
ಸಲ್ಮಾನ್ ಖಾನ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇವರ ಜೊತೆ ಹತ್ತಾರು ನಟಿಯರ ಹೆಸರುಗಳು ಥಳಕು ಹಾಕಿಕೊಂಡಿದ್ದರೂ, ಇವರಿನ್ನೂ ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವವರು. ವಯಸ್ಸು 58 ಆದರೂ ಇಂದಿಗೂ ಕೆಲ ನಟರಂತೆ ಚಿಕ್ಕವಯಸ್ಸಿನ ಹುಡುಗಿಯರ ಜೊತೆ ರೊಮ್ಯಾನ್ಸ್ ಮಾಡಲು ಹಿಂದೆ ಬಿದ್ದಿಲ್ಲ. ಹೆಣ್ಣುಮಕ್ಕಳನ್ನು ಪರದೆಯ ಮೇಲೆ ಕಿಸ್ ಮಾಡಲ್ಲ, ಹಗ್ ಮಾಡಲ್ಲ ಎಂದೆಲ್ಲಾ ಹೇಳುವ ಮೂಲಕ ಬಾಲಿವುಡ್ನ ಅದ್ಭುತ ನಟ, ಮಾನವೀಯ ಕಳಕಳಿಯುಳ್ಳ ನಟ, ಹೆಣ್ಣುಮಕ್ಕಳ ಬಗ್ಗೆ ವಿಶೇಷ ಕಾಳಜಿ ಇರುವ ನಟ ಎಂದೆಲ್ಲಾ ಬಿರುದು ಪಡೆದುಕೊಂಡಿದ್ದಾರೆ.
ಆದರೆ ಇದೀಗ ಮಾತಿನ ಭರದಲ್ಲಿ ಅತ್ಯಾಚಾರ ಸಂತ್ರಸ್ತೆಯರನ್ನು ಲೇವಡಿ ಮಾಡುವಂಥ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದಾರೆ. ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಸಲ್ಮಾನ್ ಖಾನ್ರ ಹೇಳಿಕೆಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಸಲ್ಮಾನ್ ಖಾನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ವಿರುದ್ಧ ಅನುಷ್ಕಾ ಶರ್ಮಾ ಹೇಳೀರುವ ಹಳೆಯ ವಿಡಿಯೋ ಇದಾಗಿದೆ.
ಕರೀನಾ ಕಪೂರ್ ಖಾನ್ರನ್ನು ಕಿಡ್ನಾಪ್ ಮಾಡಿದ ಅರ್ಜುನ್ ಕಪೂರ್! ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಸುಸ್ತು...
ಅಂದಹಾಗೆ, ಸಲ್ಮಾನ್ ಖಾನ್ ಈ ಹೇಳಿಕೆ ನೀಡಿರುವುದು 2016ರಲ್ಲಿ ಬಿಡುಗಡೆಯಾದ ಸುಲ್ತಾನ್ ಚಿತ್ರದ ಕುರಿತು. ಇದರಲ್ಲಿ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ನಟಿಸಿದ್ದಾರೆ. ಇದರಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್ ದೃಶ್ಯಗಳು ಇವೆ. ಇದರ ಶೂಟಿಂಗ್ ಮಾಡುವ ಸಮಯದಲ್ಲಿ, ತಮಗೆ ಆಗಿರುವ ಕಷ್ಟದ ಕುರಿತು ಅವರು ಹೇಳುವ ಸಂದರ್ಭದಲ್ಲಿ ಹಲವು ಬಾರಿ ಕುಸ್ತಿ ದೃಶ್ಯಗಳನ್ನು ಚಿತ್ರೀಕರಿಸಿದ ನಂತರ ನನಗೆ ಅತ್ಯಾಚಾರಕ್ಕೊಳಗಾದ ಮಹಿಳೆ ನಡೆದು ಹೋಗುವಂತೆ ಭಾಸವಾಯಿತು ಎಂದಿದ್ದಾರೆ. ಯಾವುದಕ್ಕೆ ಯಾವ ಉದಾಹರಣೆ ಕೊಡಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ಲದೇ ಸಲ್ಮಾನ್ ಖಾನ್ ಭಾರಿ ವಿರೋಧ ಕಟ್ಟಿಕೊಂಡಿದ್ದಾರೆ. ಅಷ್ಟಕ್ಕೂ ಆಗ ಚಿತ್ರದ ಪ್ರಚಾರದ ವೇಳೆ ನಟ ಈ ಹೇಳಿಕೆ ನೀಡಿದ್ದರು.
ಚಿತ್ರಕ್ಕಾಗಿ ಕುಸ್ತಿ ದೃಶ್ಯಗಳು ಸಾಕಷ್ಟು ಇರುವ ಹಿನ್ನೆಲೆಯಲ್ಲಿ ನಾನು ಕಠಿಣ ತರಬೇತಿಯನ್ನು ಪಡೆದೆ. ನನ್ನಂಥ ವ್ಯಕ್ತ 120 ಕಿಲೋ ಭಾರಿ ತೂಕದ ವ್ಯಕ್ತಿಯ ಜೊತೆ ಹಲವು ಗಂಟೆಗಳ ಕಾಲ ಸೆಣಸಾಡಬೇಕಿತ್ತು. ಆ ಸಮಯದಲ್ಲಿ ಕುಸ್ತಿಯ ಕಣದಿಂದ ಹೋರಾಟ ಮಾಡಿ ಅಲ್ಲಿಂದ ಹೊರಕ್ಕೆ ಬರುವ ಸಮಯದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಹೊರನಡೆದಂತೆಯೇ ಇತ್ತು ಎಂದಿದ್ದಾರೆ. ನಾನು ನೇರವಾಗಿ ನಡೆಯಲು ಸಾಧ್ಯವಾಗಲಿಲ್ಲ. ರೇಪ್ ಸಂತ್ರಸ್ತೆ ರೀತಿ ನನ್ನ ಸ್ಥಿತಿ ಇತ್ತು ಎಂದಿದ್ದಾರೆ. ಈ ಬಗ್ಗೆ ಇದೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅನುಷ್ಕಾ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥ ಹೇಳಿಕೆ ತುಂಬಾ ಅಸಭ್ಯವಾಗಿದೆ. ನಾಯಕರಾದವರಿಗೆ ಏನು ಮಾತನಾಡಬೇಕು ಎನ್ನುವ ಬಗ್ಗೆ ಕನಿಷ್ಠ ಪ್ರಜ್ಞೆ ಇರಬೇಕು ಎಂದಿದ್ದಾರೆ. ಸಲ್ಮಾನ್ ಇನ್ನೂ ತನ್ನ 'ಫಿಲ್ಟರ್ ಇಲ್ಲದ' ಮನೋಭಾವ ಹೊಂದಿದ್ದಾರೆ. ಇದೇ ಕಾರಣಕ್ಕೆ ಹಲವು ಬಾರಿ ತೊಂದರೆಗೆ ಒಳಗಾಗುತ್ತಾರೆ. ಆದರೆ ಅವರ ಅಂತಸ್ತಿನ ಪ್ರಸಿದ್ಧ ವ್ಯಕ್ತಿಯಿಂದ ಇಂಥ ಮಾತು ನಿರೀಕ್ಷಿಸಲ್ಪಡುವುದಿಲ್ಲ ಎಂದಿದ್ದಾರೆ.
ಶೇಕ್ ಹ್ಯಾಂಡ್ ಮಾಡುವುದೂ ಹರಾಮ್? ಕೈ ಮುಂದೆ ಮಾಡಿದ ರಾಜಕುಮಾರನಿಂದ ಬಿಸಿಬಿಸಿ ಚರ್ಚೆ ಶುರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.