ದಾರೆ.
ಯಾವ ರೀತಿಯ ಜೀವನ ನಡೆಸಲು ಬಯುಸುತ್ತಾರೆ ಎನ್ನುವ ಬಗ್ಗೆಯೂ ಬಹಿರಂಗ ಪಡಿಸಿದರು. 'ನಾನು ಜೀವನವನ್ನು ನಡೆಸುತ್ತಿರುವ ರೀತಿ ನನಗೆ ತುಂಬಾ ಸಂತೋಷವಿದೆ. ನಾನು ನಟಿನಾಗಿ, ಸಾರ್ವಜನಿಕ ವ್ಯಕ್ತಿಯಾಗಿ, ತಾಯಿಯಾಗಿ, ಹೆಂಡತಿಯಾಗಿ ಯಾರಿಗೂ ಒಂದು ಅಂಶವನ್ನು ಸಾಬೀತುಪಡಿಸಲು ಬಯಸುವುದಿಲ್ಲ. ನನಗೆ ಸಂತೋಷ ನೀಡುವ ಮತ್ತು ನನಗೆ ಅರ್ಥವಾಗುವಂತಹ ಕೆಲಸಗಳನ್ನು ಮಾಡಲು ನಾನು ಬಯಸುತ್ತೇನೆ. ನನಗೆ ಸರಿ ಎನಿಸುವ ಕೆಲಸಗಳನ್ನು ಮಾಡುತ್ತೇನೆ' ಎಂದು ಹೇಳಿದರು.
ಮೊದಲ ಬಾರಿಗೆ 'ಕಾನ್' ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ರಿಯಾಕ್ಷನ್ ಹೀಗಿತ್ತು
ಅನುಷ್ಕಾ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಅತಂಕ ಮೂಡಿಸಿದೆ. ಅನುಷ್ಕಾ ನಟನೆಯಿಂದ ದೂರ ಇರುವ ಬಗ್ಗೆ ಸುಳಿವು ನಿಡಿದ್ರಾ ಅನುಮಾನ ಕಾಡಿದೆ. ಅನುಷ್ಕಾ ಮತ್ತಷ್ಟು ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಝೀರೋ ಸಿನಿಮಾ ಬಳಿಕ ಅನುಷ್ಕಾ ಮತ್ತೆ ತೆರೆಮೇಲೆ ಬಂದಿಲ್ಲ. ಹಾಗಾಗಿ ಅನುಷ್ಕಾ ಅವರನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಶಾಕ್ ನೀಡಿದೆ.
Virat Kohli: ಅನುಷ್ಕಾಗೂ ಮೊದಲು ಕೊಹ್ಲಿ ಲೈಫ್ಗೆ ಎಂಟ್ರಿ ಕೊಟ್ಟ ಐವರು ಲಲನೆಯರು ಇವರು
ಅನುಷ್ಕಾ ನಟನೆಯ ಚಕ್ದಾ ಎಕ್ಸ್‌ಪ್ರೆಸ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾಗೆ ಸಹಿ ಮಾಡಿ ವರ್ಷಗಳೇ ಆಗಿದೆ. ಶೂಟಿಂಗ್ ಕೂಡ ಮುಗಿದಿದೆ. ಆದರೆ ಇನ್ನೂ ಸಿನಿಮಾ ರಿಲೀಸ್ ಆಗಿಲ್ಲ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಪ್ ಡೇಟ್ ಇಲ್ಲ. ಈ ಸಿನಿಮಾ ಬಳಿಕ ಅನುಷ್ಕಾ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮುಂದಿನ ಸಿನಿಮಾಗೆ ಸಹಿ ಮಾಡುತ್ತಾರಾ ಅಥವಾ ನಟನೆಯಿಂದ ದೂರ ಸರಿಯುತ್ತಾರಾ ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.