ಆಕೆ I Love You ಎಂದ್ರೆ ಲೈಫ್ ಬರ್ಬಾದ್​​​.... ಸಲ್ಮಾನ್​ ಹೇಳಿಕೆಗೆ ಮಹಿಳೆಯರು ಕಿಡಿಕಿಡಿ

By Suvarna News  |  First Published Apr 15, 2023, 2:55 PM IST

ಹುಡುಗಿ I Love You ಎಂದ್ರೆ ನಿಮ್ಮ ಲೈಫ್​ ನಾಶ ಆದಂತೆ ಎಂದು ಸಲ್ಮಾನ್​ ಖಾನ್ ಹೇಳಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯನ್ನು ಹುಟ್ಟುಹಾಕಿದೆ.
 


ನಟ ಸಲ್ಮಾನ್​ ಖಾನ್​ (Salman Khan) ಬಾಳಲ್ಲಿ ಬಂದಿರೋ ಹುಡುಗಿಯರು ಅದೆಷ್ಟೋ ಮಂದಿ. ಇವರ ಹೆಸರು  ಹಲವು ನಟಿಯರ  ಜೊತೆ ಥಳಕು ಹಾಕಿಕೊಂಡಿದೆ. ಈಗಲೂ ಕೆಲವರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ನಟಿ ಐಶ್ವರ್ಯ ರೈ  ಜೊತೆ ಇವರ ಸಂಬಂಧದ ಬಗ್ಗೆ ಒಂದೊಮ್ಮೆ ಬಿ ಟೌನ್​ನಲ್ಲಿ ಬಹಳ ಚರ್ಚೆಯಾಗಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೇ ನಂಬಲಾಗಿತ್ತು. ಆದರೆ ಆಗಿದ್ದೇ ಬೇರೆ. ಇದರಿಂದಾಗಿಯೇ ನಟ ಸಲ್ಮಾನ್​ ಇದುವರೆಗೂ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಆಗಿಯೇ ಉಳಿದುಕೊಂಡಿದ್ದಾರೆ. ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿರೋ  ನಟ ಸಲ್ಮಾನ್ ಖಾನ್ ಇದೀಗ ತಮ್ಮ ಜೀವನದಲ್ಲಿ ಮಹಿಳೆಯರ ಬಗೆಗಿನ ಕುತೂಹಲದ ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವರ ಹೆಸರು ಹಲವು ನಟಿಯರ ಜೊತೆ ಕೇಳಿ ಬರುತ್ತಿದ್ದರೂ, ತಾವು  ಯಾರೊಂದಿಗೂ ಡೇಟಿಂಗ್ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.  ಈ ವಾರಾಂತ್ಯದ ಕಪಿಲ್ ಶರ್ಮಾ ಶೋನಲ್ಲಿ ಸಲ್ಮಾನ್ ಖಾನ್ ಮುಂಬರುವ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (Kisi Ka Bhai Kisi Ki Jaan) ಪ್ರಚಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಚಿಕೆಯ ಪ್ರೋಮೋದಲ್ಲಿ ನಿರೂಪಕ ಕಪಿಲ್ ಶರ್ಮಾ ಅವರು ಸಲ್ಮಾನ್ ಅವರನ್ನು 'ಜಾನ್ (ಪ್ರೇಮಿ)' ಎಂದು ಕರೆಯುವ ಹಕ್ಕನ್ನು ಯಾರಿಗೆ ನೀಡಿದ್ದೀರಿ  ಎಂದು ಕೇಳಿದ್ದಾರೆ. ಆ ಸಮಯದಲ್ಲಿ ಸಲ್ಮಾನ್​ ಖಾನ್​ ಹೇಳಿದ್ದು ಮಾತ್ರ ಬಹಳ ವೈರಲ್​ ಆಗುತ್ತಿದೆ. ಈ ಮಾತು ಹೇಳಿದ್ದು, ನಟಿ ಐಶ್ವರ್ಯ ರೈಗೇ ಎಂದೂ ಹೇಳಲಾಗುತ್ತಿದೆ.

ಅಷ್ಟಕ್ಕೂ ಸಲ್ಲು ಭಾಯ್​ ಹೇಳಿದ್ದೇನೆಂದರೆ, ಎಲ್ಲರೂ ನಿಮ್ಮನ್ನು ಭಾಯ್ ಎಂದು ಕರೆಯುತ್ತಾರೆ ಆದರೆ ಈ ದಿನಗಳಲ್ಲಿ ನಿಮ್ಮನ್ನು ಜಾನ್ ಎಂದು ಕರೆಯುವ ಹಕ್ಕನ್ನು ಯಾರಿಗೆ ನೀಡಿದ್ದೀರಿ" ಎಂದು ಕಪಿಲ್ (Kapil Sharma) ಸಲ್ಮಾನ್‌ಗೆ ಕೇಳುವ ಮೂಲಕ ಪ್ರೋಮೋದ ವಿಡಿಯೋ ನೋಡಬಹುದು. ಆಗ ಸಲ್ಮಾನ್​ ಖಾನ್​,  ಈ ಹಕ್ಕನ್ನು ನಾನು ಯಾರಿಗೂ ಕೊಡಲು ಬಯಸುವುದಿಲ್ಲ. ಅವರು 'ಜಾನ್' ಎಂದು ಕರೆಯಲು ಪ್ರಾರಂಭಿಸುತ್ತಾರೆ ಮತ್ತು ನಂತರ ನೀನೇ ನನ್ನ ಜೀವ ಎಂದೂ ಹೇಳುತ್ತಾರೆ.  ನಾನು ನಿಮ್ಮೊಂದಿಗೆ ಇರುವುದು ತುಂಬಾ ಸಂತೋಷವಾಗಿದೆ, ನಾನು ತುಂಬಾ ಅದೃಷ್ಟಶಾಲಿ  ಎಂದೆಲ್ಲಾ ಹೇಳುತ್ತಾರೆ.  ಸ್ವಲ್ಪ ಸಮಯ ಕಳೆದ ಮೇಲೆ ಐ ಲವ್​ ಯೂ (I Love You) ಎನ್ನುತ್ತಾರೆ. ಹುಡುಗಿ ಐ ಲವ್ ಯೂ ಅಂದಾಗ ನಿಮ್ಮ ಲೈಫ್ ನಾಶ ಆದಂತೆಯೇ  ಎಂದಿದ್ದಾರೆ  ಸಲ್ಮಾನ್ ಖಾನ್. ನಿನ್ನ ಜೀವನ ಮೊದಲು ನಾಶ ಮಾಡುತ್ತೇನೆ. ನಂತರ ಬೇರೊಬ್ಬನನ್ನು ಕಟ್ಟಿಕೊಂಡು ಅವರ ಜೀವನ ನಾಶಮಾಡುತ್ತೇನೆ ಎಂದೇ ಅರ್ಥ ಎಂದಿದ್ದಾರೆ.

Tap to resize

Latest Videos

ಡಬಲ್​ ವಯಸ್ಸಿನ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್: ಅನುಭವ ಬಿಚ್ಚಿಟ್ಟ Pooja Hegde

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ.  ಸಲ್ಮಾನ್​ ಖಾನ್​ ಈ ಮಾತನ್ನು ನೇರಾನೇರವಾಗಿ ಐಶ್ವರ್ಯ ರೈಗೆ ಹೇಳಿದ್ದು ಎಂದು ನೂರಾರು ಮಂದಿ ಕಮೆಂಟ್​ ಮಾಡುತ್ತಿದ್ದರೆ, ಈ ಮಾತು ಹಲವು ಹುಡುಗಿಯರನ್ನು ಕೆರಳಿಸಿದೆ. ಮಹಿಳೆಯರಿಂದ ಭಾರೀ ವಿರೋಧ ಕೇಳಿಬಂದಿದೆ.   ಆದರೆ ಈ ಷೋನಲ್ಲಿ ಸಲ್ಮಾನ್ ಇಷ್ಟುದ್ದ ಮಾತುಗಳನ್ನು ಹೇಳಬೇಕಾದರೆ ಕಪಿಲ್ ಶರ್ಮಾ, ಅರ್ಚನಾ ಪುರಣ್ ಸಿಂಗ್ (Archa Puran Singh) ಹಾಗೂ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಿರುವುದನ್ನು  ಪ್ರೋಮೋದಲ್ಲಿ ನೋಡಬಹುದು.  ಇದಕ್ಕೆ  ನೀಡಿರುವ ಕ್ಯಾಪ್ಶನ್​ನಲ್ಲಿ ಸಲ್ಮಾನ್ ಖಾನ್ ಅವರು ಎಲ್ಲ ಯುವಕರ ಮನಸಿನ ಮಾತನ್ನು ಹೇಳಿದ್ದಾರೆ ಎಂದು ಬರೆಯಲಾಗಿದ್ದು, ಇದು ಮಹಿಳೆಯರನ್ನು ಮತ್ತಷ್ಟು ಕಿಡಿ ಆಗುವಂತೆ ಮಾಡಿದೆ.  ಬಹಳಷ್ಟು ಪುರುಷರು ಸಲ್ಮಾನ್ ಖಾನ್ ಅವರ ಮಾತಿಗೆ ಸಹಮತ ಸೂಚಿಸಿದ್ದಾರೆ.  ಸಿಂಗಲ್ ಆಗಿರೋದೇ ಬೆಸ್ಟ್​ ಎಂದಿದ್ದಾರೆ, ಜೊತೆಗೆ ನೀವೂ ಸಿಂಗಲ್​ ಆಗಿರಿ ಎಂದು ಸಲ್ಲು ಭಾಯಿಗೆ ಹೇಳಿದ್ದಾರೆ!

ಸಲ್ಮಾನ್​ ಖಾನ್​ ಹಾಗೂ ನಟಿಯರ ಡೀಪ್​ ನೆಕ್ ಡ್ರೆಸ್​​: ಶ್ವೇತಾ ತಿವಾರಿ ಬಿಚ್ಚಿಟ್ಟ ರಹಸ್ಯವೇನು?

 

click me!