ಸಲ್ಮಾನ್​ ಖಾನ್​ ಹೆಸರಲ್ಲಿ ನಡೀತಿದೆ ಭಾರಿ ವಂಚನೆ: ನಟ ಕೊಟ್ಟ ಎಚ್ಚರಿಕೆಯೇನು?

By Suvarna News  |  First Published Jul 17, 2023, 6:12 PM IST

ಕಲಾವಿದರ ಆಯ್ಕೆ ಕುರಿತು ಸಲ್ಮಾನ್​ ಖಾನ್​ ಹೆಸರಲ್ಲಿ ಭಾರಿ ವಂಚನೆ ನಡೆಯುತ್ತಿದ್ದು, ಈ ಬಗ್ಗೆ ಖುದ್ದು ನಟ ಎಚ್ಚರಿಕೆ ಸಂದೇಶ ನೀಡಿದ್ದಾರೆ. 
 


ಸಾಮಾಜಿಕ ಜಾಲತಾಣಗಳ (Social Media) ಆ್ಯಕ್ಟೀವ್​ ಆದಷ್ಟು ವಂಚನೆಗಳು ಅದೇ ಪ್ರಮಾಣದಲ್ಲಿ ನಡೆಯುತ್ತಲೇ ಇವೆ. ಯಾರದ್ದೋ ಹೆಸರು ಫೇಕ್ ಐಡಿ ಕ್ರಿಯೇಟ್​ ಮಾಡಿ ಮೋಸ ಮಾಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಚಿಕ್ಕಪುಟ್ಟ ಜನರ ಹೆಸರಿನಲ್ಲಿ ಫೇಕ್​ ಐಡಿ ಮಾಡುವುದೇ ಹೆಚ್ಚಾಗಿರುವ ಈ ಸಮಯದಲ್ಲಿ ಇನ್ನು ಸೆಲೆಬ್ರಿಟಿಗಳನ್ನು ಇವರು ಬಿಟ್ಟಾರೆಯೇ? ಬಾಲನಟಿ ವಂಶಿಕಾ ಅಂಜನಿ ಕಶ್ಯಪ ಅವರ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಮುನ್ನೆಲೆಗೆ ಬಂದ ಬೆನ್ನಲ್ಲೇ ಇದೀಗ ನಟ ಸಲ್ಮಾನ್​ ಖಾನ್​ ಹೆಸರನಲ್ಲಿ ಫೇಕ್​ ಐಡ್​ ಕ್ರೀಯೇಟ್​ ಮಾಡಿ ಮೋಸ ಮಾಡುತ್ತಿರುವ ಸುದ್ದಿ ಬಹಿರಂಗಗೊಂಡಿದೆ.  ಸಲ್ಮಾನ್​ ಖಾನ್​ ಅವರ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಮೋಸ ಮಾಡುತ್ತಿರುವುದು ತಿಳಿದುಬಂದಿದೆ. 

ಈ ಹಿನ್ನೆಲೆಯಲ್ಲಿ  ಸಲ್ಮಾನ್​ ಖಾನ್ (Salman Khan)​ ಮತ್ತು ಅವರ ನಿರ್ಮಾಣ ಸಂಸ್ಥೆ ಸಲ್ಮಾನ್​ ಖಾನ್​ ಫಿಲ್ಮ್ಸ್​  ಹೆಸರು ಬಳಸಿಕೊಂಡು  ಹಣ ಕೀಳುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಖುದ್ದು ಸಲ್ಲು ಭಾಯಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.  ಸಲ್ಮಾನ್​ ಖಾನ್​ ಅವರ ಒಡೆತನದ ‘ಸಲ್ಮಾನ್​ ಖಾನ್​ ಫಿಲ್ಮ್ಸ್​ಮೂಲಕ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗದೆ. ಅಷ್ಟಕ್ಕೂ ಇವರ ಹೆಸರನ್ನು ಬಳಸಿಕೊಂಡು ಮಾಡುತ್ತಿರುವ ಕೆಲಸವೇನೆಂದರೆ ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವುದು!

Tap to resize

Latest Videos

ಐಶ್ವರ್ಯ ರೈಗಾಗಿ ಶಾರುಖ್​-ಸಲ್ಮಾನ್​ 5 ವರ್ಷಗಳ ಭಯಂಕರ ಶತ್ರುತ್ವ; ಬಿರಿಯಾನಿ ಮೂಲಕ ಪ್ಯಾಚಪ್​!

ಹೌದು. ಸಲ್ಮಾನ್​ ಖಾನ್​ ಫಿಲ್ಮ್ಸ್​ ಕಂಪೆನಿಯ ಹೆಸರನ್ನು ಹೇಳಿಕೊಂಡು ಫೇಕ್​ ಐಡಿ ಕ್ರಿಯೇಟ್​ ಮಾಡಲಾಗಿದ್ದು, ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಹಣ ಕೀಳಲಾಗುತ್ತಿದೆ. ಇದೀಗ ಸಲ್ಮಾನ್​ ಖಾನ್​ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ಸಲ್ಮಾನ್​ ಖಾನ್​ ಅವರಾಗಲಿ, ಸಲ್ಮಾನ್​ ಖಾನ್​ ಫಿಲ್ಮ್ಸ್​ (Salman Khan Films) ಕಂಪನಿ ಕಡೆಯಿಂದಾಗಲಿ ಯಾವುದೇ ಕಲಾವಿದರ ಆಯ್ಕೆ ಸದ್ಯಕ್ಕೆ ನಡೆಯುತ್ತಿಲ್ಲ. ನಮ್ಮ ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಸಲುವಾಗಿ ನಾವು ಯಾವುದೇ ಕಾಸ್ಟಿಂಗ್​ ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ. ಯಾರಿಂದಲಾದರೂ ಈ ಬಗ್ಗೆ ಮೆಸೇಜ್​ ಅಥವಾ ಇ-ಮೇಲ್​ ಬಂದರೆ ದಯವಿಟ್ಟು ನಂಬಬೇಡಿ. ಸಲ್ಮಾನ್​ ಖಾನ್​ ಮತ್ತು ಅವರ ಸಂಸ್ಥೆಯ ಹೆಸರನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟನೆ ನೀಡಲಾಗಿದೆ.

ಅಂದಹಾಗೆ  ಸಲ್ಮಾನ್ ಖಾನ್ ಅವರು ತಮ್ಮ ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಕಂಪೆನಿ ಸಲ್ಮಾನ್ ಖಾನ್ ಫಿಲ್ಮ್ಸ್ ಅನ್ನು 2011 ರಲ್ಲಿ ಸ್ಥಾಪಿಸಿದರು. ಅವರ ತಾಯಿ ಸಲ್ಮಾ ಖಾನ್ (Salma Khan) ಸಹ ಇದರ ಭಾಗವಾಗಿದ್ದಾರೆ. ಸಿನಿಮಾ ನಿರ್ಮಾಣದಿಂದ ಬರುವ ಹಣವನ್ನು ಬೀಯಿಂಗ್ ಹ್ಯೂಮನ್ ಸಂಸ್ಥೆಗೆ ನೀಡುತ್ತಿರುವುದಾಗಿ ನಟ ಹೇಳಿದ್ದಾರೆ.  ನಿತೇಶ್ ತಿವಾರಿ ಮತ್ತು ವಿಕಾಸ್ ಬಹ್ಲ್ ನಿರ್ದೇಶನದ ಚಿಲ್ಲರ್ ಪಾರ್ಟಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರವಾಗಿದೆ.  ಸಲ್ಮಾನ್ ಖಾನ್ ಫಿಲ್ಮ್ಸ್ ಬಜರಂಗಿ ಭಾಯಿಜಾನ್, ಹೀರೋ (Hero), ಟ್ಯೂಬ್‌ಲೈಟ್, ರೇಸ್ 3, ಲವ್‌ಯಾತ್ರಿ, ನೋಟ್‌ಬುಕ್, ಭಾರತ್, ಕಾಗಜ್, ದಬಾಂಗ್ 3, ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಮತ್ತು ಆಂಟಿಮ್: ದಿ ಫೈನಲ್ ಟ್ರುತ್ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ತಯಾರಿಸಿದೆ.    

ಸಲ್ಮಾನ್ ಖಾನ್ ರ ಬಜರಂಗಿ ಭಾಯಿಜಾನ್ ಬಾಲ ನಟಿ ಮುನ್ನಿ ಈಗ ಹೇಗಿದ್ದಾರೆ ನೋಡಿ!

Official Notice! pic.twitter.com/uIvAQgYbwl

— Salman Khan (@BeingSalmanKhan)
click me!