ಏನ್ ಜಿಮ್ ಮಾಡ್ತಿದ್ದೀರಾ?, ಪೂಜಾ ಜೊತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಸಲ್ಮಾನ್ ಖಾನ್ ಸಖತ್ ಟ್ರೋಲ್

Published : Feb 14, 2023, 11:50 AM IST
ಏನ್ ಜಿಮ್ ಮಾಡ್ತಿದ್ದೀರಾ?, ಪೂಜಾ ಜೊತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಸಲ್ಮಾನ್ ಖಾನ್ ಸಖತ್ ಟ್ರೋಲ್

ಸಾರಾಂಶ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ಹಾಡು ರಿಲೀಸ್ ಆಗಿದೆ. ಹಾಡಿನಲ್ಲಿ ಸಲ್ಮಾನ್ ಖಾನ್ ಡಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. 

ಬಾಲಿವುಡ್ ಸ್ಟಾರ್ ಸಲ್ಮಾನ್  ಖಾನ್ ಸದ್ಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಸದ್ಯ ಸಿನಿಮಾದ ಪ್ರಮೋಷನ್ ಪ್ರಾರಂಭವಾಗಿದ್ದು ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ.  ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುವ ಜೊತೆಗೆ ಸಲ್ಮಾನ್ ಖಾನ್ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. 

ಸಲ್ಮಾನ್ ಖಾನ್ ಏನೇ ಮಡಿದರೂ ಟ್ರೆಂಡ್ ಆಗುತ್ತದೆ. ಅದರಲ್ಲೂ ಅವರ ಅನೇಕ ಡಾನ್ಸ್ ಸ್ಟೆಪ್‌ಗಳು ವೈರಲ್ ಆಗಿವೆ. 90 ದಶಕದಲ್ಲಿ ಸಲ್ಮಾನ್ ಶರ್ಟ್ ತೆಗೆದು ಡಾನ್ಸ್ ಮಾಡಿ ಟ್ರೆಂಡ್ ಸೃಷ್ಟಿಸಿದ್ರು, ಬಳಿಕ ಬೆಲ್ಟ್ ಮೂಲಕವೇ ಸ್ಟೆಪ್ ಹಾಕಿದ್ರು. ಹಾಗೆ ಸಲ್ಮಾನ್ ಅವರ ಅನೇಕ ಸ್ಟೆಪ್ ಗಳು ಅಭಿಮಾನಿಗಳ ಗಮನ ಸಳೆದಿತ್ತು. ತಮ್ಮದೇ ಹೊಸ ಡಾನ್ಸ್ ಸ್ಟೆಪ್ ಮೂಲಕ ಸಲ್ಮಾನ್ ಟ್ರೆಂಡ್ ಸೃಷ್ಟಿಸುತ್ತಾರೆ. ಆದರೀಗ ಸಲ್ಮಾನ್ ಖಾನ್ ಡಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಹಾಡನ್ನು ನೋಡಿದ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ವರ್ಕೌಟ್, ಜಿಮ್ ಅಲ್ಲ ಎಂದು ಸಲ್ಮಾನ್ ಖಾನ್ ಕಾಲೆಳೆಯುತ್ತಿದ್ದಾರೆ. 

ಭಾರತೀಯರನ್ನು ಮರಿಬೇಡಿ; 'ಬಿಗ್ ಬ್ರದರ್‌'ಗೆ ಹೊರಟ ಬಿಗ್ ಬಾಸ್ ಅಬ್ದು ಕಾಲೆಳೆದ ಸಲ್ಮಾನ್ ಖಾನ್

ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 'ಸನ್ನಿ ಡಿಯೋಲ್ ಅವರ ಅದ್ಭತವಾದ ಕೋರಿಯೋಗ್ರಫಿ' ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಗ, 'ಇದು 1000 ಕೋಟಿ ಕಲೆಕ್ಷನ್ ಪಕ್ಕ' ಎಂದು ಹೇಳಿದ್ದಾರೆ. 'ಡಾನ್ಸ್ ಸ್ಟೆಪ್ ಎಲ್ಲಾ ಖಾಲಿಯಾದಾಗ ಸಲ್ಮಾನ್ ಖಾನ್ ಹೊಸ ಸ್ಟೆಪ್ ಸೃಷ್ಟಿಸುತ್ತಾರೆ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಆಕ್ಷನ್ ದೃಶ್ಯದಲ್ಲಿ ಕಾಮಿಡಿ ದೃಶ್ಯ ಇದ್ದಹಾಗಿದೆ' ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ನಡುವೆ ಜಗಳ? ಇನ್ಶಾಲ್ಲಾ ಚಿತ್ರ ನಿಂತ ಕಾರಣ ಬಯಲು

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಫರ್ಹಾದ್ ಸಾಮ್ಜಿ ನಿರ್ದಏಶನದಲ್ಲಿ ಮೂಡಿಬಂದ ಸಿನಿಮವಾಗಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಏಪ್ರಿಲ್ 21 ಈದ್ ನಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಶೆಹನಾಜ್ ಗಿಲ್, ಪಾಲಕ್ ತಿವಾರಿ, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ ಮತ್ತು ವಿಜೇಂದರ್ ಸಿಂಗ್ ನಟಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಬಳಿಕ ಸಲ್ಮಾನ್ ಮತ್ತು ಪೂಜಾ ನಡುವೆ ಡೇಟಿಂಗ್ ವದಂತಿ ವೈರಲ್ ಆಗಿತ್ತು. ಆದರೆ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?