ಫೇಮಸ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಹನಿಮೂನ್ ಮೂಡ್ ನಲ್ಲಿದ್ದಾರೆ. ಮಾಲ್ಡೀವ್ಸ್ ನಲ್ಲಿ ಪತ್ನಿ ಜೊತೆ ಜಾಲಿಯಾಗಿರುವ ಅವರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಸ್ಯಾಂಡಲ್ವುಡ್ನ ಪ್ರಸಿದ್ಧ ಡೈರೆಕ್ಟರ್ ತರುಣ್ ಸುಧೀರ್ (Sandalwood fame director Tarun Sudhir) ಹಾಗೂ ನಟಿ ಸೋನಲ್ ಮೊಂಥೆರೋ (actress Sonal Monthero) ಹನಿಮೂನ್ ಪಿರಿಯಡ್ (honeymoon period) ಎಂಜಾಯ್ ಮಾಡ್ತಿದ್ದಾರೆ. ನವ ದಂಪತಿಗೆ ಸ್ವರ್ಗವಾಗಿರುವ, ರೋಮ್ಯಾನ್ಸ್ ಬಿಸಿ ಹೆಚ್ಚಿಸುವ ಮಾಲ್ಡೀವ್ಸ್ (Maldives) ನಲ್ಲಿ ಈ ಫೇಮಸ್ ಜೋಡಿ ಕೈ ಕೈ ಹಿಡಿದು ಸುತ್ತಾಡುತ್ತಿದೆ. ಸೋನಲ್ ಮೊಂಥೆರೋ, ತಮ್ಮ ಹನಿಮೂನ್ ಸುಂದರ ಕ್ಷಣದ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನಲ್. ನನ್ನ ವ್ಯಕ್ತಿಯೊಂದಿಗೆ ಸ್ವರ್ಗವನ್ನು ಹುಡುಕುತ್ತಿದ್ದೇನೆ ಎಂದು ಶೀರ್ಷಿಕೆ ಹಾಕಿದ್ದಾರೆ.
ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ, ಆಗಸ್ಟ್ 11ರಂದು ಪೂರ್ಣಿಮಾ ಪ್ಯಾಲೇಸ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿರಿಯರ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಸ್ಯಾಂಡಲ್ವುಡ್ ಸಾಕ್ಷ್ಯವಾಗಿತ್ತು. ಅನೇಕ ಸೆಲೆಬ್ರಿಟಿಗಳು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು, ಜೋಡಿಯನ್ನು ಹರಸಿದ್ದರು. ಮದುವೆಯ ಫೋಟೋ, ವಿಡಿಯೋ ನೆಟ್ಟಿಗರನ್ನು ಸೆಳೆದಿತ್ತು. ಇದಾದ್ಮೇಲೆ ತರುಣ್ ಸುಧೀರ್ ಹನಿಮೂನ್ ಗೆ ಎಲ್ಲಿಗೆ ಹೋಗ್ತಾರೆ ಎಂಬ ಪ್ರಶ್ನೆ ಫ್ಯಾನ್ಸ್ ಕಾಡಿತ್ತು. ಅದಕ್ಕೆ ಮಾಲ್ಡೀವ್ಸ್ ಎನ್ನುವ ಉತ್ತರ ಸಿಕ್ಕಿದ್ರೂ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ನಂತ್ರ ದುಬೈಗೆ ಹೋಗಿತ್ತು ಜೋಡಿ. ಮುದ್ದಾದ ಮಗುವಿನ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದ ತರುಣ್ ಹಾಗೂ ಸೋನಾಲಿ, ಹನಿಮೂನ್ ಸ್ಥಳ ಬದಲಿಸಿದ್ರಾ ಎಂಬ ಪ್ರಶ್ನೆ ಕಾಡುವಂತೆ ಮಾಡಿದ್ರು. ಆದ್ರೀಗ ಮಾಲ್ಡೀವ್ಸ್ ನಲ್ಲಿರುವ ಅವರ ಫೋಟೋ ಹಾಗೂ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
undefined
ರಾಕಿಂಗ್ ಸ್ಟಾರ್ ಡಿಪ್ರೆಷನ್ ಬಗ್ಗೆ ಡೈರೆಕ್ಟರ್ ಶ್ರುತಿ ನಾಯ್ಡುಗೇಕೆ ಭಯವಿತ್ತು?
ತರುಣ್ ಸುಧೀರ್ ಕೂಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸಮುದ್ರದ ಅಲೆಗಳನ್ನು ನೀವು ನೋಡ್ಬಹುದು. ಇಬ್ಬರ ಹೊಟೇಲ್ ಸುತ್ತಾಟ, ಊಟ, ಸೈಕಲ್ ಜೊತೆ ಸುಂದರ ಪರಿಸರವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಸೋನಲ್ ಹಾಗೂ ತರುಣ್ ಹನಿಮೂನ್ ವಿಡಿಯೋಗೆ ಸಾಕಷ್ಟು ಕಮೆಂಟ್ಸ್ ಬಂದಿದೆ. ಬ್ಯೂಟಿ ಇರುವ ಹುಡುಗಿ, ಹಣವಿರುವ ಹುಡುಗ, ಸಮಾಜದಲ್ಲಿ ಇವರಿಬ್ಬರದ್ದು ಬೆಸ್ಟ್ ಜೋಡಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಹನಿಮೂನ್ ಸಮಯವನ್ನು ಎಂಜಾಯ್ ಮಾಡಿ ಅಂತ ಸಲಹೆ ನೀಡಿದ್ದಾರೆ. ಇನ್ನು ತರುಣ್ ಸುಧೀರ್ ರಿಯಾಕ್ಷನ್ ನೋಡಿ, ಈಗ್ಲೇ ಬೋರಾಯ್ತಾ ಎನ್ನುತ್ತಿದ್ದಾರೆ ಟ್ರೋಲರ್ಸ್. ವಿಡಿಯೋದಲ್ಲಿ, ತರುಣ್, ಸೋನಲ್ ಮಾತಿಗೆ ರಿಯಾಕ್ಷನ್ ನೀಡ್ತಿಲ್ಲ, ನಗ್ತಿಲ್ಲ, ಫೋಟೋಕ್ಕೆ ಫೋಸ್ ನೀಡ್ತಿಲ್ಲ. ಬೆಳಕಿನ ಕವಿತೆ ಜೊತೆ ದುಡುಕಿ ನಿರ್ಧಾರ ತೆಗೆದುಕೊಂಡು ಬಿಟ್ಟೆ ಅನ್ನೋ ಥರ ಇದೆ ಮುಖ ಭಾವ ಎಂದಿದ್ದಾರೆ ನೆಟ್ಟಿಗರು.
ಇನ್ನು ಸೋನಲ್ ತಾಳಿ ಬಗ್ಗೆಯೂ ಫ್ಯಾನ್ಸ್ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ತಾಳಿ ಬೇಕು, ಸಂಪ್ರದಾಯ ಅಂದ್ರೆ. ಇನ್ನೊಬ್ಬರು ಅವರ ಸ್ಟೈಲ್ ನಮಗ್ಯಾಕೆ ಎಂದಿದ್ದಾರೆ. ತರುಣ್, ಮಾಲ್ಡೀವ್ಸ್ ಗೆ ಹೋಗಿರೋದನ್ನು ಆಕ್ಷೇಪ ಮಾಡಿದವರೂ ಇಲ್ಲಿದ್ದಾರೆ. ಮಾಲ್ಡೀವ್ಸ್ ಬದಲು ಅಂಡಮಾನ್ ಗೆ ಹೋಗ್ಬಹುದಿತ್ತು ಅಂತ ಫ್ಯಾನ್ಸ್ ಸಲಹೆ ಕೂಡ ನೀಡಿದ್ದಾರೆ.
ಕನ್ಯೆಯಾಗಿ ಇಟ್ಟುಕೊಂಡ ಸೇಡನ್ನು ಮದುವೆಯಾಗಿ ತೀರಿಸಿಕೊಂಡ ಸೋನಾಕ್ಷಿ; ಗಂಡನ ಗತಿ ಹರೋಹರ
ತರುಣ್, ತಮ್ಮ ಪತ್ನಿಯ ಬೀಚ್ ಫೋಟೋ ಸೇರಿದಂತೆ ಹನಿಮೂನ್ ಫೋಟೋಗಳನ್ನು ಪೋಸ್ಟ್ ಮಾಡ್ತಿದ್ದಾರೆ. ಕನ್ನಡಿ ಮುಂದೆ ನಿಂತಿರುವ ಸೋನಲ್ ಫೋಟೋ ಹಂಚಿಕೊಂಡು ಡೇಟ್ ನೈಟ್ ಅಂತ ಶೀರ್ಷಿಕೆ ಹಾಕಿದ್ದಾರೆ. ಮರಳಿನಲ್ಲಿ ಹಸ್ತ ಮೂಡಿಸಿ, ಅದ್ರ ಮೇಲೆ ಉಂಗುರ ಇಟ್ಟಿರುವ ಇನ್ನೊಂದು ಸುಂದರ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ದುಬೈನಲ್ಲಿ ಐಐಎಫ್ ಎ ಅವಾರ್ಡ್ ಪಡೆದು ಖುಷಿಯಲ್ಲಿರುವ ತರುಣ್, ಕೆಲಸಕ್ಕೆ ಬ್ರೇಕ್ ನೀಡಿ, ಪತ್ನಿ ಜೊತೆ ಕಡಲತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ.