ಕರೀನಾ ಕಪೂರ್​ ಖಾನ್​ರನ್ನು ಕಿಡ್ನಾಪ್​ ಮಾಡಿದ ಅರ್ಜುನ್​ ಕಪೂರ್​! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಸುಸ್ತು...

Published : Oct 07, 2024, 10:29 PM ISTUpdated : Oct 07, 2024, 10:37 PM IST
ಕರೀನಾ ಕಪೂರ್​ ಖಾನ್​ರನ್ನು ಕಿಡ್ನಾಪ್​ ಮಾಡಿದ ಅರ್ಜುನ್​ ಕಪೂರ್​! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಸುಸ್ತು...

ಸಾರಾಂಶ

 ಕರೀನಾ ಕಪೂರ್​ ಖಾನ್​ರನ್ನು ಕಿಡ್ನಾಪ್​ ಮಾಡಿದ ಅರ್ಜುನ್​ ಕಪೂರ್​! ಬಿಡಿಸಲು ಹೋಗುವ ರಣವೀರ್​ ಸಿಂಗ್​. ಏನಿದು ಹೊಸ ವಿಷ್ಯ?    

ರಾಮಾಯಣದ ಕಥೆಯನ್ನಾಧರಿಸಿ ಅದೆಷ್ಟೋ ಚಿತ್ರಗಳು ಬಂದು ಹೋಗಿವೆ. ಇನ್ನೂ ಕೆಲವು ಚಿತ್ರಗಳು ಬರುವುದು ಇದೆ. ಅದರ ಮಧ್ಯೆಯೇ ಈಗ ಆಧುನಿಕ ರಾಮಾಯಣದ ಚಿತ್ರವೊಂದರ ಟ್ರೇಲರ್​ ಬಿಡುಗಡೆಯಾಗಿದೆ. ಅದೇ ಸಿಂಘಂ ಅಗೇನ್​.  ಅಜಯ್ ದೇವಗನ್ ಇಲ್ಲಿ ಆಧುನಿಕ ರಾಮನ ಪಾತ್ರವನ್ನು ನಿರ್ವಹಿಸಿದ್ದರೆ ಕರೀನಾ ಕಪೂರ್ ಖಾನ್ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾವಣನಾಗಿ ಅರ್ಜುನ್​ ಕಪೂರ್​ ನಟಿಸಿದ್ದಾರೆ. ಅಂದಹಾಗೆ ಇದರ ಹೆಸರಿಗೂ ರಾಮಾಯಣಕ್ಕೂ ಸಂಬಂಧವಿಲ್ಲ. ಸಿಂಘಂ ಅಗೇನ್​ ಹೆಸರು ನೋಡಿ ಇಂದು ಬಿಡುಗಡೆಯಾಗಿರುವ ಟ್ರೇಲರ್​ ನೋಡಿದ ಫ್ಯಾನ್ಸ್​ ಫುಲ್​ ಸುಸ್ತು ಹೊಡೆದಿದ್ದಾರೆ. ಏಕೆಂದರೆ ಇದರಲ್ಲಿ ಮತ್ತದೇ ರಾಮಾಯಣ ಕಥೆ!

ಹೌದು. ರಾಮಾಯಣದ ಕಥೆಯನ್ನು ಇಟ್ಟುಕೊಂಡು ರೋಹಿತ್ ಶೆಟ್ಟಿ ಅವರು ‘ಸಿಂಘಂ ಅಗೇನ್​’ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಜಯ್​ ದೇವಗನ್​, ರಣವೀರ್​ ಸಿಂಗ್​, ಕರೀನಾ ಕಪೂರ್​ ಖಾನ್​, ಅರ್ಜುನ್​ ಕಪೂರ್​, ಅಕ್ಷಯ್​ ಕುಮಾರ್​, ದೀಪಿಕಾ ಪಡುಕೋಣೆ ಮುಂತಾದವರು ಅಭಿನಯಿಸಿದ್ದಾರೆ.  ದೀಪಾವಳಿಯಂದು ಅಂದರೆ ನವೆಂಬರ್​ 1ರಂದು ‘ಸಿಂಗಂ ಅಗೇನ್​’ ಸಿನಿಮಾ ತೆರೆಕಾಣಲಿದೆ. ಇಂದು ಟ್ರೇಲರ್​ ಬಿಡುಗಡೆಯಾಗಿದ್ದು, ಅದು ಸಂಪೂರ್ಣ ರಾಮಾಯಣದ ಕಥೆ ಇರುವುದನ್ನು ನೋಡಬಹುದು.  

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ

ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಾನೆ. ಅಂದರೆ ಅರ್ಜುನ್​ ಕಪೂರ್​, ಕರೀನಾಳನ್ನು ಕಿಡ್ನಾಪ್​ ಮಾಡುತ್ತಾರೆ.  ರಾಮನಾಗಿ ಅಜಯ್​ ದೇವಗನ್​ ನಟಿಸಿದ್ದಾರೆ. ವಿಲನ್​ ಅರ್ಜುನ್​ ಕಪೂರ್​ರನ್ನು ರಾವಣನಿಗೆ ಹೋಲಿಕೆ ಮಾಡಿದ್ದು, ಶ್ರೀಲಂಕಾದಲ್ಲಿ ಇರುವ ನಟೋರಿಯಸ್​ ವ್ಯಕ್ತಿಯಾಗಿ  ಅಭಿನಯಿಸಿದ್ದಾರೆ. ನಾಯಕಿಯನ್ನು ವಿಲನ್​ ಅಪಹರಣ ಮಾಡಿದ ಬಳಿಕ ಆಕೆಯನ್ನು ಮರಳಿ ಕರೆದುಕೊಂಡು ಬರಲು ಲಂಕೆಗೆ ಸಿಂಘಂ ಅರ್ಥಾತ್​ ನಾಯಕ ಅಜಯ್​ ದೇವಗನ್ ಪ್ರಯಾಣ ಮಾಡುತ್ತಾನೆ. ಅವನಿಗೆ ಸಾಥ್​ ಕೊಡುವುದು ಲಕ್ಷ್ಮಣನಾಗಿ ನಟಿಸಿರೋ ಟೈಗರ್​ ಶ್ರಾಫ್​, ಆಂಜನೇಯನ ಪಾತ್ರ ಹೋಲುವ ರಣವೀರ್​ ಸಿಂಗ್​ ಮತ್ತು ಜಟಾಯು ರೀತಿಯ ಅಕ್ಷಯ್​ ಕುಮಾರ್​. ಈ ರೀತಿ ಕಥೆಯನ್ನು ‘ಸಿಂಗಂ ಅಗೇನ್’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್​ ಶೆಟ್ಟಿ ತೋರಿಸಲಿದ್ದಾರೆ.

ಈಗಷ್ಟೇ ಅಮ್ಮನಾಗಿರುವ ದೀಪಿಕಾ ಪಡುಕೋಣೆಯ ಭರ್ಜರಿ ಆ್ಯಕ್ಷನ್ ಇದರಲ್ಲಿ ನೋಡಬಹುದು. ​ ಲೇಡಿ ಸಿಂಗಂ ಆಗಿ ಅಬ್ಬರಿಸಿದ್ದಾರೆ. ಸದ್ಯ ಇವರ ಪಾತ್ರದ ಪರಿಚಯವನ್ನೂ ನೋಡಿರುವ ಅನೇಕರು ದೀಪಿಕಾ ಪಡುಕೋಣೆ ವಿಭೀಷಣನ ಪಾತ್ರವನ್ನು ನಿರ್ವಹಿಸಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಪ್ರಮೋಷನ್​ಗೆ ಬಂದಿರುವ ಕರೀನಾ ಕಪೂರ್​, ಸೀತಾ ಇಲ್ಲದೇ ರಾಮಾಯಣ ಇಲ್ಲ, ರಕ್ಷಿತ್​ ಶೆಟ್ಟಿ ಸಿನಿಮಾದಲ್ಲಿ ಕರೀನಾ ಕಪೂರ್ ಇಲ್ಲದೇ ಇರಲು ಸಾಧ್ಯವಿಲ್ಲ ಎಂಬ ಡೈಲಾಗ್​ ಹೇಳಿದ್ದಾರೆ. ​

ನನ್ನದು ಬಚ್ಚನ್​ ಫ್ಯಾಮಿಲಿ, ಖಾನ್ ಫ್ಯಾಮಿಲಿಯಲ್ಲ! ಕರಣ್​ ಜೋಹರ್​ ವಿರುದ್ಧ ಐಶ್ವರ್ಯ ಗರಂ ಆಗಿದ್ಯಾಕೆ?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?